
ನವದೆಹಲಿ, 17 ನವೆಂಬರ್ (ಹಿ.ಸ.) :
ಆ್ಯಂಕರ್ : ಕಂದಾಯ ಗುಪ್ತಚರ ನಿರ್ದೇಶನಾಲಯ ‘ಆಪರೇಷನ್ ಫೈರ್‌ಟ್ರೇಲ್’ ಅಡಿಯಲ್ಲಿ ನಡೆಸಿದ ಪ್ರಮುಖ ದಾಳಿಯಲ್ಲಿ ಗುಜರಾತ್‌ನ ಮುಂಡ್ರಾ ಬಂದರಿನಲ್ಲಿ ಚೀನಾದಿಂದ ಅಕ್ರಮವಾಗಿ ಆಮದು ಮಾಡಲಾಗಿದ್ದ 30,000 ಪಟಾಕಿಗಳನ್ನು ವಶಪಡಿಸಿಕೊಂಡಿದೆ. ಸುಮಾರು ₹5 ಕೋಟಿ ಮೌಲ್ಯದ ಈ ಸರಕು ಪರವಾನಗಿ ಇಲ್ಲದೆ ಸಾಗಾಟಗೊಳಿಸಲಾಗಿತ್ತು. ಈ ಕಳ್ಳಸಾಗಣೆ ಮಾಸ್ಟರ್‌ಮೈಂಡ್ ಬಂಧನಕ್ಕೊಳಗಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
40 ಅಡಿ ಉದ್ದದ ಕಂಟೇನರ್ ಒಳಗೆ ಮರೆಮಾಚಲಾಗಿದ್ದ ಪಟಾಕಿ ತುಣುಕುಗಳು , ಪರಿಶೀಲನೆ ವೇಳೆ ಪತ್ತೆಯಾಗಿದೆ. ಪಟಾಕಿ ಆಮದು ವಿದೇಶಿ ವ್ಯಾಪಾರ ನೀತಿಯ ಅಡಿಯಲ್ಲಿ ನಿರ್ಬಂಧಿತ, ಇದಕ್ಕೆ ಡಿಜಿಎಫ್‌ಟಿ ಮತ್ತು ಪಿಇಎಸ್‌ಒ ಅನುಮತಿ ಕಡ್ಡಾಯ. ಬಂಧಿತ ಆಮದುದಾರನ ಬಳಿ ಯಾವುದೇ ದಾಖಲೆಗಳು ಇರಲಿಲ್ಲ ಎಂದು ಡಿಆರ್‌ಐ ಹೇಳಿದೆ.
ಈ ವರ್ಷದ ಅಕ್ಟೋಬರ್ ತಿಂಗಳಲ್ಲಿಯೂ ಮುಂಬೈ ಮತ್ತು ಟುಟಿಕೋರಿನ್ ಬಂದರುಗಳಲ್ಲೂ ಚೀನೀ ಪಟಾಕಿ ಕಳ್ಳಸಾಗಣೆ ಪ್ರಯತ್ನಗಳನ್ನು ಡಿಆರ್‌ಐ ವಿಫಲಗೊಳಿಸಿತ್ತು. ಇಂತಹ ಅಪಾಯಕಾರಿ ವಸ್ತುಗಳ ಅಕ್ರಮ ಆಮದು ಸಾರ್ವಜನಿಕ ಸುರಕ್ಷತೆ ಹಾಗೂ ದೇಶದ ಬಂದರು ಮೂಲಸೌಕರ್ಯಕ್ಕೆ ಗಂಭೀರ ಅಪಾಯ ಉಂಟುಮಾಡುತ್ತದೆ ಎಂದು ಸಂಸ್ಥೆ ಎಚ್ಚರಿಸಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa