ಉತ್ತರ ಪ್ರದೇಶದಲ್ಲಿ ನದಿಗೆ ಉರುಳಿದ ಕಾರು ; ಐವರ ಸಾವು
ಲಖಿಂಪುರ ಖೇರಿ, 26 ನವೆಂಬರ್ (ಹಿ.ಸ.) : ಆ್ಯಂಕರ್ : ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರು ಶಾರ್ದಾ ನದಿಯ ಸೈಫನ್‌ಗೆ ಉರುಳಿದ ಪರಿಣಾಮ ನೀರಾವರಿ ಇಲಾಖೆಯ ಐವರು ನೌಕರರು ಸ್ಥಳದಲ್ಲೇ ಸಾವನ್ನಪ್ಪಿದ್ದು ಚಾಲಕನ ಸ್ಥಿತಿ ಗಂಭೀರ
Accident


ಲಖಿಂಪುರ ಖೇರಿ, 26 ನವೆಂಬರ್ (ಹಿ.ಸ.) :

ಆ್ಯಂಕರ್ : ಉತ್ತರ ಪ್ರದೇಶದ ಲಖಿಂಪುರ ಜಿಲ್ಲೆಯಲ್ಲಿ ಮಂಗಳವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದ್ದು, ನಿಯಂತ್ರಣ ತಪ್ಪಿದ ಕಾರು ಶಾರ್ದಾ ನದಿಯ ಸೈಫನ್‌ಗೆ ಉರುಳಿದ ಪರಿಣಾಮ ನೀರಾವರಿ ಇಲಾಖೆಯ ಐವರು ನೌಕರರು ಸ್ಥಳದಲ್ಲೇ ಸಾವನ್ನಪ್ಪಿದ್ದು ಚಾಲಕನ ಸ್ಥಿತಿ ಗಂಭೀರವಾಗಿದೆ.

ಪೋಲೀಸ್ ಮಾಹಿತಿ ಪ್ರಕಾರ, ಮೃತರಾದ ಜಿತೇಂದ್ರ, ಘನಶ್ಯಾಮ್, ಅಜಿಮುಲ್ಲಾ, ಲಾಲ್ಜಿ ಮತ್ತು ಸುರೇಂದ್ರ ಎಲ್ಲರು ನೀರಾವರಿ ಇಲಾಖೆಯ ನೌಕರರು—ಲಖಿಂಪುರದಲ್ಲಿನ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು. ಗಿರ್ಜಾಪುರಿ ಬ್ಯಾರೇಜ್ ಹತ್ತಿರ ಚಾಲಕ ನಿದ್ರೆಗೆ ಜಾರಿದ ಪರಿಣಾಮ ಕಾರು ನಿಯಂತ್ರಣ ತಪ್ಪಿ ನದಿಯ ಆಳಕ್ಕೆ ಬಿದ್ದಿದೆ.

ಘಟನೆಯ ನಂತರ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ರಾತ್ರಿಯಿಡಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಐದು ಜನರ ಶವಗಳನ್ನು ಹೊರತೆಗೆಯಲಾಗಿದೆ.

ಘಟನೆಯ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆಳವಾದ ದುಃಖ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುವಿಗೆ ಉತ್ತಮ ಚಿಕಿತ್ಸೆ ಹಾಗೂ ಕುಟುಂಬಗಳಿಗೆ ಸಾಧ್ಯವಾದ ಎಲ್ಲಾ ನೆರವು ಒದಗಿಸುವಂತೆ ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande