ಪತ್ರಕರ್ತ ಸಂಘದ ಚುನಾವಣೆ : 44 ನಾಮಪತ್ರ ಸ್ವೀಕೃತ
ಬಳ್ಳಾರಿ, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಬಳ್ಳಾರಿ ಜಿಲ್ಲಾ ಘಟಕದ 2025-2028ರ ಅವಧಿಯ ಚುನಾವಣೆಗೆ ಒಟ್ಟು 25 ಸ್ಥಾನಗಳಿಗೆ 44 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅ.28ರಂದು ನಾಮಪತ್ರ ಪರಿಶೀಲನೆ ಜರುಗಿದ್ದು, ಯಾವುದೇ ನಾಮಪತ್ರಗಳು
ಬಳ್ಳಾರಿ; ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಚುನಾವಣೆ: 44 ನಾಮಪತ್ರ ಸ್ವೀಕೃತ


ಬಳ್ಳಾರಿ, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಬಳ್ಳಾರಿ ಜಿಲ್ಲಾ ಘಟಕದ 2025-2028ರ ಅವಧಿಯ ಚುನಾವಣೆಗೆ ಒಟ್ಟು 25 ಸ್ಥಾನಗಳಿಗೆ 44 ನಾಮಪತ್ರಗಳು ಸಲ್ಲಿಕೆಯಾಗಿದ್ದು, ಅ.28ರಂದು ನಾಮಪತ್ರ ಪರಿಶೀಲನೆ ಜರುಗಿದ್ದು, ಯಾವುದೇ ನಾಮಪತ್ರಗಳು ತಿರಸ್ಕಾರಗೊಳ್ಳದೇ ಎಲ್ಲ 44 ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಚುನಾವಣೆ ಅಧಿಕಾರಿ ನಾಗರಾಜ ಎಸ್. ಮಾಹಿತಿ ನೀಡಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಘಟಕದ ಚುನಾವಣೆಗೆ ಅ.19ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಅ.27ರವರೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿತ್ತು.

ಜಿಲ್ಲಾ ಘಟಕದ ಅಧ್ಯಕ್ಷ ಒಂದು ಸ್ಥಾನಕ್ಕೆ ನಾಲ್ಕು ನಾಮಪತ್ರ ಸಲ್ಲಿಕೆಯಾಗಿದ್ದು ಕೆ.ಮಲ್ಲಯ್ಯ, ವೆಂಕಟೇಶ ದೇಸಾಯಿ, ವಿ.ರವಿ, ಎನ್.ವೀರಭದ್ರಗೌಡ. ರವರು ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲಾ ಉಪಾಧ್ಯಕ್ಷ ಮೂರು ಸ್ಥಾನಕ್ಕೆ ಎನ್.ಗುರುಶಾಂತ, ಎ.ವಾಗೇಶ, ಕೆ.ಮಲ್ಲಿಕಾರ್ಜುನ, ಕೆ.ಮಲ್ಲಯ್ಯ, ಬಿ.ರಸೂಲ್ ಸೇರಿ ಐದು ಜನ ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಒಂದು ಸ್ಥಾನಕ್ಕೆ ವಿ.ರವಿ, ವೆಂಕಟೇಶ ದೇಸಾಯಿ, ನರಸಿಂಹಮೂರ್ತಿ ಕುಲಕರ್ಣಿ. ಜಿಲ್ಲಾ ಕಾರ್ಯದರ್ಶಿ ಮೂರು ಸ್ಥಾನಕ್ಕೆ ಕೆ.ಅಶೋಕ, ದ್ಯಾಮನಗೌಡ ಪಾಟೀಲ್, ಎಂ.ಇ.ಜೋಷಿ, ಪಿ.ರಘುರಾಮ್, ಕೆ.ಮಲ್ಲಿಕಾರ್ಜುನ ಸೇರಿ ಐದು ಜನ ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲಾ ಖಜಾಂಚಿ ಒಂದು ಸ್ಥಾನಕ್ಕೆ ಕೆ.ಅಶೋಕ, ನರಸಿಂಹಮೂರ್ತಿ ಕುಲಕರ್ಣಿ, ಬಿ.ಪಂಪನಗೌಡ ಮೂರು ಜನ ನಾಮಪತ್ರ ಸಲ್ಲಿಸಿದ್ದಾರೆ. ರಾಜ್ಯ ಕಾರ್ಯಕಾರಿ ಒಂದು ಸ್ಥಾನಕ್ಕೆ ವೆಂಕೋಬಿ, ಬಸವರಾಜ ಎಚ್, ಎಂ.ಜ0ಬುನಾಥ ಮೂರು ಜನ ನಾಮಪತ್ರ ಸಲ್ಲಿಸಿದ್ದಾರೆ.

ಜಿಲ್ಲಾ ಕಾರ್ಯಕಾರಿಣಿ ಸದಸ್ಯ 15 ಸ್ಥಾನಕ್ಕೆ ಎಸ್.ಕಿನ್ನೂರೇಶ್ವರ, ಕೆ.ವೀರೇಶ, ಹುಲುಗಣ್ಣ ಎಚ್., ಟಿ.ಈರೇಶ, ನಂದೀಶಕುಮಾರ್, ಬಿ.ರಮೇಶ ಉಪ್ಪಾರ, ಜಿ.ಚಂದ್ರಶೇಖರಗೌಡ, ಯು.ಗುರುನಾದಂ, ರ‍್ರಿಸ್ವಾಮಿ ಬಿ., ಟಿ.ಎನ್. ಶ್ರೀನಿವಾಸಶೆಟ್ಟಿ, ರೇಣುಕಾರಾಧ್ಯ ಕೆಎಂವಿ, ಹೊನ್ನೂರಸ್ವಾಮಿ ಕೆ ಟಿ., ವಿ.ಎಚ್.ಶ್ರೀನಿವಾಸಲು, ಶಿವಾನಂದ ಕೆ.ಮದಿಹಳ್ಳಿ, ಕೆ.ಎಂ.ಮ0ಜುನಾಥ, ಪುರುಷೋತ್ತಮ ಹಂದ್ಯಾಳ, ಶಿವಕುಮಾರ್ ಎಚ್., ಅಮರೇಶ ಎಲ್.ಕೆ., ಜಿ.ಪ್ರವೀಣರಾಜ್, ಸತೀಶ ಬಿ., ಎಂ.ಜ0ಬುನಾಥ ಸೇರಿ 21 ಜನ ನಾಮಪತ್ರ ಸಲ್ಲಿಸಿದ್ದಾರೆ.

ಒಟ್ಟು 25ಸ್ಥಾನಗಳಿಗೆ 44 ನಾಮಪತ್ರ ಸಲ್ಲಿಕೆಯಾಗಿದ್ದು, ಅ.28 ರಂದು ಬೆಳಗ್ಗೆ 11 ರಿಂದ 3 ಗಂಟೆಯವರೆಗೆ ನಾಮಪತ್ರ ಪರಿಶೀಲನೆ ನಡೆಯಿತು. ಎಲ್ಲ ನಾಮಪತ್ರಗಳನ್ನು ಕೂಲಂಕುಷವಾಗಿ ಪರಿಶೀಲನೆ ಮಾಡಲಾಗಿದ್ದು, ಎಲ್ಲ ನಾಮಪತ್ರಗಳು ಸ್ವೀಕೃತಗೊಂಡಿವೆ ಎಂದು ಚುನಾವಣೆ ಅಧಿಕಾರಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande