ಕೋಲಾರ, 07 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಕೋಲಾರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಸರಳವಾಗಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಎ. ಮುನಿಶಾಮಪ್ಪ, ಸುಮಾರು 2000 ವರ್ಷಗಳ ಹಿಂದೆಯೇ ವಾಲ್ಮೀಕಿ ರಾಮಾಯಣ ಕೃತಿಯನ್ನು ರಚಿಸಿ ಪಾತ್ರಗಳ ಸೃಷ್ಟಿಯಲ್ಲಿ ಮಕ್ಕಳು ತಂದೆ ತಾಯಿಗಳಿಗೆ ಯಾವ ರೀತಿ ಆದರ್ಶವಾಗಿರಬೇಕು ಮತ್ತು ಏಕ ಪತ್ನಿ ವಿಚಾರದಲ್ಲಿ ಎಂತಹ ಸಂದರ್ಭದಲ್ಲಿ ಸೀತೆಯನ್ನು ಬಿಟ್ಟು ಬೇರೆ ಹೆಣ್ಣಿನ ಬಗ್ಗೆ ಆಲೋಚನೆ ಮಾಡದೇ ಇರುವ ರಾಮನ ಪಾತ್ರ ವಾಲ್ಮೀಕಿ ಸೃಷ್ಟಿಯ ಆಲೋಚನೆ ಇಂದಿನ ಪೀಳಿಗೆಗೆ ಆದರ್ಶವಾಗಿದ್ದಾರೆ. ಪಾತ್ರವನ್ನು ರಾಕ್ಷಸನಾಗಿ ಬಿಂಬಿಸದೆ ಪರಮ ಶಿವಭಕ್ತ ಕಾಣುವ ಮತ್ತು ರಾವಣನ ಮೇಲೆ ರಾಮ ಯುದ್ದ ಮಾಡಬೇಕಾದರೆ ರಾವಣನ ಬಳಿ ಮುಹೂರ್ತ ಇಡುವ ಸಂದರ್ಭ ರೋಮಾಂಚನ. ವಾಲ್ಮೀಕಿ ಇಂತಹ ಕೃತಿಯನ್ನು ರಚಿಸಿ ಕನ್ನಡ ಸಾಹಿತ್ಯದಲ್ಲಿ ಪಂಪ, ನಾಗಚಂದ್ರ ಮುಂತಾದ ಕವಿಗಳಿಗೆ ಮತ್ತು ಓದುಗರಿಗೆ ಕಾಡಿನ ರಮ್ಯ ಚಿತ್ರ ಇಂದಿಗೂ ಸಿನಿಮಾ ನಿರ್ದೇಶಕರಿಗೆ ಇಂತಹ ಮನ ರಮಣೀಯವಾದ ಕಾಡಿನ ಚಿತ್ರ ವನ್ನ ವರ್ಣಿಸಲಾಗದ ಚಿತ್ರಣ ವಾಲ್ಮೀಕಿ ರಾಮಾಯಣದಲ್ಲಿ ಮೂಡಿ ಬಂದಿದೆ ಎಂದರು.
ಇದೇ ಸಂದರ್ಭದಲ್ಲಿ ಲಕ್ಷ್ಮಣನ ಹೆಂಡತಿ ಊರ್ಮಿಳೆ ಮುಂತಾದ ಪಾತ್ರಗಳು ಇಂದಿಗೂ ಮುಂದಿನ ಹೆಣ್ಣು ಮಕ್ಕಳಿಗೆ ಆದರ್ಶವಾಗಿದ್ದಾರೆ.
ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ವಾಣಿಜ್ಯ ವಿಭಾಗದ ಡಾ. ಮುರಳಿದರ್ , ಸತೀಶ್, ನಾರಾಯಣಪ್ಪ , ನಂದೀಶ ಮತ್ತು ಕಾಲೇಜಿನ ಸಿಬ್ಬಂದಿ ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್