
ನವದೆಹಲಿ, 26 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ “ಮನ್ ಕಿ ಬಾತ್” ನ 127ನೇ ಸಂಚಿಕೆಯಲ್ಲಿ ಭದ್ರತಾ ಪಡೆಗಳಲ್ಲಿ ಭಾರತೀಯ ತಳಿಯ ನಾಯಿಗಳನ್ನು ಅಳವಡಿಸಿಕೊಂಡಿರುವುದನ್ನು ಶ್ಲಾಘಿಸಿದರು.
“ಐದು ವರ್ಷಗಳ ಹಿಂದೆ ನಾನು ನಾಗರಿಕರು ಹಾಗೂ ಭದ್ರತಾ ಪಡೆಗಳು ಭಾರತೀಯ ತಳಿಯ ನಾಯಿಗಳನ್ನು ದತ್ತು ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದೆ. ಈಗ ಅದು ಕಾರ್ಯರೂಪಕ್ಕೆ ಬಂದಿದೆ ಎಂಬುದು ಹೆಮ್ಮೆಯ ವಿಚಾರ” ಎಂದು ಹೇಳಿದರು.
ಬಿಎಸ್ಎಫ್ ಮತ್ತು ಸಿಆರ್‌ಪಿಎಫ್ ಪಡೆಗಳು ತಮ್ಮ ತಂಡಗಳಲ್ಲಿ ಭಾರತೀಯ ತಳಿಯ ನಾಯಿಗಳ ಸಂಖ್ಯೆಯನ್ನು ಹೆಚ್ಚಿಸಿವೆ ಎಂದು ಪ್ರಧಾನಿ ಹೇಳಿದರು.
ಗ್ವಾಲಿಯರ್‌ನ ಟೆಕನ್ಪುರದಲ್ಲಿರುವ ಬಿಎಸ್ಎಫ್ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ರಾಂಪುರ್ ಹೌಂಡ್, ಮುಧೋಳ ಹೌಂಡ್ ಮುಂತಾದ ಭಾರತೀಯ ತಳಿಗಳಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ.
ಬೆಂಗಳೂರು ಸಿಆರ್‌ಪಿಎಫ್ ಶ್ವಾನ ತರಬೇತಿ ಶಾಲೆಯಲ್ಲಿ ಮೊಂಗ್ರೆಲ್, ಮುಧೋಳ ಹೌಂಡ್, ಕೊಂಬೈ, ಮತ್ತು ಪಾಂಡಿಕೋಣ ತಳಿಗಳ ನಾಯಿಗಳಿಗೆ ತರಬೇತಿ ನೀಡಲಾಗುತ್ತಿದೆ. ಕಳೆದ ವರ್ಷ ಲಕ್ನೋದಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಕರ್ತವ್ಯ ಮೀಟ್‌ನಲ್ಲಿ ಮುಧೋಳ ಹೌಂಡ್ “ರಿಯಾ” ವಿದೇಶಿ ತಳಿಗಳನ್ನು ಹಿಂದಿಕ್ಕಿ ಪ್ರಥಮ ಬಹುಮಾನ ಗೆದ್ದಿತು.
“ಭಾರತೀಯ ತಳಿಯ ನಾಯಿಗಳು ಸ್ಥಳೀಯ ಹವಾಮಾನ ಹಾಗೂ ಪರಿಸರಕ್ಕೆ ಶೀಘ್ರವಾಗಿ ಹೊಂದಿಕೊಳ್ಳುತ್ತವೆ,” ಎಂದು ಪ್ರಧಾನಿ ಮೋದಿ ಪ್ರಶಂಸಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa