
ಬಳ್ಳಾರಿ, 28 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಅಸುಂಡಿ ಗ್ರಾಮದ ಯುವ ರವಿಕುಮಾರ್‍ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬಂಧಿತರು ದೊಡ್ಡ ಹೊನ್ನೂರಸ್ವಾಮಿ ಅಲಿಯಾಸ್ ರಿಕ್ಕಿ, ಶೇಖರ ಅಲಿಯಾಸ್ ಉದ್ದೆಹಾಳ್ ಶೇಖರ, ದುಬ್ಬ ಹೊನ್ನೂರಸ್ವಾಮಿ, ದೊಡ್ಡ ಎರೆಪ್ಪ, ನಾಗರಾಜ, ಆಟೋ ಎರಿಸ್ವಾಮಿ, ಪ್ರಕಾಶ್, ಸುರೇಂದ್ರ, ಹೊನ್ನೂರಸ್ವಾಮಿ ಅಲಿಯಾಸ್ ಅಗಸರ ಹೊನ್ನೂರಸ್ವಾಮಿ ಹಾಗೂ ಪ್ರಸಾದ್. ಎಲ್ಲಾ ಆರೋಪಿಗಳು ಅಸುಂಡಿ ಗ್ರಾಮ ನಿವಾಸಿಗಳು.
ಹಳೆಯ ದ್ವೇಷದ ಹಿನ್ನಲೆಯಲ್ಲಿ ಅಸುಂಡಿ ಗ್ರಾಮದ ಯುವಕ ರವಿಕುಮಾರ್ ಕೊಲೆ ಎರೆಡು ದಿನಗಳ ಹಿಂದೆ ಕೊಲೆ ಮಾಡಿದ್ದ ಆರೋಪಿಗಳು, ಗ್ರಾಮದ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಶವವನ್ನು ಬಿಸಾಕಿ, ಅಪಘಾತದ ನಾಟಕವಾಡಿದ್ದರು.
ಕುಟುಂಬದ ಸದಸ್ಯರು ರವಿಕುಮಾರ್‍ನ ಕೊಲೆಯಾಗಿದೆ. ಕೊಲೆಗಾರರು ರಸ್ತೆ ಅಪಘಾತದ ನಾಟಕವಾಡಿದ್ದಾರೆ. ನಮಗೆ ಕೆಲವರ ಮೇಲೆ ಅನುಮಾನವಿದೆ ಎಂದು ಪಿಡಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಪೊಲೀಸರು ಪೋಸ್ಟ್‍ಮಾರ್ಟಂ ವರದಿ ಆಧರಿಸಿ ಕ್ರಮಕೈಗೊಳ್ಳುವುದಾಗಿ - ಮೃತನ ಕುಟುಂಬಕ್ಕೆ ಭರವಸೆ ನೀಡಿದ್ದರು.
ಪೋಸ್ಟ್‍ಮಾರ್ಟಂ ವರದಿ ಬಂದ ತಕ್ಷಣವೇ ಪೊಲೀಸರು, ರವಿಕುಮಾರ್‍ನ ಕೊಲೆಯಾಗಿದೆ ಎಂದು ಹೇಳಿ, 10 ಜನ ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತರು ತಪ್ಪೊಪ್ಪಿಕೊಂಡಿದ್ದು, ಪ್ರಕರಣದ ವಿಚಾರಣೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್