
ನವದೆಹಲಿ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾರತೀಯ ರೈಲ್ವೆಯಲ್ಲಿ ನೀಡಲಾಗುವ ಊಟದಲ್ಲಿ ಕೇವಲ ಹಲಾಲ್ ಪ್ರಮಾಣಿತ ಮಾಂಸವೇ ಬಳಕೆಯಾಗುತ್ತಿದೆ ಎಂಬ ದೂರನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ರೈಲ್ವೆ ಮಂಡಳಿಗೆ ನೋಟಿಸ್ ಜಾರಿ ಮಾಡಿದೆ. ಈ ಕುರಿತು ಕೈಗೊಂಡಿರುವ ಕ್ರಮಗಳ ವಿವರದೊಂದಿಗೆ ಎರಡು ವಾರಗಳೊಳಗೆ ವರದಿ ಸಲ್ಲಿಸಲು ನಿರ್ದೇಶಿಸಿದೆ.
ಆಯೋಗಕ್ಕೆ ಸಲ್ಲಿಸಲಾದ ದೂರಿನಲ್ಲಿ, ರೈಲ್ವೆಯ ಈ ಕ್ರಮವು ಹಿಂದೂ, ಸಿಖ್ ಮತ್ತು ಎಸ್‌ಸಿ ಸಮುದಾಯಗಳ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಆರೋಪಿಸಲಾಗಿದೆ.
ವಿಶೇಷವಾಗಿ ಮಾಂಸ ವ್ಯಾಪಾರದಲ್ಲಿ ತೊಡಗಿರುವವರ ಜೀವನೋಪಾಯದ ಮೇಲೆ ಪರಿಣಾಮ, ಹಾಗೂ ಪ್ರಯಾಣಿಕರ ಧಾರ್ಮಿಕ ನಂಬಿಕೆಗಳಿಗೆ ತಕ್ಕ ಆಹಾರ ಆಯ್ಕೆಗಳು ಲಭ್ಯವಿಲ್ಲ ಎಂಬ ವಿಷಯಗಳನ್ನು ಉಲ್ಲೇಖಿಸಲಾಗಿದೆ.
ದೂರಿನ ಗಂಭೀರತೆಯನ್ನು ಮನಗಂಡ ಎನ್‌ಹೆಚ್‌ಆರ್‌ಸಿ, ರೈಲ್ವೆ ಬೋರ್ಡ್ ಈ ವಿಷಯವನ್ನು ಹೇಗೆ ಪರಿಹರಿಸುತ್ತಿದೆ ಎಂಬುದರ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಸ್ಪಷ್ಟ ಸೂಚನೆ ನೀಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa