ಇಂದಿನಿಂದ ಅಸ್ಸಾಂ ಪ್ರವಾಸದಲ್ಲಿ ಡಾ. ಮೋಹನ್ ಭಾಗವತ್
ಗುವಾಹಟಿ, 17 ನವೆಂಬರ್ (ಹಿ.ಸ.) : ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಇಂದಿನಿಂದ ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ ಪ್ರವಾಸದಲ್ಲಿದ್ದಾರೆ. ಸಂಜೆ ಗೋಪೀನಾಥ್ ಬೋರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ಅವರು ನೇರವಾಗಿ ಬಾರಾಬರಿಯ ಸುಂದರಶ
Mohan bhagwat


ಗುವಾಹಟಿ, 17 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಡಾ. ಮೋಹನ್ ಭಾಗವತ್ ಇಂದಿನಿಂದ ಎರಡು ದಿನಗಳ ಭೇಟಿಗಾಗಿ ಅಸ್ಸಾಂಗೆ ಪ್ರವಾಸದಲ್ಲಿದ್ದಾರೆ. ಸಂಜೆ ಗೋಪೀನಾಥ್ ಬೋರ್ಡೊಲೊಯ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ಅವರು ನೇರವಾಗಿ ಬಾರಾಬರಿಯ ಸುಂದರಶನಾಲಯಕ್ಕೆ ತೆರಳಲಿದ್ದು, ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ ಎಂದು ಉತ್ತರ ಅಸ್ಸಾಂ ಪ್ರಾಂತ್ಯದ ಆರ್‌ಎಸ್‌ಎಸ್ ಪ್ರಚಾರ ಮುಖ್ಯಸ್ಥ ಕಿಶೋರ್ ಶಿವಂ ತಿಳಿಸಿದ್ದಾರೆ.

ಡಾ. ಭಾಗವತ್ ಅವರ ಈ ಪ್ರವಾಸ ಸಂಘದ ಶತಮಾನೋತ್ಸವ ವರ್ಷ ಚಟುವಟಿಕೆಗಳ ಭಾಗವಾಗಿದೆ. ಈ ಅವಧಿಯಲ್ಲಿ ಅವರು ಬೌದ್ಧಿಕ ಚಿಂತನೆ, ಸಂವಾದ ಮತ್ತು ಸಮಾಜದೊಂದಿಗೆ ನೇರ ಸಂವಹನವನ್ನೊಳಗೊಂಡ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande