ಗುಗ್ಗರಹಟ್ಟಿಯ ಬಾಲಕ ನಾಪತ್ತೆ : ಪತ್ತೆಗೆ ಮನವಿ
ಬಳ್ಳಾರಿ, 06 ಜನವರಿ (ಹಿ.ಸ.) : ಆ್ಯಂಕರ್ : ಬಳ್ಳಾರಿ ಗ್ರಾಮೀಣ ಭಾಗದ ಗುಗ್ಗರಹಟ್ಟಿಯ ಸಾಯಿ ಕಾಲೋನಿಯ ನಿವಾಸಿಯಾದ ಅಶ್ವತ್ (15) ಡಿಸೆಂಬರ್ 25 ರಂದು ಹೊನ್ನಳ್ಳಿ ಬ್ರಿಡ್ಜ್ ಹೆಚ್‍ಎಲ್‍ಸಿ ಕಾಲುವೆಯಲ್ಲಿ ಈಜಾಡಲು ಹೋಗಿ ಕಾಣೆಯಾಗಿದ್ದಾನೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ. ಚಹರೆ: ಅಂದಾಜು 4 ಅಡಿ ಎ
ಗುಗ್ಗರಹಟ್ಟಿಯ ಬಾಲಕ ನಾಪತ್ತೆ: ಪತ್ತೆಗೆ ಮನವಿ


ಬಳ್ಳಾರಿ, 06 ಜನವರಿ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಗ್ರಾಮೀಣ ಭಾಗದ ಗುಗ್ಗರಹಟ್ಟಿಯ ಸಾಯಿ ಕಾಲೋನಿಯ ನಿವಾಸಿಯಾದ ಅಶ್ವತ್ (15) ಡಿಸೆಂಬರ್ 25 ರಂದು ಹೊನ್ನಳ್ಳಿ ಬ್ರಿಡ್ಜ್ ಹೆಚ್‍ಎಲ್‍ಸಿ ಕಾಲುವೆಯಲ್ಲಿ ಈಜಾಡಲು ಹೋಗಿ ಕಾಣೆಯಾಗಿದ್ದಾನೆ ಎಂದು ಪೋಷಕರು ದೂರು ದಾಖಲಿಸಿದ್ದಾರೆ.

ಚಹರೆ: ಅಂದಾಜು 4 ಅಡಿ ಎತ್ತರ, ತೆಳುವಾದ ಮೈಕಟ್ಟು, ದುಂಡು-ಮುಖ, ಕಪ್ಪು ಮೈಬಣ್ಣ, ಕಪ್ಪು ಕೂದಲು, ಬಲಗಾಲಿಗೆ ಕಪ್ಪು ದಾರ ಕಟ್ಟಿಕೊಂಡಿದ್ದು, ಕೆಂಪು ಉಡದಾರ ಧರಿಸಿರುತ್ತಾನೆ. ಬಾಲಕನು ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.

ಬಾಲಕನ ಬಗ್ಗೆ ಸುಳಿವು ಸಿಕ್ಕಲ್ಲಿ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯ ದೂ.08392-276461, ಮೊ.9480803049 ಅಥವಾ ಬಳ್ಳಾರಿ ಪೊಲೀಸ್ ಕಂಟ್ರೋಲ್ ರೂಂ ದೂ.08392-258100 ಗೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande