ಬಿಮ್ಸ್ : ಲೈಂಗಿಕ ದೌರ್ಜನ್ಯ, ಬ್ಲಾಕ್ ಮೇಲ್ ; ಆರೋಪಿ ಬಂಧನ 
ಬಳ್ಳಾರಿ, 03 ಜನವರಿ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಲೇರಿಯಾ ವಿಭಾಗ ಅಧೀಕ್ಷಕ ವಿ.ಕೆ. ವೆಂಕಟೇಶ್ ಮೇಲೆ ಸಹದ್ಯೋಗಿ ಮಹಿಳೆಯು ಗುರುವಾರ ರಾತ್ರಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯು ರಾತ್ರಿಯೇ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ
ಬಿಮ್ಸ್ : ಮಹಿಳಾ ಸಹದ್ಯೋಗಿಗೆ ಲೈಂಗಿಕ ದೌರ್ಜನ್ಯ-ಬ್ಲಾಕ್ ಮೇಲ್ ; ಆರೋಪಿ ಬಂಧನ


ಬಳ್ಳಾರಿ, 03 ಜನವರಿ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಆಸ್ಪತ್ರೆಯ ಮಲೇರಿಯಾ ವಿಭಾಗ ಅಧೀಕ್ಷಕ ವಿ.ಕೆ. ವೆಂಕಟೇಶ್ ಮೇಲೆ ಸಹದ್ಯೋಗಿ ಮಹಿಳೆಯು ಗುರುವಾರ ರಾತ್ರಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿಯು ರಾತ್ರಿಯೇ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಿಮ್ಸ್ (ವಿಮ್ಸ್) ನಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗೃಹಿಣಿ ರಂಗೀಲಾ (ಹೆಸರು ಬದಲಾಯಿಸಲಾಗಿದೆ) ಅವರು ಗುರುವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತಕ್ಷಣವೇ ಆರೋಪಿಯನ್ನು ವಶಕ್ಕೆ ಪಡೆದು, ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದ ವಿವರ:

ಬಿಮ್ಸ್ (ವಿಮ್ಸ್)ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ 2019 ರಿಂದ ಕೆಲಸ ಮಾಡುತ್ತಿರುವ ರಂಗೀಲಾ ಅವರಿಗೆ ಆರೋಗ್ಯ ಇಲಾಖೆಯಿಂದ ಬಿಮ್ಸ್ನಲ್ಲಿ ಡೆಪ್ಯುಟೇಷನ್ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಕೆ. ವೆಂಕಟೇಶ್ ಅವರ ಮಧ್ಯೆ ಸಹದ್ಯೋಗಿ ಎನ್ನುವ ಸಲುಗೆ ಇತ್ತು. ಈ ಸಲುಗೆಯನ್ನು ದುರುಪಯೋಗ ಮಾಡಿಕೊಳ್ಳಲು ಯತ್ನಿಸಿ ಆರೋಪಿಯು ದೂರುದಾರಳಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದ. ಆರೋಪಿಯು ಮರ್ಯಾದೆಗೆ ಭಯ ಬಿದ್ದು ಸುಮ್ಮನಿದ್ದಳು ಎನ್ನಲಾಗಿದೆ.

2024ರ ನವೆಂಬರ್‌ನಲ್ಲಿ ವಿವಾಹವಾದ ದೂರುದಾರೆ ರಂಗೀಲಾ ಅವರು, ಡಿಸೆಂಬರ್‌ನಲ್ಲಿ ಕರ್ತವ್ಯಕ್ಕೆ ಪುನಃ ಹಾಜರಾದಾಗ ಆರೋಪಿ ವಿ.ಕೆ. ವೆಂಕಟೇಶ ಜಿಲ್ಲಾ ಆಸ್ಪತ್ರೆಯಿಂದ ಬಿಮ್ಸ್ಗೆ ಬಂದು, ಅನಗತ್ಯವಾಗಿ ಕಿರುಕುಳ ನೀಡುವುದು ಅಲ್ಲದೇ, `ನೀನು, ನಿನ್ನ ಗಂಡನ ಜೊತೆಗೆ ಏಕೆ ಇರುತ್ತೀಯಿ? ನನ್ನ ಹತ್ರ ಇರಬೇಕು ಎಂದು ಬೈಯ್ದು ಕಪಾಳಕ್ಕೆ ಹೊಡೆದು, ನಾವಿಬ್ಬರು ಜೊತೆಗಿರುವ ಫೋಟೋಗಳು ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟು, ನಿನ್ನ ಮತ್ತು ನಿಮ್ಮ ತಂದೆ ತಾಯಿ ಹಾಗೂ ನಿಮ್ಮ ಕುಟುಂಬದ ಮಾರ್ಯಾದೆ ಹರಾಜು ಹಾಕುತ್ತೇನೆಂದು ಬೆದರಿಸಿ'ದ್ದಾನೆ ಎಂದು ದೂರುದಾರೆ ವಿವರಿಸಿದ್ದಾರೆ.

ಅಷ್ಟೇ ಅಲ್ಲ, `ಕಾರ್ ನಂಬರ್ ಕೆವಿ 34/ಪಿ-2555ರಲ್ಲಿ ತನ್ನನ್ನು ಬಲವಂತವಾಗಿ, ಕೂಡಿಸಿಕೊಂಡು ಬೆಳಗಲ್ ಕ್ರಾಸ್‌ನಲ್ಲಿರುವ

ಆಕಾಶವಾಣಿ ಕೇಂದ್ರದ ಬಳಿ ಇರುವ ಲೇಔಟ್ ಒಂದರಲ್ಲಿ, ತನ್ನ ಇಷ್ಟಕೆ ವಿರುದ್ಧವಾಗಿ ಲೈಂಗಿಕ ದೌರ್ಜನ್ಯ ಮಾಡಿರುತ್ತಾನೆ. ಇದೇ ರೀತಿಯಾಗಿ ಆಗಾಗ ಆಸ್ಪತ್ರೆ ಬಳಿ ಬಂದು ಮತ್ತೆ ಮತ್ತೆ ಲೈಂಗಿಕ ದೌರ್ಜನ್ಯ ಮಾಡುತ್ತಿದ್ದಾನೆ. ತನಗೆ ತಿಳಿಯದೇ ಫೋಟೋ, ವಿಡೀಯೋ ಮಾಡಿಕೊಂಡು, ತನ್ನ ಗಂಡನ ಕ್ಯಾರೆಕ್ಟರ್ ಸರಿ ಇಲ್ಲ. ಅವನಿಗೆ ಕೆಟ್ಟ ಅಭ್ಯಾಸಗಳಿವೆ. ಅವನನ್ನು ಬಿಟ್ಟುಬಿಡು. ಇಲ್ಲದಿದ್ದರೆ, ನನ್ನ ಮತ್ತು ನಿನ್ನ ಫೋಟೋ ಹಾಗೂ ವಿಡಿಯೋಗಳನ್ನು ಗಂಡನ ಹಾಗೂ ತಮ್ಮ ಕುಟುಂಬದವರ ಮೊಬೈಲ್‌ನಲ್ಲಿ, ಹರಿಬಿಟ್ಟು ನಿನ್ನನ್ನು ಬೀದಿಯಲ್ಲಿ ನಿಲ್ಲಿಸುತ್ತೇನೆ. ಅಲ್ಲದೇ, ನಿನ್ನ ತಂಗಿ ಹಾಗೂ ನಿಮ್ಮ ತಾಯಿಗೆ ವೇಶ್ಯಾಟಿಕೆ ಕೇಸಿನಲ್ಲಿ, ಜೈಲ್ ಹಾಕುವಂತೆ ಮಾಡುತ್ತೇನೆ ಎಂದು ಹೆದರಿಸಿದ್ದಾನೆ' ಎಂದು ದೂರುದಾರೆ ವಿವರಿಸಿದ್ದಾರೆ.

ಕಾರಣ, ವಿ.ಕೆ. ವೆಂಕಟೇಶ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande