ಪ್ರೇಮ ವೈಫಲ್ಯ ; ಯುವತಿಯ ಕುಟುಂಬದ ಮೇಲೆ ಮಚ್ಚಿನಿಂದ ಹಲ್ಲೆ, ಆತ್ಮಹತ್ಯೆ
ಸಂಡೂರು, 04 ಜನವರಿ (ಹಿ.ಸ.) : ಆ್ಯಂಕರ್ : ಪ್ರೇಮ ವೈಫಲ್ಯಕ್ಕೆ ಒಳಗಾಗಿದ್ದ ಯುವಕನು ಪ್ರಿಯತಮೆಯ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತನಗರ ರೈಲ್ವೆನಲ್ಲಿ ಶನಿವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಹೊಸಪೇಟೆಯ ಪಾಪಿನಾಯಕ
ಪ್ರೇಮ ವೈಫಲ್ಯ ; ಯುವತಿಯ ಕುಟುಂಬದ ಮೇಲೆ ಮಚ್ಚಿನಿಂದ ಹಲ್ಲೆ, ಆತ್ಮಹತ್ಯೆ


ಪ್ರೇಮ ವೈಫಲ್ಯ ; ಯುವತಿಯ ಕುಟುಂಬದ ಮೇಲೆ ಮಚ್ಚಿನಿಂದ ಹಲ್ಲೆ, ಆತ್ಮಹತ್ಯೆ


ಸಂಡೂರು, 04 ಜನವರಿ (ಹಿ.ಸ.) :

ಆ್ಯಂಕರ್ : ಪ್ರೇಮ ವೈಫಲ್ಯಕ್ಕೆ ಒಳಗಾಗಿದ್ದ ಯುವಕನು ಪ್ರಿಯತಮೆಯ ಕುಟುಂಬದ ಸದಸ್ಯರ ಮೇಲೆ ಹಲ್ಲೆ ನಡೆಸಿ, ರೈಲ್ವೆ ಹಳಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಶವಂತನಗರ ರೈಲ್ವೆನಲ್ಲಿ ಶನಿವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಹೊಸಪೇಟೆಯ ಪಾಪಿನಾಯಕನಹಳ್ಳಿ ನಿವಾಸಿ ನವೀನಕುಮಾರ (25).

ಬಾಳೆಹಣ್ಣಿನ ವ್ಯಾಪಾರ ಮಾಡುತ್ತಿದ್ದ ನವೀನ ಹಾಗೂ ಸಂಡೂರಿನ ಗೌರಮ್ಮ (ಹೆಸರು ಬದಲಾಯಿಸಲಾಗಿದೆ) ಜೊತೆ ಕಾಲೇಜು ದಿನಗಳಿಂದಲೇ ಪರಸ್ಪರ ಪ್ರೀತಿ ಮೂಡಿತ್ತು.

ಪದವಿ ಪೂರ್ಣಗೊಳಿಸಿದ್ದ ಕೀರ್ತಿಯು ಉನ್ನತ ವ್ಯಾಸಂಗದ ಕನಸು ಕಂಡಿದ್ದರಿಂದ ಪ್ರೇಮ ಸಲ್ಲಾಪಕ್ಕೆ ಬೇಕ್ ಹಾಕುವುದಾಗಿ ನವೀನ್‍ಗೆ ತಿಳಿಸಿದ್ದರಿಂದ ತೀವ್ರ ಅಸಮಾಧಾನಗೊಂಡಿದ್ದ ಆತನು, ಸಂಡೂರು ಪಟ್ಟಣದ ಚರ್ಚ್ ರಸ್ತೆಯಲ್ಲಿರುವ ಗೌರಮ್ಮಳ ಮನೆಗೆ ಶುಕ್ರವಾರ ಬಂದು, ಮನೆಯವರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ, ಪರಾರಿಯಾಗಿದ್ದ. ಮಚ್ಚಿನಿಂದ ಹಲ್ಲೆಗೊಳಗಾಗಿದ್ದ ಗೌರಮ್ಮ ಅವರ ತಾಯಿ ಮತ್ತು ಸಹೋದರ ತೋರಣಗಲ್ಲು ಜಿಂದಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.

ನವೀನ್ ಹಲ್ಲೆ ಮಾಡಿರುವ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿತ್ತು. ಅಷ್ಟರಲ್ಲಿಯೇ, ಆರೋಪಿಯು ಯಶವಂತನಗರ - ಸ್ವಾಮಿಹಳ್ಳಿ ಮಧ್ಯೆ ಗೂಡ್ಸ್ ಸಂಚರಿಸುವ ಹಳಿಯ ಮೇಲೆ ಮಲಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande