ಅಲ್ಪಸಂಖ್ಯಾತರ ಸರಳವಿವಾಹಕ್ಕೆ ಧನಸಹಾಯ
ವಿಜಯಪುರ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದವರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ) ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳಲ್ಲಿ ಭಾಗವಹಿಸುವ ಪ್ರತಿಜೋ
ಅಲ್ಪಸಂಖ್ಯಾತರ ಸರಳವಿವಾಹಕ್ಕೆ ಧನಸಹಾಯ


ವಿಜಯಪುರ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಅಲ್ಪಸಂಖ್ಯಾತ ಸಮುದಾಯದವರ (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್, ಪಾರ್ಸಿ) ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳಲ್ಲಿ ಭಾಗವಹಿಸುವ ಪ್ರತಿಜೋಡಿಗೆ ರೂ.೫೦,೦೦೦ ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ.

ಅರ್ಜಿದಾರರು ಕರ್ನಾಟಕ ರಾಜ್ಯದ ನಿವಾಸಿಗಳಾಗಿರಬೇಕು. ವಧುವಿನ ವಯಸ್ಸು ೧೮ರಿಂದ ೪೨ ವರ್ಷಗಳ, ವರನ ವಯಸ್ಸು ೨೧ರಿಂದ ೪೫ ವರ್ಷಗಳ ನಡುವೆ ಇರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.೫ ಲಕ್ಷ ಮೀರಬಾರದು. ಜೀವನದಲ್ಲಿ ಒಮ್ಮೆ ಮಾತ್ರ ಈ ಸೌಲಭ್ಯ ಲಭ್ಯ.

ಕನಿಷ್ಠ ೧೦ ಜೋಡಿಗಳ ಸಮೂಹ ವಿವಾಹ ಆಯೋಜನೆಯಾಗಿರಬೇಕು. ನೊಂದಾಯಿತ ಟ್ರಸ್ಟ್ಗಳು, ಸಂಘಗಳು, ಸೊಸೈಟಿಗಳು, ವಕ್ಫ್ ಸಂಸ್ಥೆಗಳು ಹಾಗೂ ದೇವಸ್ಥಾನ ಟ್ರಸ್ಟ್ಗಳು ಆಯೋಜಕರಾಗಬಹುದು. ಆಯೋಜಕರಿಗೆ ಪ್ರತಿಜೋಡಿಗೆ ರೂ.೫,೦೦೦ ವೆಚ್ಚ ಸಹಾಯ ನೀಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ನವನಗರ ಬಾಗಲಕೋಟೆ (ದೂರವಾಣಿ: ೦೮೩೫೪-೨೦೦೦೪೪) ಸಂಪರ್ಕಿಸಬಹುದು ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande