ಕೊಪ್ಪಳದಲ್ಲಿ ಇಂದು ಗವಿಮಠ ಮಹಾರಥೋತ್ಸವ 
ಕೊಪ್ಪಳ, 15 ಜನವರಿ (ಹಿ.ಸ.) : ಆ್ಯಂಕರ್ : ಪ್ರತಿವರ್ಷ ನಡೆಯುವ ಕೊಪ್ಪಳದ ಸುಪ್ರಸಿದ್ದ ಗವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ರಥೋತ್ಸವ ನಡೆಯಲಿದೆ. ಈ ಜಾತ್ರೆಯು ದಕ್ಷಿಣ ಭಾರತದ ಕುಂಬಮೇಳ ಎಂದೇ ಪ್ರಸಿದ್ದಿ ಪಡೆದಿದೆ. ಶ್ರೀ ಗವಿಮಠದ ಕರ್ತೃಗದ್ದುಗೆಯ ಮುಂಭಾಗದಲ್ಲಿ ಬಸವ ಪಟ ಆರೋಹಣ ಸೇರ
. ರಥೋತ್ಸವಕ್ಕೆ ದೇಶದ ಅನೇಕ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.


ಕೊಪ್ಪಳ, 15 ಜನವರಿ (ಹಿ.ಸ.) :

ಆ್ಯಂಕರ್ : ಪ್ರತಿವರ್ಷ ನಡೆಯುವ ಕೊಪ್ಪಳದ ಸುಪ್ರಸಿದ್ದ ಗವಿಸಿದ್ದೇಶ್ವರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ರಥೋತ್ಸವ ನಡೆಯಲಿದೆ. ಈ ಜಾತ್ರೆಯು ದಕ್ಷಿಣ ಭಾರತದ ಕುಂಬಮೇಳ ಎಂದೇ ಪ್ರಸಿದ್ದಿ ಪಡೆದಿದೆ. ಶ್ರೀ ಗವಿಮಠದ ಕರ್ತೃಗದ್ದುಗೆಯ ಮುಂಭಾಗದಲ್ಲಿ ಬಸವ ಪಟ ಆರೋಹಣ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ವಿದ್ಯುಕ್ತವಾಗಿ ಚಾಲನೆಗೊಂಡಿವೆ.

ಸರ್ವಧರ್ಮೀಯರು ಸೇರಿ ನಡೆಸುವ ರಥೋತ್ಸವದ ಹಿನ್ನೆಲೆ ಮಠದ ಆವರಣದಲ್ಲಿ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಇಂದು ಸಂಜೆ 5:30ಕ್ಕೆ ಮಠದ ಮುಂದಿರುವ ಮೈದಾನದಲ್ಲಿ, ಮಹಾ ರಥೋತ್ಸವ ನಡೆಯಲಿದೆ.

ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸಾನಿಧ್ಯದಲ್ಲಿ ,ಧಾರವಾಡದ ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕ ಪದ್ಮಶ್ರೀ ಪಂಡಿತ ಎಮ್ ವೆಂಕಟೇಶ್ ಕುಮಾರ್ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ನಾಳೆ ಬಳಗಾನೂರು ಶ್ರೀ ಶಿವಶಾಂತವೀರ ಶರಣರ ದೀರ್ಘದಂಡ ನಮಸ್ಕಾರ, ಧಾರ್ಮಿಕ ಗೋಷ್ಠಿ, ಮದ್ದು ಸುಡುವ ಕಾರ್ಯಕ್ರಮ ಜರುಗಲಿದೆ. ನಾಡಿದ್ದು ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ.

15 ದಿನಗಳ ಕಾಲ ನಡೆಯುವ ಕೊಪ್ಪಳದ ಗವಿಮಠದ ಜಾತ್ರೆಗೆ, ದೇಶದ ಅನೇಕ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.ಅಮಾವಾಸ್ಯೆ ಮುಗಿಯುವವರೆಗೂ ಭಕ್ತರಿಗೆ ವಸತಿ ವ್ಯವಸ್ಥೆ , ಆರೋಗ್ಯ ತಪಾಸಣೆ,‌ ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / Dr. Vara Prasada Rao PV


 rajesh pande