ಯುವಕನಿಗೆ ಚಾಕು ಇರಿತ ಪ್ರಕರಣ : ೭ ಆರೋಪಿಗಳ ಬಂಧನ
ಹುಬ್ಬಳ್ಳಿ, 02 ಜನವರಿ (ಹಿ.ಸ.) : ಆ್ಯಂಕರ್ : ಹುಬ್ಬಳ್ಳಿಯ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಅವಳಿ ನಗರ ಉಪ ಪೋಲಿಸ ಆಯುಕ್ತ ಮಹನಿಂಗ ನಂದಗಾವಿ ಹೇಳಿದರು. ಹಳೇಹುಬ್
Arrest


ಹುಬ್ಬಳ್ಳಿ, 02 ಜನವರಿ (ಹಿ.ಸ.) :

ಆ್ಯಂಕರ್ : ಹುಬ್ಬಳ್ಳಿಯ ಹಳೇಹುಬ್ಬಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಅವಳಿ ನಗರ ಉಪ ಪೋಲಿಸ ಆಯುಕ್ತ ಮಹನಿಂಗ ನಂದಗಾವಿ ಹೇಳಿದರು.

ಹಳೇಹುಬ್ಬಳ್ಳಿ ಠಾಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಯೋಧ್ಯಾ ನಗರದಲ್ಲಿ ಮಾರುತಿ ನಾರಾಯಣಪುರ ಎಂಬಾತನ ಮೇಲೆ ಯುವಕರ ಗುಂಪೊಂದು ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದರು.

ಗಂಭೀರವಾಗಿ ಗಾಯಗೊಂಡ ಮಾರುತಿಯನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಕರಣಕ್ಕೆ ಸಂಭಂದಿಸಿದಂತೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಶಿವಶಂಕರ ಕಾಲೋನಿಯ ನಿವಾಸಿಗಳಾದ ರೋಹಿತ್ ಹಂಚಿನಮನಿ, ವಿಶಾಲ ಬಿಲಾನಾ, ಕುಶಾಲ ವಜ್ಜನ್ನವರ, ಶ್ರೀಕಾಥ್ ದುಂಡಿ, ವಿಶಾಲ ಡೋಣಿ, ಅಜಯ್ ಹಂಚಿನಮನಿ, ಪೃಥ್ವಿರಾಜ್ ಕೌದಿ ಎಂಬಾತರನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಎರಡು ಚಾಕು, ಒಂದು ಪಂಚ್ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande