ಮನ್ ಕಿ ಬಾತ್ ; ಇಚ್ಛೆಯಂತೆ ಔಷಧ ಸೇವನೆ ಬೇಡ : ಪ್ರಧಾನಿ ಮೋದಿ
ಇಚ್ಛೆ
Mann ki bath


ನವದೆಹಲಿ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್’ನಲ್ಲಿ, ವೈದ್ಯರ ಸಲಹೆಯಿಲ್ಲದೆ ಔಷಧಿಗಳು, ವಿಶೇಷವಾಗಿ ಪ್ರತಿಜೀವಕಗಳನ್ನು ಸೇವಿಸಬಾರದೆಂದು ನಾಗರಿಕರಿಗೆ ಮನವಿ ಮಾಡಿದರು.

ಐಸಿಎಂಆರ್ ವರದಿಯನ್ನು ಉಲ್ಲೇಖಿಸಿ, ಪ್ರತಿಜೀವಕಗಳ ಅತಿಯಾದ ಮತ್ತು ವಿವೇಚನೆಯಿಲ್ಲದ ಬಳಕೆಯಿಂದ ಕೆಲವು ರೋಗಗಳಿಗೆ ಅವು ಪರಿಣಾಮಕಾರಿತ್ವ ಕಳೆದುಕೊಳ್ಳುತ್ತಿರುವುದು ಆತಂಕಕಾರಿ ಎಂದು ಹೇಳಿದರು.

ಕಾರ್ಯಕ್ರಮದ 129ನೇ ಹಾಗೂ 2025ರ ಕೊನೆಯ ಸಂಚಿಕೆಯಲ್ಲಿ, ರಾಷ್ಟ್ರೀಯ ಭದ್ರತೆ, ಕ್ರೀಡೆ, ವಿಜ್ಞಾನ ಮತ್ತು ನಾವೀನ್ಯತೆಯ ಕ್ಷೇತ್ರಗಳಲ್ಲಿ ದೇಶ ಸಾಧಿಸಿದ ಪ್ರಗತಿಯನ್ನು ಪ್ರಧಾನಿ ಎತ್ತಿ ತೋರಿಸಿದರು. ಯುವಕರ ಪಾತ್ರವನ್ನು ಕೊಂಡಾಡಿ, ಜನವರಿ 12ರಂದು ಸ್ವಾಮಿ ವಿವೇಕಾನಂದರ ಜನ್ಮದಿನದಂದು ನಡೆಯಲಿರುವ ಯುವ ನಾಯಕರ ಸಂವಾದದಲ್ಲಿ ತಾವೂ ಭಾಗವಹಿಸುವುದಾಗಿ ಘೋಷಿಸಿದರು.

ಮಣಿಪುರದ ಯುವಕರ ಸ್ವಾವಲಂಬಿ ಉಪಕ್ರಮಗಳು, ಜಮ್ಮು–ಕಾಶ್ಮೀರದ ಪುರಾತತ್ವ ಸಂಶೋಧನೆ, ನರಸಪುರಂ ಲೇಸ್ ಕಲೆ, ತಮಿಳು ಭಾಷೆಯ ವೈಭವ ಹಾಗೂ ದೇಶದ ಅನಾಮಧೇಯ ವೀರರ ಸೇವೆಯನ್ನು ಪ್ರಧಾನಿ ಸ್ಮರಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಗುಜರಾತ್‌ನ ಕಚ್‌ನಲ್ಲಿ ನಡೆಯುತ್ತಿರುವ ರಣ್ ಉತ್ಸವಕ್ಕೆ ಭೇಟಿ ನೀಡುವಂತೆ ಜನತೆಗೆ ಕರೆ ನೀಡಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande