ರಫಿಯಾಬಾದ್ ಅರಣ್ಯದಲ್ಲಿ ಹಳೆಯ ಬಾಂಬ್ ಚಿಪ್ಪು ಪತ್ತೆ
ಬಾರಾಮುಲ್ಲಾ, 26 ಅಕ್ಟೋಬರ್(ಹಿ.ಸ.): ಆ್ಯಂಕರ್ : ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್‌ನ ಡೋಗ್ರಿಪೋರಾ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಸೇನೆ ಎರಡು ಹಳೆಯ ಬಾಂಬ್ ಚಿಪ್ಪುಗಳನ್ನು ಪತ್ತೆ ಹಚ್ಚಿದೆ. ನಂತರ ಬಾಂಬ್ ನಿಷ್ಕ್ರಿಯ ದಳ ಅವುಗಳನ್ನು ಸುರಕ್ಷಿತವಾಗಿ ನಾಶಪಡಿಸಿದೆ ಎಂ
Bomb


ಬಾರಾಮುಲ್ಲಾ, 26 ಅಕ್ಟೋಬರ್(ಹಿ.ಸ.):

ಆ್ಯಂಕರ್ : ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್‌ನ ಡೋಗ್ರಿಪೋರಾ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯ ವೇಳೆ ಸೇನೆ ಎರಡು ಹಳೆಯ ಬಾಂಬ್ ಚಿಪ್ಪುಗಳನ್ನು ಪತ್ತೆ ಹಚ್ಚಿದೆ. ನಂತರ ಬಾಂಬ್ ನಿಷ್ಕ್ರಿಯ ದಳ ಅವುಗಳನ್ನು ಸುರಕ್ಷಿತವಾಗಿ ನಾಶಪಡಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

32ನೇ ರಾಷ್ಟ್ರೀಯ ರೈಫಲ್ಸ್ ಪಡೆ ಶೋಧದ ವೇಳೆ ಈ ಲೋಹದ ವಸ್ತುಗಳನ್ನು ಕಂಡು ಹಿಡಿದಿದ್ದು, ತಕ್ಷಣ ಸ್ಥಳವನ್ನು ಸುತ್ತುವರಿದು ಬಾಂಬ್ ನಿಷ್ಕ್ರಿಯ ದಳವನ್ನು ಕರೆಯಿಸಿ. ತಾಂತ್ರಿಕ ಮೌಲ್ಯಮಾಪನದ ನಂತರ, ಬಿಡಿಎಸ್ ತಂಡ ನಿಯಂತ್ರಿತ ಸ್ಫೋಟದ ಮೂಲಕ ಶೆಲ್‌ಗಳನ್ನು ನಾಶಪಡಿಸಿತು.

ಕಾರ್ಯಾಚರಣೆಯ ವೇಳೆ ಯಾವುದೇ ಜೀವಹಾನಿ ಅಥವಾ ಗಾಯಗಳ ಘಟನೆ ವರದಿಯಾಗಿಲ್ಲ. ಸೇನಾ ಅಧಿಕಾರಿಗಳು ಪತ್ತೆಯಾದ ಶೆಲ್‌ಗಳು ಹಳೆಯವು ಹಾಗೂ ತುಕ್ಕು ಹಿಡಿದಿದ್ದವು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande