ಲಾಲಾ ಲಜಪತ್ ರಾಯ್ ಪುಣ್ಯತಿಥಿ, ಗಣ್ಯರಿಂದ ಗೌರವ ನಮನ
ನವದೆಹಲಿ, 17 ನವೆಂಬರ್ (ಹಿ.ಸ.) : ಆ್ಯಂಕರ್ : ಸ್ವಾತಂತ್ರ್ಯ ಹೋರಾಟಗಾರ ‘ಪಂಜಾಬ್ ಕೇಸರಿ’ ಲಾಲಾ ಲಜಪತ್ ರಾಯ್ ಅವರ ಪುಣ್ಯತಿಥಿ ಅಂಗವಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪುಷ್ಕರ್ ಸಿಂಗ್ ಧಾಮಿ, ಕಾಂಗ್
Lala lajpathray


ನವದೆಹಲಿ, 17 ನವೆಂಬರ್ (ಹಿ.ಸ.) :

ಆ್ಯಂಕರ್ : ಸ್ವಾತಂತ್ರ್ಯ ಹೋರಾಟಗಾರ ‘ಪಂಜಾಬ್ ಕೇಸರಿ’ ಲಾಲಾ ಲಜಪತ್ ರಾಯ್ ಅವರ ಪುಣ್ಯತಿಥಿ ಅಂಗವಾಗಿ ಕೇಂದ್ರ ಗೃಹಮಂತ್ರಿ ಅಮಿತ್ ಶಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಶಿವರಾಜ್ ಸಿಂಗ್ ಚೌಹಾಣ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪುಷ್ಕರ್ ಸಿಂಗ್ ಧಾಮಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಅನೇಕ ನಾಯಕರು ಗೌರವ ನಮನ ಸಲ್ಲಿಸಿದರು.

“ಬ್ರಿಟಿಷ್ ದಬ್ಬಾಳಿಕೆಗೆ ವಿರುದ್ಧವಾಗಿ ಹೋರಾಡಿ ಜೀವ ತ್ಯಾಗ ಮಾಡಿದ ಲಜಪತ್ ರಾಯ್ ಅವರ ಸ್ಮರಣೆ ಸ್ವಾತಂತ್ರ್ಯ ಚಳವಳಿಯ ಜ್ವಾಲೆಯನ್ನು ಜೀವಂತವಾಗಿರಿಸುತ್ತದೆ,” ಎಂದು ಅಮಿತ್ ಶಾ ಹೇಳಿದ್ದಾರೆ.

“ಶೇರ್-ಎ-ಪಂಜಾಬ್ ಲಜಪತ್ ರಾಯ್ ಧೈರ್ಯ ಮತ್ತು ದೇಶಭಕ್ತಿಯ ಪ್ರತೀಕ,” ಎಂದು ಖರ್ಗೆ ನಮನ ಸಲ್ಲಿಸಿದರು.

ಯೋಗಿ ಆದಿತ್ಯನಾಥ್, “ಲಜಪತ್ ರಾಯ್ ಯುವಕರಲ್ಲಿ ಸ್ವಾತಂತ್ರ್ಯ ಜ್ವಾಲೆಯನ್ನು ಹೊತ್ತಿಸಿದ ನಾಯಕ” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande