ಶಿವಮೊಗ್ಗ,23ಜನವರಿ (ಹಿ.ಸ.):
ಆ್ಯಂಕರ್ : ಶಿವಮೊಗ್ಗ ಸೇರಿದಂತೆ ಅಕ್ಕ ಪಕ್ಕದ ಜಿಲ್ಲೆಯ ವ್ಯಾಪ್ತಿಯಲ್ಲಿ ಇಂದಿನಿಂದ ಎಫ್ಎಂ ರೇಡಿಯೋ ಜಾರಿಗೆ ಬರಲಿದೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಆಕಾಶವಾಣಿ ಕೇಂದ್ರದ ಸಾಮರ್ಥ್ಯ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈಗ ಇರುವ ಮೀಡಿಯಂ ವೇವ್, ಫ್ರೀಕ್ವೆನ್ಸಿ ಮಾಡ್ಯುಲೇಷನ್ ಟ್ರಾನ್ಸ್ ಮಿಷನ್ ಗೆ ಅಂದರೆ ಎಫ್.ಎಂಗೆ ಬದಲಾಗಿದೆ. ಇಂದರಿಂದ ಶಿವಮೊಗ್ಗದ ಚಿತ್ರಣವನ್ನು ಜಗತ್ತಿನ ಮುಂದಿಡಲು ಪ್ರಯತ್ನ ಮಾಡಲಾಗುತ್ತದೆ.
ಎಫ್ಎಂ ರೇಡಿಯೋ ಟ್ರಾನ್ಸ್ಮೀಟರ್ನ್ನು ಶಿವಮೊಗ್ಗ ನಗರದ ವಿದ್ಯಾನಗರದ ದೂರದರ್ಶನ ಟವರ್ ಮೇಲೆ ಅಳವಡಿಸಲಾಗಿದ್ದು, ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ: ಎಲ್ ಮುರುಗನ್ ಇಂದು ಶಿವಮೊಗ್ಗ ದೂರದರ್ಶನ ಕೇಂದ್ರದಲ್ಲಿ ಟ್ರಾನ್ಸ್‌ಮೀಟರ್‌ಗೆ ಪೂಜೆ ಸಲ್ಲಿಸಲಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV