ಉಪ ವಲಯ ಅರಣ್ಯ ಅಧಿಕಾರಿ ವಿ.ಹರೀಶ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯ
ಉಪ ವಲಯ ಅರಣ್ಯ ಅಧಿಕಾರಿ ವಿ.ಹರೀಶ್ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯ
ಚಿತ್ರ : ಉಪ ವಲಯ ಅರಣ್ಯ ಅಧಿಕಾರಿ ವಿ.ಹರೀಶ್ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ನಮ್ಮ ಕೋಲಾರ ರೈತ ಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ ಸೇರಿದಂತೆ ಇತರರು ಅರಣ್ಯ ಇಲಾಖೆ ಡಿ.ಎಫ್.ಓಗೆ ಮನವಿ ಸಲ್ಲಿಸಿದರು.


ಕೋಲಾರ, ಅಕ್ಟೋಬರ್ ೨೮ (ಹಿ.ಸ.) :

ಆ್ಯಂಕರ್ : ಕೋಲಾರ ಪ್ರಾದೇಶಿಕ ವಲಯದ ನಗರ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ವಿ.ಹರೀಶ್ ಅವರು ಚಾಮರಹಳ್ಳಿ ನಿವಾಸಿಯಾದ ಮುನಿಶಾಮಿರವರು ತಮ್ಮ ಜಮೀನಿನಲ್ಲಿದ್ದ ಆಲದ ಮರವನ್ನು ಕಟಾವಣೆ ಮಾಡಿ ಸಾಗಾಣೆ ಮಾಡಲು ರೈತನಿಂದ ೪೫,೦೦೦ ರೂ.ಗಳ ಲಂಚವನ್ನು ಪಡೆದಿದ್ದು, ಅವರನ್ನು ಕೂಡಲೇ ಅಮಾನತ್ತು ಮಾಡುವಂತೆ ನಮ್ಮ ಕೋಲಾರ ರೈತ ಸೇನೆ ವತಿಯಿಂದ ಅರಣ್ಯ ಇಲಾಖೆ ಡಿ.ಎಫ್.ಓಗೆ ಮನವಿ ನೀಡಿದರು.

ಕೋಲಾರ ತಾಲೂಕಿನ ಹುತ್ತೂರು ಹೋಬಳಿ ಚಾಮರಹಳ್ಳಿ ನಿವಾಸಿಯಾದ ಮುನಿಶಾಮಿ ಬಿನ್ ಹನುಮಂತಪ್ಪ ರವರು ತಮ್ಮ ಜಮೀನಿನಲ್ಲಿದ್ದ ಆಲದ ಮರವನ್ನು ಕಟಾವಣೆ ಮಾಡಿ ಸಾಗಾಣೆ ಮಾಡಲು ಕೋಲಾರ ಪ್ರಾದೇಶಿಕ ವಲಯದ ನಗರ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ವಿ.ಹರೀಶ್ ನಗರ ಶಾಖೆಯ ಅರಣ್ಯ ರಕ್ಷಕರಾದ ನಾಗರಾಜ್ ರವರಿಗೆ ಮನವಿ ಮಾಡಿದಾಗ ದಿನಾಂಕ ೨೨-೦೮-೨೦೨೫ ರಂದು ರೈತನಿಂದ ಸದರಿ ನೌಕರರು ಮುನಿಶಾಮಿಗೆ ಲಂಚವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು. ಪೋನ್ ಪೇ ಮುಖಾಂತರ ಹರಳಕುಂಟೆ ಶಾಖೆಯ ನೆಡುತೋಪು ಕಾವಲುಗಾರರಾದ ಟಿ.ವಿ.ರಾಜೇಶ್ ರವರ ಬ್ಯಾಂಕ್ ಖಾತೆಗೆ ರೈತನಿಂದ ಹಣವನ್ನು ಜಮಾ ಮಾಡಿಸಿಕೊಂಡು ವಿ.ಹರೀಶ್ ಹಾಗೂ ನಾಗರಾಜ್ ರವರುಗಳು ಸೇರಿ ಹಂಚಿಕೊಂಡಿರುತ್ತಾರೆ.

ರೈತ ಸಾಗಾಣೆ ಮಾಡುತ್ತಿದ್ದ ವಾಹನವನ್ನು ಕೋಲಾರದ ಅಗ್ನಿ ಶಾಮಕ ಠಾಣೆಯ ಮುಂದೆ ವಾಹನವನ್ನು ಜಪ್ತಿ ಮಾಡಿಕೊಂಡು ವಲಯ ಅರಣ್ಯಾಧಿಕಾರಿಗಳ ಕಛೇರಿ ಆವರಣಕ್ಕೆ ತೆಗೆದುಕೊಂಡು ವಾಹನ ಮತ್ತು ಸಾಗಾಣಿಕೆದಾರರ ಮೇಲೆ ಯಾವುದೇ ಮೊಕದ್ದಮ್ಮೆ ಹಾಗೂ ದಂಡವನ್ನು ವಿಧಿಸದೆ ವಾಹನ ಮತ್ತು ಸರಕನ್ನು (ಮಾಲ್) ಅಕ್ರಮವಾಗಿ ಬಿಡುಗಡೆಗೊಳಿಸಿರುತ್ತಾರೆ. ಕೂಡಲೇ ವಿ.ಹರೀಶ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ತಕ್ಷಣದಿಂದಲೇ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.

ನಿಯೋಗದಲ್ಲಿ ನಮ್ಮ ಕೋಲಾರ ರೈತ ಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ, ದೊಡ್ನಹಳ್ಳಿ ವೆಂಕಟರಾಮಪ್ಪ ಮಾರ್ಜೇನಹಳ್ಳಿ ನಾರಾಯಣಸ್ವಾಮಿ, ಪ್ರಕಾಶ್, ವೆಂಕಟಸ್ವಾಮಪ್ಪ, ವಿಶ್ವನಾಥ್, ಕೆಂಬೋಡಿ ಕೃಷ್ಣೇಗೌಡ, ಅಗ್ರ ಸೋಮರಸನಹಳ್ಳಿ ನಾರಾಯಣಸ್ವಾಮಿ, ನಾರಾಯಣಪ್ಪ ಇನ್ನಿತರರು ಇದ್ದರು.

ಚಿತ್ರ : ಉಪ ವಲಯ ಅರಣ್ಯ ಅಧಿಕಾರಿ ವಿ.ಹರೀಶ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಒತ್ತಾಯಿಸಿ ನಮ್ಮ ಕೋಲಾರ ರೈತ ಸೇನೆ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ಗೌಡ ಸೇರಿದಂತೆ ಇತರರು ಅರಣ್ಯ ಇಲಾಖೆ ಡಿ.ಎಫ್.ಓಗೆ ಮನವಿ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande