ಕೋಲಾರ, ಜನವರಿ ೨೨ (ಹಿ.ಸ.) :
ಆ್ಯಂಕರ್ : ಪರಿಶಿಷ್ಠ ಜಾತಿಗಳ ಜಾತಿ ಕದ್ದು ೨೦೧೩ರಲ್ಲಿ ಶಾಸಕನಾಗಿ ವಂಚಿಸಿದ ಕೊತ್ತೂರು ಮಂಜುನಾಥ್ ವಿರುದ್ಧ ನ್ಯಾಯಾಲಯಗಳ ಆದೇಶಗಳಂತೆ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿ ಜನಾಂದೋಲನ ಪ್ರತಿಭಟನೆಯನ್ನು ನಗರದ ಬಂಗಾರಪೇಟೆ ವೃತ್ತದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಎಸ್.ಎನ್.ಆರ್ ಸರ್ಕಲ್, ಎಂಜಿ ರಸ್ತೆ, ಅಮ್ಮವಾರಿ ಪೇಟೆ ವೃತ್ತ ಮೂಲಕ ಮೆಕ್ಕೆ ಸರ್ಕಲ್ ನಲ್ಲಿ ಮಾನವ ಸರಪಳಿಯನ್ನು ನಿರ್ಮಿಸಿ, ತಾಲೂಕು ಕಚೇರಿಗೆ, ಮುತ್ತಿಗೆ ಹಾಕಿ, ಕೆಲ ಕಾಲ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ದಲಿತ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ಟಿಪ್ಪು ಸೆಕ್ಯುಲರ್ ಸೇನೆ ಕಾರ್ಯಕರ್ತರು ಒಟ್ಟುಗೂಡಿ ಕೋಲಾರ ಶಾಸಕ ಕೊತ್ತೂರು ಮಂಜುನಾಥರನ್ನು ಬಂಧಿಸುವಂತೆ ಧಿಕ್ಕಾರಗಳನ್ನು ಕೂಗಿ ರಾಜ್ಯ ಸರ್ಕಾರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ದಲಿತ ಸಿಂಹ ಸೇನೆ ರಾಜ್ಯಾಧ್ಯಕ್ಷ ಹೂಹಳ್ಳಿ ಪ್ರಕಾಶ್ ಮಾತನಾಡಿ, ಮುಳಬಾಗಿಲು ಮೀಸಲು ಕ್ಷೇತ್ರದ ಶಾಸಕ ಕೊತ್ತೂರು ಮಂಜುನಾಥ್ ಅವರನ್ನು ಬಂಧಿಸುವ ಆದೇಶವನ್ನು ಸುಪ್ರೀಂ ಕೋರ್ಟ್ ಹಾಗೂ ಹೈ ಕೋರ್ಟ್ ಜಾತಿ ಕದ್ದ ಪ್ರಕರಣದಲ್ಲಿ ತೀರ್ಪನ್ನು ನೀಡಿದೆ ಎಂದರು.
ರಾಜ್ಯ ಸರ್ಕಾರಕ್ಕೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಇನ್ನೂ ಯಾವ ಸಾಕ್ಷಿ ಬೇಕಾಗಿದೆ ಎಂದು ಪ್ರಶ್ನಿಸಿದ್ದಾರೆ. ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸರಿಗೆ ಶಾಸಕ ಕೊತ್ತೂರು ಮಂಜುನಾಥರನ್ನು ಬಂಧಿಸುವ ಆದೇಶಗಳು ಇದ್ದರೂ ಸಹ ಬಂಧಿಸುವ ಮನಸ್ಸು ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.
ಮುಳಬಾಗಿಲು ಮೀಸಲು ವಿಧಾನಸಭಾ ಕ್ಷೇತ್ರದಿಂದ ೨೦೧೩ ರಿಂದ ೨೦೧೮ ರ ವರೆಗೂ ಸಹ ಸತತವಾಗಿ ಹೋರಾಟಗಳನ್ನು ಮಾಡಿಕೊಂಡು ಬರಲಾಗಿದೆ, ಜಾತಿ ಕದ್ದ ಕಳ್ಳ ಕೊತ್ತೂರು ಮಂಜುನಾಥ್ ವಿರುದ್ಧವಾಗಿ ವಿವಿಧ ದಲಿತ ಪರ ಸಂಘಟನೆ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ ಎಂದರು.
ಶಾಸಕ ಕೊತ್ತೂರು ಮಂಜುನಾಥ್ ಬಂಧಿಸಲು ರಾಜ್ಯ ಸರ್ಕಾರ ವಿಫಲವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತ ವಿರೋಧಿ ಹಾಗೂ ಸಂವಿಧಾನ ವಿರೋಧಿ ಸಿಎಂ ಹಾಗೂ ಸರ್ಕಾರವಾಗಿದೆ ಎಂದು ದೂರಿದರಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಳ್ಳತನ ಮಾಡಿದ್ದಾರೆ, ಇನ್ನು ಕೊತ್ತೂರು ಮಂಜುನಾಥ್ ರಂತಹ ಕಳ್ಳರನ್ನು ಬಂಧಿಸುವ ಕೆಲಸ ಮಾಡಬೇಕು ಎಂದು ಲೇವಡಿ ಮಾಡಿದರು.
ದಲಿತ ಮುಖಂಡ ದಲಿತ್ ನಾರಾಯಣಸ್ವಾಮಿ ಮಾತನಾಡಿ, ಕಳೆದ ಡಿ. ೧೨ ರಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ತೀರ್ಪು ಪ್ರಕರಣದಲ್ಲಿ ಕೊತ್ತೂರು ಜಿ.ಮಂಜುನಾಥ್ ರನ್ನು ಠಾಣೆಗೆ ಕರೆಸಿ ದಸ್ತಗಿರಿ ಮಾಡಿ ಚಾರ್ಜ್ ಶೀಟ್ ಸಲ್ಲಿಸುವ ಕೆಲಸಕ್ಕೆ ಚಾಲನೆ ನೀಡದೆ ಇರುವುದು ಅನೇಕ ಅನುಮಾನಗಳಿಗೆ ಆಸ್ಪದವನ್ನು ಮಾಡಿಕೊಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ಪ್ರಭಾವ ಹಾಗೂ ಒತ್ತಡ ಪರಿಣಾಮವಾಗಿ ಪರಿಶಿಷ್ಟ ಜಾತಿ ಕದ್ದ ವ್ಯಕ್ತಿಯನ್ನು ರಕ್ಷಿಸುವ ಕಾನೂನು ಕ್ರಮಗಳನ್ನು ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಲಿತ ಸಂಘಟನೆ ಮುಖಂಡರಾದ ಚೇತನ್ಬಾಬು, ಅನಂತ್ ಕೀರ್ತಿ, ಹುಣಸನಹಳ್ಳಿ ವೆಂಕಟೇಶ್, ಚಿಕ್ಕ ನಾರಾಯಣ, ಕರ್ನಾಟಕ ಟಿಪ್ಪು ಸೆಕ್ಯುಲರ್ ಸೇನೆ ರಾಜ್ಯಾಧ್ಯಕ್ಷ ಆಸೀಫ್, ರವಿ, ಅಂಬರೀಶ್, ರಾಮಚಂದ್ರ, ಪಿ.ವಿ.ಸಿ.ಮಣಿ, ರಮೇಶ್, ಸದಾಶಿವ, ಹನುಮಾನ್, ವಿವಿಧಪರ ಸಂಘಟನೆ ಕಾರ್ಯಕರ್ತರು ಹಾಗೂ ಕರ್ನಾಟಕ ಟಿಪ್ಪು ಸೆಕ್ಯುಲರ್ ಸೇನೆ ಮುಖಂಡರು ಕಾರ್ಯಕರ್ತರು ಇದ್ದರು.
ಚಿತ್ರ: ಕೋಲಾರ ಶಾಸಕ ಕೊತ್ತೂರು ಮಂಜುನಾಥ್ ರನ್ನು ಕೂಡಲೇ ಬಂದಿಸಬೇಕು ಎಂದು ಒತ್ತಾಯಿಸಿ ವಿವಿದ ದಲಿತ ಪರ ಸಂಘಟನೆಗಳು ಕೋಲಾರ ನಗರದ ಪ್ರಮುಖ ರಸ್ತೆಗಳನ್ನು ಪ್ರತಿಭಟನೆ ನಡೆಸಿ ತಾಲ್ಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್