ಗದಗ, 7 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಒಳಮೀಸಲಾತಿ ವಿರೋಧಿಸಿ ಗದಗನಲ್ಲಿ ಬಂಜಾರಾ ಸಮುದಾಯದ ಸಂಘಟನೆಗಳ ಕಾರ್ಯಕರ್ತರು ಗದಗ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ನಿನ್ನೆ ಮೆರವಣಿಗೆ, ಇವತ್ತು ಕಟ್ಟಿಗೆ ಹೊರೆ ಹೊತ್ತು ಪ್ರತಿಭಟೆನೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶಗೊಂಡ ಪ್ರತಿಭಟನಾಕಾರರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ವಿಶೇಷ ಪ್ರತಿಭಟನೆ ಮಾಡಿದ್ದಾರೆ.
ಹೌದು ಉತ್ತರ ಕರ್ನಾಟಕದಲ್ಲಿ ರೈತರು ತಮ್ಮ ಜಮೀನಿನಲ್ಲಿ ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುವ ಸೀಗೆ ಹುಣ್ಣಿಮೆಯನ್ನು ಗದಗ ಜಿಲ್ಲಾಧಿಕರಿಗಳ ಕಚೇರಿ ಮುಂದಿನ ರಸ್ತೆಯಲ್ಲಿ ಆಚರಿಸಿದ್ದಾರೆ. ಪಾಂಡವರ ಸ್ವರೂಪ ಎಂದು ಹೇಳಲಾಗುವ ಐದು ಕಲ್ಲುಗಳನ್ನು ಇಟ್ಟು ಪೂಜಿಸಿ, ಹುಲ್ಲಿಲಿಗೊ ಸಿಲ್ಲಿಲಿಗೊ ಸಲಾಮ್ರಿಗೊ ಎಂದು ನೈವೇದ್ಯ ಮಾಡಿದ್ದಾರೆ. ಈ ಮೂಲಕ ತಮ್ಮ ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ್ದು, ಸರ್ಕಾರ ಕಣ್ತೆರೆಯೊವರೆಗೂ ಧರಣಿ ಮುಂದುವರೆಸುತ್ತೇವೆ ಎನ್ನುತ್ತಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / lalita MP