`ಸೆಲ್ಫಿ ಫೈರಿಂಗ್' : ನಾಡ ಪಿಸ್ತೂಲ್‍ಗೆ ಸೈಕಲ್ ಬೇರಿಂಗ್‍ಗೆ ಗಾಯ, ಚಿಕಿತ್ಸೆ
ಕೊಪ್ಪಳ, 27 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅಮಲಿನ ಪ್ರಭಾವದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಮೈಮರೆತು ಅಕ್ರಮ ನಾಡ ಬಂದೂಕಿನಿಂದ `ಸೆಲ್ಫಿ ಫೈರಿಂಗ್'' ಮಾಡಿಕೊಳ್ಳಲು ಯತ್ನಿಸಿದ ಯುವಕ ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದ ಆತಂಕದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅ
`ಸೆಲ್ಫಿ ಫೈರಿಂಗ್' : ನಾಡ ಪಿಸ್ತೂಲ್‍ಗೆ ಸೈಕಲ್ ಬೇರಿಂಗ್‍ಗೆ ಗಾಯ, ಚಿಕಿತ್ಸೆ


ಕೊಪ್ಪಳ, 27 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅಮಲಿನ ಪ್ರಭಾವದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ಮೈಮರೆತು ಅಕ್ರಮ ನಾಡ ಬಂದೂಕಿನಿಂದ `ಸೆಲ್ಫಿ ಫೈರಿಂಗ್' ಮಾಡಿಕೊಳ್ಳಲು ಯತ್ನಿಸಿದ ಯುವಕ ತೀವ್ರವಾಗಿ ಗಾಯಗೊಂಡು ಪ್ರಾಣಾಪಾಯದ ಆತಂಕದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಲ್ಲದೇ, ಅನಧಿಕೃತವಾಗಿ ನಾಡ ಬಂದೂಕು ಹೊಂದಿದ್ದಕ್ಕಾಗಿ ಕಾನೂನಿನ ತೊಡಗಿಗೂ ಸಿಲುಕಿದ ಘಟನೆ ಭಾನುವಾರ ರಾತ್ರಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕ ಬಿಡನಾಳ ಗ್ರಾಮದ ನಿವಾಸಿ ಆನಂದಗೌಡ ಪಾಟೀಲ್ `ಸೆಲ್ಫಿ ಫೈರಿಂಗ್'ನ ಗಾಯಾಳು.

ಭಾನುವಾರ ತಡರಾತ್ರಿ ವಿಪರೀತ ಪಾನಮತ್ತನಾಗಿದ್ದ ಆನಂದಗೌಡ ಪಾಟೀಲ್ ತನ್ನಲ್ಲಿದ್ದ ನಾಡ ಬಂದೂಕನ್ನು ಹೊರತೆಗೆದಿದ್ದಾನೆ. ಮೊಬೈಲ್ ಕ್ಯಾಮೆರಾ ಆನ್ ಮಾಡಿ, ಬಂದೂಕನ್ನು ತನ್ನತ್ತ ಹಿಡಿದು ಪೋಸ್ ಕೊಡುತ್ತಾ `ಸೆಲ್ಫಿ ಫೈರಿಂಗ್' ಮಾಡಿಕೊಂಡಿದ್ದಾನೆ.

ಗಾಯಾಳು ಫೈರಿಂಗ್‍ಗೆ ಬಳಸಿದ್ದು ಸೈಕಲ್‍ನ ಬಾಲ್ ಬೇರಿಂಗ್‍ಗಳನ್ನು. ಮದ್ಯದ ಅಮಲಿನಲ್ಲಿದ್ದ ಆತನ ನಿಯಂತ್ರಣ ತಪ್ಪಿ, ಗುರಿ ಬದಲಾಗಿ ಬೇರಿಂಗ್ ಆತನ ದೇಹವನ್ನೇ ಹೊಕ್ಕಿದೆ. ತೀವ್ರ ರಕ್ತಸ್ರಾವದಿಂದ ಕುಸಿದುಬಿದ್ದ ಆತನನ್ನು ತಕ್ಷಣವೇ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೊಲೀಸರು ಆರೋಪಿಯಿಂದ ಬಂದೂಕನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ. ಗಾಯಾಳು ಆರೋಗ್ಯ ಸುಧಾರಿಸಿದ ನಂತರ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತದೆ ಎಂದು ಕುಕನೂರು ಪೊಲೀಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande