ಮಣಿಪುರ: ಆರ್‌ಪಿಎಫ್, ಪಿಎಲ್‌ಎ ಮೇಜರ್ ಬಂಧನ, ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ
ಇಂಫಾಲ್, 17 ನವೆಂಬರ್ (ಹಿ.ಸ.) : ಆ್ಯಂಕರ್ : ಮಣಿಪುರ ಪೊಲೀಸ್, ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನ ಜಂಟಿ ತಂಡವು ಭಾನುವಾರ ಸ್ವಯಂ ಘೋಷಿತ ಆರ್‌ಪಿಎಫ್, ಪಿಎಲ್‌ಎ ಉಗ್ರರ ಮೇಜರ್ ಕೊಯಿಜಮ್ ಇಬೋಚೌಬಾನನ್ನು ಬಂಧಿಸಿದೆ. ಈತ 2017ರಲ್ಲಿ ಸಾಜಿಕ್ ಟ್ಯಾಂಪಾಕ್‌ನಲ್ಲಿ ನಾಲ್ವರು ಅಸ್ಸಾಂ ರೈಫಲ್ಸ್ ಯೋಧರ
Arrest


ಇಂಫಾಲ್, 17 ನವೆಂಬರ್ (ಹಿ.ಸ.) :

ಆ್ಯಂಕರ್ : ಮಣಿಪುರ ಪೊಲೀಸ್, ಸಿಆರ್‌ಪಿಎಫ್ ಮತ್ತು ಅಸ್ಸಾಂ ರೈಫಲ್ಸ್‌ನ ಜಂಟಿ ತಂಡವು ಭಾನುವಾರ ಸ್ವಯಂ ಘೋಷಿತ ಆರ್‌ಪಿಎಫ್, ಪಿಎಲ್‌ಎ ಉಗ್ರರ ಮೇಜರ್ ಕೊಯಿಜಮ್ ಇಬೋಚೌಬಾನನ್ನು ಬಂಧಿಸಿದೆ. ಈತ 2017ರಲ್ಲಿ ಸಾಜಿಕ್ ಟ್ಯಾಂಪಾಕ್‌ನಲ್ಲಿ ನಾಲ್ವರು ಅಸ್ಸಾಂ ರೈಫಲ್ಸ್ ಯೋಧರ ಮೇಲೆ ನಡೆದ ದಾಳಿಯ ಪ್ರಮುಖ ಆರೋಪಿಯಾಗಿದ್ದಾನೆ

ಪೊಲೀಸರ ವಿಚಾರಣೆಯಲ್ಲಿ, ಇಬೋಚೌಬಾ ಕಾಕ್‌ಚಿಂಗ್ ಜಿಲ್ಲೆಯ ಖರುಂಗ್‌ಪತ್ ಪ್ರದೇಶದ ಹೊಲವೊಂದರಲ್ಲಿ ಪ್ಲಾಸ್ಟಿಕ್ ಡ್ರಮ್‌ಗಳಲ್ಲಿ ಅಡಗಿಸಿದ್ದ ಶಸ್ತ್ರಾಸ್ತ್ರಗಳ ಬಗ್ಗೆ ಮಾಹಿತಿ ನೀಡಿದ. ನಂತರ ಭದ್ರತಾ ಪಡೆಗಳು ನಡೆಸಿದ ಶೋಧಕಾರ್ಯದಲ್ಲಿ M-16 ರೈಫಲ್, 8 SLR ರೈಫಲ್‌ಗಳು, .303 LMG, 2 .303 ರೈಫಲ್‌ಗಳು, 190 ಅಮೋಗ್ ಕಾರ್ಟ್ರಿಡ್ಜ್‌ಗಳು, 30 SLR ಕಾರ್ಟ್ರಿಡ್ಜ್‌ಗಳು, ಹಲವು ಮ್ಯಾಗಜೀನ್‌ಗಳು, ಎರಡು IEDಗಳು, ಮಾರ್ಟರ್ ಶೆಲ್‌ಗಳು, ಒಂದು ರಿಮೋಟ್ ಸಾಧನ, ಮೊಬೈಲ್ ಫೋನ್ ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande