ಲಘು ರಥೋತ್ಸವ (ಉಚ್ಛಾಯಿ) 
ಕೊಪ್ಪಳ, 15 ಜನವರಿ (ಹಿ.ಸ.) : ಆ್ಯಂಕರ್ : ಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವದ ಹಿಂದಿನ ದಿನವಾದ ಮಹಾರಥೋತ್ಸವು ಸಾಂಗತ್ಯವಾಗಿ, ನಿರ್ವಿಘ್ನವಾಗಿ, ಧಾರ್ಮಿಕ ಸದಾಶಯಗಳಂತೆ ಯಶಸ್ವಿಯಾಗಲಿ ಎಂಬ ಮುನ್ನುಡಿಯಂತೆ ನಿನ್ನೆ ಸಾಯಂಕಾಲ 6 ಘಂಟೆಗೆ ಲಘು ರಥೋತ್ಸವ ಕಾರ್ಯಕ್ರಮವು ನಡೆಯಿತು. ಇದನ್ನು ‘
ಲಘು ರಥೋತ್ಸವ (ಉಚ್ಛಾಯಿ) 


ಕೊಪ್ಪಳ, 15 ಜನವರಿ (ಹಿ.ಸ.) :

ಆ್ಯಂಕರ್ : ಗವಿಮಠದ ಜಾತ್ರೆಯ ಅಂಗವಾಗಿ ಜರುಗುವ ಮಹಾರಥೋತ್ಸವದ ಹಿಂದಿನ ದಿನವಾದ ಮಹಾರಥೋತ್ಸವು ಸಾಂಗತ್ಯವಾಗಿ, ನಿರ್ವಿಘ್ನವಾಗಿ, ಧಾರ್ಮಿಕ ಸದಾಶಯಗಳಂತೆ ಯಶಸ್ವಿಯಾಗಲಿ ಎಂಬ ಮುನ್ನುಡಿಯಂತೆ ನಿನ್ನೆ ಸಾಯಂಕಾಲ 6 ಘಂಟೆಗೆ ಲಘು ರಥೋತ್ಸವ ಕಾರ್ಯಕ್ರಮವು ನಡೆಯಿತು.

ಇದನ್ನು ‘ಉಚ್ಛಾಯ’ ಎಂತಲೂ ಕರೆಯುತ್ತಾರೆ.ಲಘು ರಥೋತ್ಸವಕ್ಕೆ ಪೂಜೆ ಸಲ್ಲಿಸಿದ ನಂತರ ವಿಜೃಂಭಣೆಯಿಂದ ಭಕ್ತಿ-ಭಾವಗಳೊಂದಿಗೆ ಲಘು ರಥೋತ್ಸವ ಮುಂದೆ ಸಾಗಿತು, ಆಕರ್ಷಕ ನಂದಿಕೋಲು, ಪಂಜು, ಇಲಾಲುಗಳು, ವಾದ್ಯಗಳು, ಲಘು ರಥೋತ್ಸವಕ್ಕೆ ಮೆರಗುತಂದು ಕೊಟ್ಟವು.ಭಕ್ತಾಧಿಗಳು ಉತ್ತತಿಯನ್ನುಎಸೆದು ಭಕ್ತಿ-ಭಾವ ಮೆರೆದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande