ರೈಲುಗಳಲ್ಲಿ ಜನದಟ್ಟಣೆ ಸರ್ಕಾರದ ವೈಫಲ್ಯ : ರಾಹುಲ್ ಗಾಂಧಿ ಟೀಕೆ
ನವದೆಹಲಿ, 25 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಹಬ್ಬಗಳ ಸಮಯದಲ್ಲಿ ರೈಲುಗಳಲ್ಲಿ ಉಂಟಾಗುವ ಭಾರಿ ಜನದಟ್ಟಣೆ ಮತ್ತು ಪ್ರಯಾಣಿಕರ ಕಷ್ಟವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ಸಂಪೂರ್ಣ ವೈಫಲ್ಯವೆಂದು ಕರೆದಿದ್ದಾರೆ. ದೀಪಾವಳಿ ಮತ್ತು ಛತ್ ಪೂಜೆಯ ಸಮಯದಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರ ಕಡೆಗೆ
Rahul


ನವದೆಹಲಿ, 25 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಹಬ್ಬಗಳ ಸಮಯದಲ್ಲಿ ರೈಲುಗಳಲ್ಲಿ ಉಂಟಾಗುವ ಭಾರಿ ಜನದಟ್ಟಣೆ ಮತ್ತು ಪ್ರಯಾಣಿಕರ ಕಷ್ಟವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸರ್ಕಾರದ ಸಂಪೂರ್ಣ ವೈಫಲ್ಯವೆಂದು ಕರೆದಿದ್ದಾರೆ. ದೀಪಾವಳಿ ಮತ್ತು ಛತ್ ಪೂಜೆಯ ಸಮಯದಲ್ಲಿ ಉತ್ತರ ಪ್ರದೇಶ ಹಾಗೂ ಬಿಹಾರ ಕಡೆಗೆ ತೆರಳುವ ರೈಲುಗಳಲ್ಲಿ ಪ್ರಯಾಣಿಕರು ಎದುರಿಸುತ್ತಿರುವ ಗೊಂದಲದ ದೃಶ್ಯಗಳು ಸರ್ಕಾರದ ನಿರ್ವಹಣಾ ವೈಫಲ್ಯವನ್ನು ತೋರಿಸುತ್ತವೆ ಎಂದು ಅವರು ಎಕ್ಸನಲ್ಲಿ ಹೇಳಿದ್ದಾರೆ.

ಪ್ರತಿ ವರ್ಷವೂ ಬಿಹಾರಕ್ಕೆ ಹಿಂತಿರುಗುವ ಕಾರ್ಮಿಕರು ಬಾಗಿಲು, ಛಾವಣಿ ಹಾಗೂ ಎಂಜಿನ್‌ಗಳ ಮೇಲೂ ನೇತಾಡುತ್ತಾ ಪ್ರಯಾಣಿಸಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ. 12,000 ವಿಶೇಷ ರೈಲುಗಳನ್ನು ಸರ್ಕಾರ ಚಾಲನೆ ಮಾಡುತ್ತಿದೆ ಎಂಬ ಹೇಳಿಕೆ ಇದ್ದರೂ ಪರಿಸ್ಥಿತಿ ಹದಗೆಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ ರಾಹುಲ್ ಗಾಂಧಿ, ಬಿಹಾರ ಮತ್ತು ಪೂರ್ವ ಭಾರತದ ಜನರು ತಮ್ಮ ರಾಜ್ಯದಲ್ಲೇ ಉದ್ಯೋಗ ಮತ್ತು ಗೌರವಾನ್ವಿತ ಜೀವನವನ್ನು ಪಡೆದಿದ್ದರೆ ಇಂತಹ ಹೀನ ಪರಿಸ್ಥಿತಿ ಎದುರಿಸಬೇಕಾಗಿರುತ್ತಿರಲಿಲ್ಲ ಎಂದು ಹೇಳಿದರು.

“ಸುರಕ್ಷಿತ ಹಾಗೂ ಗೌರವಾನ್ವಿತ ಪ್ರಯಾಣವು ನಾಗರಿಕರ ಮೂಲಭೂತ ಹಕ್ಕು ಅದು ಸರ್ಕಾರದ ಕೃಪೆಯಲ್ಲ,” ಎಂದು ಹೇಳಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande