ಬೈಕ್‌ನಿಂದ ಆಳಕ್ಕೆ ಬಿದ್ದ ಬೈಕ್ ಸವಾರರು
ವಿಜಯಪುರ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಬೈಕ್‌‌ ಕಂಟ್ರೋಲ್ ಸಿಗದೆ ರಸ್ತೆ ಬದಿಯ ಆಳಕ್ಕೆ ಸವಾರರು ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆದರ್ಶ ಸ್ಕೂಲ್ ಬಳಿ ನಡೆದಿದೆ.‌ ಸಂತೋಷ ಡಿಜೆರೆಗೋಳ, ಗೊಳ್ಳಳಪ್ಪ ಕೊಂಡಗುಳಿ ಗಾಯಗೊಂಡಿರುವ ಬೈಕ್ ಸವಾರರು. ಬೈಕ್ ಮೇಲೆ ಹೊರಟಿದ್ದ ಇಬ್ಬ
ಅಪಘಾತ


ವಿಜಯಪುರ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಬೈಕ್‌‌ ಕಂಟ್ರೋಲ್ ಸಿಗದೆ ರಸ್ತೆ ಬದಿಯ ಆಳಕ್ಕೆ ಸವಾರರು ಬಿದ್ದಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಆದರ್ಶ ಸ್ಕೂಲ್ ಬಳಿ ನಡೆದಿದೆ.‌

ಸಂತೋಷ ಡಿಜೆರೆಗೋಳ, ಗೊಳ್ಳಳಪ್ಪ ಕೊಂಡಗುಳಿ ಗಾಯಗೊಂಡಿರುವ ಬೈಕ್ ಸವಾರರು. ಬೈಕ್ ಮೇಲೆ ಹೊರಟಿದ್ದ ಇಬ್ಬರು ಬೈಕ್ ಕಂಟ್ರೋಲ್ ಸಿಗದೇ ಆಯ ತಪ್ಪಿ ಬೈಕ್ ನಿಂದ ರಸ್ತೆ ಬದಿಯ ಆಳಕ್ಕೆ ಬಿದ್ದಿದ್ದಾನೆ.‌ ಇನ್ನು ಮುಳ್ಳು, ಕಂಟಿ ಬೆಳೆದಿದ್ದ ದೊಡ್ಡ ಆಳವಾದ ತಗ್ಗಿಗೆ ಬಿದ್ದಿರುವ ವಿಷಯ ತಿಳಿದು ರಕ್ಷಣೆಗೆ ಸಿಂದಗಿ ಅಗ್ನಿಶಾಮಕ ಸಿಬ್ಬಂದಿಯವರು ತೆರಳಿ ತ್ವರಿತ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳು ಸಿಂದಗಿ ತಾಲೂಕಾಸ್ಪತ್ರೆಗೆ ದಾಖಲು ಮಾಡಲಾಗಿದೆ. ‌ಸಿಂದಗಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande