ರಿಮ್ಸ್‍ನಲ್ಲಿ ಉಳಿದಿರುವ ಬಿ,ಎಸ್ಸಿ ನರ್ಸಿಂಗ್ ಸೀಟು ಹಂಚಿಕೆಗೆ ಅರ್ಜಿ ಆಹ್ವಾನ
ರಾಯಚೂರು, 28 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 2025-26ನೇ ಸಾಲಿನಲ್ಲಿ ಕೆಇಎ ಮೂಲಕ ಅಂತಿಮ ಸುತ್ತಿನ ಸೀಟು ಹಂಚಿಕೆಯ ನಂತರ ಸಂಸ್ಥೆಯಲ್ಲಿ ಉಳಿದಿರುವ ಬಿ,ಎಸ್ಸಿ. ನರ್ಸಿಂಗ್ ಸೀಟುಗಳನ್ನು ಕಾಲೇಜಿನ ಆಡಳಿತ ಸಮಿತಿಯ ಮೂಲಕ ಹಂಚಿಕೆ ಮಾಡಲು ಅರ್ಹ ಅಭ್ಯರ್ಥಿಗಳ
ರಿಮ್ಸ್‍ನಲ್ಲಿ ಉಳಿದಿರುವ ಬಿ,ಎಸ್ಸಿ ನರ್ಸಿಂಗ್ ಸೀಟು ಹಂಚಿಕೆಗೆ ಅರ್ಜಿ ಆಹ್ವಾನ


ರಾಯಚೂರು, 28 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ 2025-26ನೇ ಸಾಲಿನಲ್ಲಿ ಕೆಇಎ ಮೂಲಕ ಅಂತಿಮ ಸುತ್ತಿನ ಸೀಟು ಹಂಚಿಕೆಯ ನಂತರ ಸಂಸ್ಥೆಯಲ್ಲಿ ಉಳಿದಿರುವ ಬಿ,ಎಸ್ಸಿ. ನರ್ಸಿಂಗ್ ಸೀಟುಗಳನ್ನು ಕಾಲೇಜಿನ ಆಡಳಿತ ಸಮಿತಿಯ ಮೂಲಕ ಹಂಚಿಕೆ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಂಸ್ಥೆಯಲ್ಲಿ ಬಿ,ಎಸ್ಸಿ. ನರ್ಸಿಂಗ್ ಕೋರ್ಸ್‍ನ 27 ಹಂಚಿಕೆಯಾಗದೆ ಉಳಿದಿರುವ ಸೀಟುಗಳಿಗೆ ಅಕ್ಟೋಬರ್ 30ರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಅರ್ಹ ಅಭ್ಯರ್ಥಿಗಳ ನೊಂದಣಿಯನ್ನು ರಿಮ್ಸ್ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಮಾಡಬಹುದಾಗಿದೆ. ಮಧ್ಯಾಹ್ನ 1ರ ನಂತರ ನೊಂದಾಯಿಸಿದ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಕರೆದು ಸೀಟು ಹಂಚಿಕೆಯನ್ನು ಮಾಡಲಾಗುವುದು.

ಸೂಚನೆ: ಕೆಇಎ ವತಿಯಿಂದ ದಾಖಲಾತಿ ಪರಿಶೀಲನೆಯಾಗಿ ಪರಿಶೀಲನಾ ಸ್ಲಿಪ್‍ನ್ನು ಪಡೆದಿರುವ ಎಲ್ಲಾ ಅರ್ಹ ಅಭ್ಯರ್ಥಿಗಳ ನೊಂದಣಿಯನ್ನು ಮಾಡಲಾಗುವುದು. ಕೆಇಎ ವತಿಯಿಂದ ನೊಂದಾಯಿಸಿಕೊಂಡಿರುವ ಅರ್ಹ ವಿದ್ಯಾರ್ಥಿಗಳನ್ನು ಸಿಇಟಿ ನೋಂದಣಿ ಸಂಖ್ಯೆಯನ್ನು ನಮೂದಿಸಿ ಕೆಇಎ ಮೆರಿಟ್ ಸಂಖ್ಯೆ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುವುದು.

ಈ ಸೀಟು ಹಂಚಿಕೆಗೆ ಇದುವರೆಗೂ ಕೆಇಎ ವತಿಯಿಂದ ಯಾವುದೇ ಸೀಟು ಹಂಚಿಕೆಯಾಗದಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುವುದು. ಕೆಇಎ ಮೆರಿಟ್ ಸಂಖ್ಯೆ ಆಧಾರದ ಮೇಲೆ ಸೀಟುಗಳನ್ನು ಹಂಚಿಕೆ ಮಾಡಲಾಗುವುದು. ಕೆಇಎ ವತಿಯಿಂದ ದಾಖಲಾತಿ ಪರಿಶೀಲನೆಯಾಗಿ ಪರಿಶೀಲನಾ ಸ್ಲಿಪ್‍ನಲ್ಲಿ ನಮೂದಿಸಿರುವ ಎಲ್ಲಾ ಮೂಲದಾಖಲೆಗಳನ್ನು ಎರಡು ಜಿರಾಕ್ಸ್ ಪ್ರತಿ ಹಾಗೂ ಭಾವಚಿತ್ರಗಳೊಂದಿಗೆ ನಿಗದಿತ ಸಮಯ ಹಾಗೂ ಸ್ಥಳದಲ್ಲಿ ಹಾಜರಾಗಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ರಿಮ್ಸ್ ಸರ್ಕಾರಿ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ಶ್ರೀಶೈಲ್ ಶಂಕರಶೆಟ್ಟಿ ಮೊ: 9019656541, ಪ್ರಾಂಶುಪಾಲರಾದ ಶ್ರೀನಿವಾಸ ಮೊ: 7676147941, ಡಾಟಾ ಎಂಟ್ರಿ ಆಪರೇಟರ್ ಶೇಖ್ ಅಬ್ದುಲ್ ಮೊ: 7019783990ಗೆ ಸಂಪರ್ಕ ಮಾಡಬಹುದಾಗಿದೆ ಎಂದು ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಶೈಲ್ ಶಂಕರಶೆಟ್ಟಿ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande