ಅತ್ಯಾಧುನಿಕ ಯಶೋದಾ ಮೆಡಿಸಿಟಿ ಆಸ್ಪತ್ರೆ ಉದ್ಘಾಟಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಗಾಜಿಯಾಬಾದ್, 26 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿರುವ ಅತ್ಯಾಧುನಿಕ ಆಸ್ಪತ್ರೆ ‘ಯಶೋದಾ ಮೆಡಿಸಿಟಿ’ಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವೆ ಅನುಪ್ರ
President


ಗಾಜಿಯಾಬಾದ್, 26 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಗಾಜಿಯಾಬಾದ್‌ನ ಇಂದಿರಾಪುರಂ ಪ್ರದೇಶದಲ್ಲಿರುವ ಅತ್ಯಾಧುನಿಕ ಆಸ್ಪತ್ರೆ ‘ಯಶೋದಾ ಮೆಡಿಸಿಟಿ’ಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾನುವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವೆ ಅನುಪ್ರಿಯಾ ಪಟೇಲ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉಪಮುಖ್ಯಮಂತ್ರಿ ಬ್ರಿಜೇಶ್ ಪಾಠಕ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

1,200 ಹಾಸಿಗೆಗಳ ಸಾಮರ್ಥ್ಯ ಹೊಂದಿರುವ ಈ ಅತಿ-ಆಧುನಿಕ ಆಸ್ಪತ್ರೆಯು ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿದ್ದು, ರಾಷ್ಟ್ರಪತಿಗಳು ಉದ್ಘಾಟನೆಯ ಮುನ್ನ ಅದರ ವೈದ್ಯಕೀಯ ಉಪಕರಣಗಳು, ತುರ್ತು ಸೇವಾ ವಿಭಾಗಗಳು ಮತ್ತು ಸಂಶೋಧನಾ ಘಟಕಗಳನ್ನು ಪರಿಶೀಲಿಸಿದರು.

ಈ ಹೊಸ ಆಸ್ಪತ್ರೆಯು ಉತ್ತರ ಭಾರತದ ಅತ್ಯಾಧುನಿಕ ವೈದ್ಯಕೀಯ ಕೇಂದ್ರಗಳಲ್ಲಿ ಒಂದಾಗಿದ್ದು, ಹೃದ್ರೋಗ, ನರರೋಗ, ಅಂಗಾಂಗ ಸ್ಥಳಾಂತರ ಮತ್ತು ಆಪತ್ಕಾಲಿನ ಚಿಕಿತ್ಸಾ ವಿಭಾಗಗಳಲ್ಲಿ ವಿಶಿಷ್ಟ ಸೇವೆಗಳನ್ನು ನೀಡಲಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande