
ಹುಬ್ಬಳ್ಳಿ, 15 ಮಾರ್ಚ್ (ಹಿ.ಸ.):
ಆ್ಯಂಕರ್:
*ಮೇಷ ರಾಶಿ.*
ಇಂದು ನಿಮ್ಮ ವ್ಯಪಾರದಲ್ಲಿ ಹೆಚ್ಚು ಲಾಭವನ್ನು ಪಡೆಯುವಿರಿ, ಇಡೀ ದಿನ ಕೆಲಸದ ಸ್ಥಳದಲ್ಲಿ ದುಡಿಯುವಿರಿ, ಯಾವುದೇ ಕೆಲಸವನ್ನು ಮಾಡಲು ತೊಡಗುತ್ತೀರಿ, ಇದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ವಾಹನ ಚಲಾಯಿಸುವಾಗ ನೀವು ಜಾಗರೂಕರಾಗಿರಬೇಕು, ನಿಮ್ಮ ಯಾವುದೇ ಕಾನೂನು ಕೆಲಸವನ್ನು ವಿಳಂಬ ಮಾಡುವುದು ಬೇಡ.
*ವೃಷಭ ರಾಶಿ.*
ಇಂದು ನೀವು ನಿಮ್ಮ ಕುಟುಂಬದ ಸದಸ್ಯರ ಅಗತ್ಯತೆಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತೀರಿ, ಇದರಿಂದಾಗಿ ಅವರು ಸ್ವಲ್ಪ ಸಮಾಧಾನವನ್ನು ಹೊಂದಬಹುದು, ಆದರೆ ಕೆಲವು ಹಿತ ಶತ್ರುಗಳು ನಿಮ್ಮ ನೆಮ್ಮದಿಯನ್ನು ಹಾಳು ಮಾಡುವರು, ನಿಮ್ಮ ಖರ್ಚುಗಳು ಹೆಚ್ಚಾಗಬಹುದು.
*ಮಿಥುನ ರಾಶಿ.*
ನಿಮ್ಮ ಕೆಲಸದ ಸ್ಥಳದಲ್ಲಿ ಸರಿಯಾದ ಯೋಜನೆ ಮತ್ತು ಕೆಲಸ ಮಾಡಿದರೆ ಆಗ ಮಾತ್ರ ನೀವು ಸಮಸ್ಯೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ನಿಮ್ಮ ಆರ್ಥಿಕ ಸ್ಥಿತಿಯು ಈಗಾಗಲೇ ಪ್ರಬಲವಾಗಿರುವುದರಿಂದ ನೀವು ಸಂತೋಷವಾಗಿರುತ್ತೀರಿ. ನೀವು ಮಕ್ಕಳ ಕಡೆಗೆ ಹೆಚ್ಚು ಗಮನ ಕೊಡಬೇಕು, ಇಲ್ಲದಿದ್ದರೆ ಅವರು ಕೆಲವು ತಪ್ಪು ಕೆಲಸಕ್ಕೆ ಕಾರಣವಾಗಬಹುದು.
*ಕಟಕ ರಾಶಿ.*
ಇಂದು ನೀವು ಕೆಲವು ಅನಗತ್ಯ ವಸ್ತುಗಳನ್ನು ಖರೀದಿಸಬಹುದು, ಹಣ ಪೂಲಾಗುವ ಸಾದ್ಯತೆ ಇದೆ, ನೀವು ಹೊಸ ವ್ಯವಹಾರವನ್ನು ಪ್ರಾರಂಭಿಸಲು ಆಲೋಚನೆ ಮಾಡಬಹುದು, ನೀವು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ ಮತ್ತು ತಾಂತ್ರಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ತಮ್ಮ ಸಂಶೋಧನೆಯೊಂದಿಗೆ ಕೆಲವು ಉತ್ತಮ ಕೆಲಸಗಳನ್ನು ಮಾಡಬಹುದು.
*ಸಿಂಹ ರಾಶಿ.*
ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ನಿಮ್ಮ ಕುಟುಂಬದೊಂದಿಗೆ ಧಾರ್ಮಿಕ ಸ್ಥಳಕ್ಕೆ ಹೋಗಬಹುದು. ವ್ಯವಹಾರದಲ್ಲಿ ನಡೆಯುತ್ತಿರುವ ಕೆಲವು ಅಡೆತಡೆಗಳು ನಿಮ್ಮನ್ನು ಕಾಡುತ್ತಿದ್ದರೆ, ನೀವು ಅವುಗಳನ್ನು ಬಹಳ ಜಾಗ್ರತೆಯಿಂದ ನಿಭಾಯಿಸಿ.
*ಕನ್ಯಾ ರಾಶಿ.*
ಇಂದು ನೀವು ವಹಿವಾಟಿನ ವಿಷಯದಲ್ಲಿ ಜಾಗರೂಕರಾಗಿರಬೇಕಾದ ದಿನವಾಗಿದೆ. ನೀವು ಜನರೊಂದಿಗೆ ಸಮಯವನ್ನು ಕಳೆದು ಸಮಯ ವ್ಯರ್ಥ ಮಾಡದಿರಿ, ಇದರಿಂದಾಗಿ ನಿಮ್ಮ ಬಹಳಷ್ಟು ಕೆಲಸಗಳು ಸ್ಥಗಿತಗೊಳ್ಳಬಹುದು. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲೆ ಹೆಚ್ಚಿನ ಕೆಲಸದ ಹೊರೆಯಿಂದಾಗಿ ನೀವುತೊಂದರೆಗೊಳಗಾಗುತ್ತೀರಿ.
*ತುಲಾ ರಾಶಿ.*
ಇಂದು ವ್ಯಾಪಾರದಲ್ಲಿ ನಡೆಯುತ್ತಿರುವ ಸಮಸ್ಯೆಗಳಿಂದ ಮುಕ್ತಿ ಪಡೆಯುವ ದಿನ. ಈ ದಿನದ ಸ್ವಲ್ಪ ಸಮಯವನ್ನು ಕುಟುಂಬದ ಸದಸ್ಯರೊಂದಿಗೆ ಮಾತುಕತೆಯಲ್ಲಿ ಕಳೆಯುವಿರಿ. ಚಿಕ್ಕ ಮಕ್ಕಳು ಸಹ ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ. ಹಣ ವ್ಯಯವಾಗುವ ಸಾದ್ಯತೆ ಇದೆ.
*ವೃಶ್ಚಿಕ ರಾಶಿ.*
ಇಂದು ಉತ್ಸಾಹದಿಂದ ತುಂಬಿರುವ ಕಾರಣ, ನೀವು ತಕ್ಷಣ ಯಾವುದೇ ಹೊಸ ಕೆಲಸವನ್ನು ಮಾಡುವುದು ಬೇಡ. ವಿದ್ಯಾರ್ಥಿಗಳಿಗೆ ಉತ್ತಮ ದಿನ, ನೀವು ಈ ಹಿಂದೆ ಯಾರೊಬ್ಬರಿಂದ ಹಣವನ್ನು ಸಾಲವಾಗಿ ಪಡೆದಿದ್ದರೆ, ಅವರು ಇಂದು ನಿಮ್ಮನ್ನು ಮರಳಿ ಕೇಳಲು ಬರಬಹುದು. ಅತಿಥಿಗಳ ಆಗಮನ ನಿಮ್ಮ ಕುಟುಂಬದಲ್ಲಿ ಸಂತಸ ತರಬಹುದು.
*ಧನುಸ್ಸು ರಾಶಿ.*
ಇಂದು ನಿಮಗೆ ಸಾಮಾನ್ಯ ದಿನವಾಗಲಿದೆ. ಅನಾವಶ್ಯಕವಾಗಿ ವಾದದಲ್ಲಿ ತೊಡಗುವ ಮೂಲಕ ನೀವು ಕೆಲವು ತೊಂದರೆಗಳಿಗೆ ಸಿಲುಕಿಕೊಳ್ಳಬಹುದು, ಆದ್ದರಿಂದ ನೀವು ಯಾರೊಂದಿಗಾದರೂ ಮಾತನಾಡುವಾಗ ಬಹಳ ಯೋಚಿಸಿ ಮಾತನಾಡಿ, ನಿಮ್ಮ ಉತ್ತಮ ಆಲೋಚನೆಯೊಂದಿಗೆ ಕೆಲಸದ ಸ್ಥಳದಲ್ಲಿ ನಿಮ್ಮ ಅಧಿಕಾರಿಗಳು ಸಹ ಸಂತೋಷವಾಗಿರುತ್ತಾರೆ.
*ಮಕರ ರಾಶಿ.*
ಇಂದು ನಿಮಗೆ ತುಂಬಾ ಫಲಪ್ರದವಾಗಲಿದೆ. ನಿಮಗೆ ಕೆಲವು ಹಣಕ್ಕೆ ಸಂಬಂಧಿತ ಸಮಸ್ಯೆಗಳು ಇದ್ದಲ್ಲಿ, ಇಂದು ನೀವು ಅವುಗಳನ್ನು ಸಹ ತೊಡೆದುಹಾಕಬಹುದು. ನೀವು ಕೆಲವು ಉತ್ಸವದಲ್ಲಿ ಭಾಗವಹಿಸಬಹುದು, ಶತ್ರುಗಳನ್ನು ಜಯಿಸುವ ಮೂಲಕ, ನೀವು ಯಾವುದೇ ಸಮಸ್ಯೆಯಿಂದ ಸುಲಭವಾಗಿ ಹೊರಬರುತ್ತೀರಿ.
*ಕುಂಭ ರಾಶಿ.*
ವ್ಯಾಪಾರ ಮಾಡುವ ಜನರಿಗೆ ಇಂದು ಹೊಸ ಲಾಭಗಳು ಸಂತೋಷವನ್ನುಂಟು ಮಾಡುತ್ತದೆ. ನಿಮ್ಮ ಗೌರವದ ಹೆಚ್ಚಳದೊಂದಿಗೆ, ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ ಮತ್ತು ನಿಮ್ಮ ಅತ್ತೆಯ ಕಡೆಯಿಂದ ನೀವು ಹಣಕಾಸಿನ ಲಾಭವನ್ನು ಪಡೆಯಬಹುದು. ನೀವು ಸ್ನೇಹಿತರೊಂದಿಗೆ ಹೊರ ಹೋಗಲು ಯೋಚಿಸಬಹುದು. ವಿದ್ಯಾರ್ಥಿಗಳು ಹೊಸ ವಿಷಯವನ್ನು ಅಧ್ಯಯನ ಮಾಡುತ್ತಾರೆ.
*ಮೀನ ರಾಶಿ.* ವೈವಾಹಿಕ ಜೀವನದಲ್ಲಿ ಇಂದು ಕೆಲವು ಸಮಸ್ಯೆಗಳನ್ನು ಎದಿರಿಸುವಿರಿ. ನಿಮ್ಮ ಸಂಗಾತಿಯ ಮುನಿಸು ನಿಮ್ಮ ಮನಸ್ಸಿನ ಮೇಲೆ ಹೆಚ್ಚು ಪರಿಣಾಮ ಬೀರುವುದು, ಹಣದ ಕೊರತೆಯಿಂದ ನಿಮ್ಮ ಆರ್ಥಿಕ ಸ್ಥಿತಿಯೂ ಕುಂಠಿತವಾಗಬಹುದು. ಕುಟುಂಬದಲ್ಲಿ ನಡೆಯುತ್ತಿರುವ ವಿವಾದವು ನಿಮ್ಮ ನೆಮ್ಮದಿಯನ್ನು ಹಾಳು ಮಾಡುತ್ತದೆ, ಇದು ಕುಟುಂಬದಲ್ಲಿ ಶಾಂತಿಯನ್ನು ಕದಡುತ್ತದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh Mahadevappa