
ನವದೆಹಲಿ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್” ನ 127ನೇ ಸಂಚಿಕೆಯಲ್ಲಿ ಛಠ್ ಮಹಾಪರ್ವದ ಮಹತ್ವವನ್ನು ಒತ್ತಿ ಹೇಳಿದರು.
ಈ ಹಬ್ಬವು ಸಂಸ್ಕೃತಿ, ಪ್ರಕೃತಿ ಮತ್ತು ಸಮಾಜದ ನಡುವಿನ ಆಳವಾದ ಏಕತೆಯ ಸಂಕೇತ ಎಂದು ಪ್ರಧಾನಿ ಹೇಳಿದರು.
“ಛಠ್ ಹಬ್ಬದ ಸಂದರ್ಭದಲ್ಲಿ ಸಮಾಜದ ಪ್ರತಿಯೊಂದು ವರ್ಗದ ಜನರು, ಧಾರ್ಮಿಕ ಅಥವಾ ಸಾಮಾಜಿಕ ವ್ಯತ್ಯಾಸವಿಲ್ಲದೆ, ಒಂದೇ ಘಾಟ್‌ನಲ್ಲಿ ಸೇರಿ ಸೂರ್ಯನ ಆರಾಧನೆ ಮಾಡುತ್ತಾರೆ. ಇದು ಭಾರತದ ಸಾಮಾಜಿಕ ಏಕತೆ ಮತ್ತು ಸೌಹಾರ್ದತೆಯ ಅತ್ಯಂತ ಸುಂದರ ಉದಾಹರಣೆಯಾಗಿದ್ದು, ಅವಕಾಶ ಸಿಕ್ಕರೆ ಈ ಉತ್ಸವದಲ್ಲಿ ಭಾಗವಹಿಸಿ ಅದರ ಶಾಂತ, ಶುದ್ಧ ಮತ್ತು ಪ್ರಕೃತಿ ಪೂಜೆಯ ಮೌಲ್ಯವನ್ನು ಅನುಭವಿಸಿ” ಎಂದು ಕರೆ ನೀಡಿದರು.
ಛಠ್ ಕೇವಲ ಧಾರ್ಮಿಕ ಆಚರಣೆ ಮಾತ್ರವಲ್ಲ, ಅದು ಪ್ರಕೃತಿಯ ಗೌರವ, ಸೂರ್ಯ ಮತ್ತು ನೀರಿನ ಆರಾಧನೆ, ಮತ್ತು ಮಾನವ-ಪ್ರಕೃತಿ ಸಹಜ ಸಹಬಾಳ್ವೆಯ ಆಚರಣೆಯಾಗಿದೆ. ಈ ಹಬ್ಬವು ಭಾರತೀಯ ಜೀವನದ ಸರಳತೆ, ಶ್ರದ್ಧೆ ಮತ್ತು ಸಾಮಾಜಿಕ ಸಾಮರಸ್ಯದ ಪ್ರತೀಕವಾಗಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa