‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕೆ ಪುಸ್ತಕಗಳನ್ನು ಆಹ್ವಾನ
‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕೆ ಪುಸ್ತಕಗಳನ್ನು ಆಹ್ವಾನ
‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕೆ ಪುಸ್ತಕಗಳನ್ನು ಆಹ್ವಾನ


ಬೆಂಗಳೂರು, 07 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ‘ಕನ್ನಡ ನನ್ನ ಮೊದಲ ಪ್ರೀತಿ, ಎರಡನೆಯ ಪ್ರೀತಿಯೂ ಅದೇ’ ಎಂದು ಕನ್ನಡಕ್ಕಾಗಿ ಜೀವನಪರ್ಯಂತ ದುಡಿದು ತಮ್ಮ ಅಂಕಣ/ಬರಹದ ಮೂಲಕ ಕನ್ನಡ ಚಿಂತನೆಗೆ ಘನತೆ ತಂದು ಕೊಟ್ಟವರು ಡಾ. ಹಾ.ಮಾ. ನಾಯಕರು. ಅವರ ನೆನಪಿನಲ್ಲಿ ಕನ್ನಡ ಗೆಳೆಯರ ಬಳಗವು ಕನ್ನಡನಾಡು, ನುಡಿ, ಸಂಸ್ಕೃತಿಗಳನ್ನು ಕುರಿತು ರಚಿಸಿರುವ ಪುಸ್ತಕಕ್ಕೆ ರೂ.5000/- ನಗದು ಹೊಂದಿರುವ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನು ಇನ್ನೊಂದು ಪುಸ್ತಕಕ್ಕೆ ರೂ 3000/- ನಗದು ಸಮಾಧಾನಕರ ಬಹುಮಾನವನ್ನು ಪ್ರತಿವರ್ಷವೂ ನೀಡುತ್ತಾ ಬಂದಿದೆ. ಈ ಎರಡು ಬಹುಮಾನಗಳಲ್ಲಿ ಒಂದು ಅಂಕಣ ಬರಹ ಸಂಕಲನಕ್ಕೆ ಮೀಸಲಾಗಿರುತ್ತದೆ.

2024-25ನೆಯ ಸಾಲಿನ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ಕ್ಕೆ ಕನ್ನಡ ಜಾಗೃತಿ/ ಕನ್ನಡನಾಡು, ನುಡಿ, ಸಂಸ್ಕೃತಿಗಳನ್ನು ಕುರಿತ ಪುಸ್ತಕಗಳನ್ನು ಆಹ್ವಾನಿಸಿದೆ. ಕನ್ನಡ ಗೆಳೆಯರ ಬಳಗವು ಕೊಡು ಮಾಡುವ ಈ ಪ್ರಶಸ್ತಿಗೆ ಪುಸ್ತಕ ಕಳುಹಿಸಲು ಇಚ್ಛಿಸುವವರು ೨ ಪ್ರತಿಗಳನ್ನು 05-11-2025ರೊಳಗೆ ಈ ವಿಳಾಸಕ್ಕೆ ಕಳುಹಿಸಿ ಕೊಡಲು ಕೋರಲಾಗದೆ.

ರಾ.ನಂ. ಚಂದ್ರಶೇಖರ, ಸಂಚಾಲಕ

ಕನ್ನಡ ಗೆಳೆಯರ ಬಳಗ

#1, ‘ಶ್ರೀನಿಲಯ’ ಮಾರಮ್ಮ ದೇವಸ್ಥಾನದ ರಸ್ತೆ

ಕತ್ರಗುಪ್ಪೆ, ಬೆಂಗಳೂರು -560085

ಡಿಸೆಂಬರ್ ಮೊದಲ ವಾರ ಬೆಂಗಳೂರಿನಲ್ಲಿ ನಡೆಯುವ ಕನ್ನಡ ಗೆಳೆಯರ ಬಳಗದ ವಾರ್ಷಿಕ ಪ್ರಶಸ್ತಿಗಳ ಪ್ರದಾನ, ‘ಚಿಮೂ ಕನ್ನಡ ಸಂಸ್ಕೃತಿ ಪ್ರಶಸ್ತಿ’ ನೀಡುವ ಸಮಾರಂಭದಲ್ಲಿ ‘ಹಾಮಾನಾ ಕನ್ನಡ ಜಾಗೃತಿ ಪುಸ್ತಕ ಬಹುಮಾನ’ವನ್ನೂ ಕೊಡ ಮಾಡಲಾಗುವುದು.

ಹಿಂದೂಸ್ತಾನ್ ಸಮಾಚಾರ್ / ಮನೋಹರ ಯಡವಟ್ಟಿ


 rajesh pande