ನವದೆಹಲಿ, 2 ಜನವರಿ (ಹಿ.ಸ.) :
ಆ್ಯಂಕರ್ :೨೦೨೪ರಲ್ಲಿ ೨೫ ಪ್ರಕರಣಗಳಲ್ಲಿ ೬೮ ಆರೋಪಿಗಳಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ-ಎನ್‌ಐಎ ಅಧಿಕಾರಿಗಳ ಸೂಕ್ಷ್ಮ ತನಿಖೆ ಮತ್ತು ನಿಖರವಾದ ಕಾನೂನು ತಂತ್ರಗಳಿಂದ ಸಾಧ್ಯವಾಗಿದೆ.
ಈ ಮೂಲಕ ಈ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಶೇಕಡ ೧೦೦ ರಷ್ಟಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ತಿಳಿಸಿದೆ.
ಎನ್‌ಐಎ ಪ್ರಕಾರ ೨೦೨೪ರಲ್ಲಿ ದಾಖಲಿಸಿದ ೮೦ ಪ್ರಕರಣಗಳ ಪ್ರಮುಖ ಅಪರಾಧ ವಿಭಾಗಗಳಲ್ಲಿ ಒಟ್ಟು ೨೧೦ ಆರೋಪಿಗಳನ್ನು ಬಂಧಿಸಲಾಗಿದೆ.
ಇವುಗಳಲ್ಲಿ ೨೮ ಪ್ರಕರಣಗಳೊಂದಿಗೆ ಎಡಪಂಥಿಯ ಉಗ್ರವಾದ ಹಾಗೂ ೧೮ ಪ್ರಕರಣಗಳೊಂದಿಗೆ ಈಶಾನ್ಯ ಬಿಕ್ಕಟ್ಟು, ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿವೆ. ಅಲ್ಲದೇ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ೭ ಪ್ರಕರಣಗಳು, ೬ ಸ್ಫೋಟಕ ವಸ್ತುಗಳನ್ನು ಒಳಗೊಂಡ ಪ್ರಕರಣಗಳು ಮತ್ತು ೫ ಮಾನವ ಕಳ್ಳಸಾಗಾಣೆ ಪ್ರಕರಣಗಳು ಸೇರಿವೆ.
---------------
ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್ ಪಿ .ವಿ