ಮಹಾಕುಂಭದಲ್ಲಿ 3.5 ಕೋಟಿಗೂ ಹೆಚ್ಚು  ಭಕ್ತರಿಂದ ಸಂಕ್ರಾಂತಿ ತೀರ್ಥ ಸ್ನಾನ
 
ಮಹಾಕುಂಭದಲ್ಲಿ 3.5 ಕೋಟಿಗೂ ಹೆಚ್ಚು  ಭಕ್ತರಿಂದ ಸಂಕ್ರಾಂತಿ ತೀರ್ಥ ಸ್ನಾನ


ಮಹಾಕುಂಭ ನಗರ್,15 ಜನವರಿ (ಹಿ.ಸ.) :

ಆ್ಯಂಕರ್ :ಕಳೆದ ಜ. 13 ರಂದು ಪೌಷ ಪೂರ್ಣಿಮೆಯಂದು ಭಕ್ತಿ ಗಾಯನ, ಭಜನೆಗಳು ಮತ್ತು ದೆವರ ಘೋಷಣೆಗಳೊಂದಿಗೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮದಲ್ಲಿ ಪ್ರಾರಂಭವಾದ ಮಹಾಕುಂಭ ಮೇಳ ಇಂದು ಮೂರನೆ ದಿನಕ್ಕೆ ಕಾಲಿಟ್ಟಿದೆ.ವಿಶ್ವದ ಅತಿದೊಡ್ಡ ಆಧ್ಯಾತ್ಮಿಕ ಕೂಟವಾಗಿದೆ.

ಪ್ರಯಾಗ್‌ರಾಜ್‌ನಲ್ಲಿ ಮಹಾಕುಂಭ ನಡೆಯುತ್ತಿದೆ. ನಿನ್ನೆ, ಮಕರ ಸಂಕ್ರಾಂತಿ ಅಮೃತ ಸ್ನಾನದ ಸಂದರ್ಭದಲ್ಲಿ ಮೂರು ಕೋಟಿ ಐವತ್ತು ಲಕ್ಷಕ್ಕೂ ಹೆಚ್ಚು ಭಕ್ತರು ಮತ್ತು ಯಾತ್ರಿಕರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಮಹಾಕುಂಭ ಮೇಳದ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ಇಂದು ತಿಳಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande