ದರ್ಶನ್​ ಚಾರ್ಜ್​ಶೀಟ್​ಗಾಗಿ ₹1 ಲಕ್ಷ ರೂಪಾಯಿ ಖರ್ಚು​​
ದುಬಾರಿಯಾದ ದರ್ಶನ್​ ಚಾರ್ಜ್​ಶೀಟ್
ಬೆಂಗಳೂರು,4ಸೆಪ್ಟೆಂಬರ್ (ಹಿ.ಸ.) : ಆ್ಯಂಕರ್ :


ಬೆಂಗಳೂರು, 04 ಸೆಪ್ಟೆಂಬರ್ (ಹಿ.ಸ.) :

ಆ್ಯಂಕರ್ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ನಟ ದರ್ಶನ್‌ ಮತ್ತು ತಂಡ ವಿರುದ್ಧ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಆದರೆ ಅಚ್ಚರಿ ಸಂಗತಿ ಎಂದರೆ ಪೊಲೀಸ್​​ ಇಲಾಖೆ ಚಾರ್ಜ್​ಶೀಟ್​ಗಾಗಿ ₹1 ಲಕ್ಷ ಖರ್ಚು ಮಾಡಿದ್ದಾರೆ ಎಂಬ ಸಂಗತಿ ಹೊರಬಿದ್ದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ಚಾರ್ಜ್​ಶೀಟ್​ ದುಬಾರಿ ಎಂದೆನಿಸಿಕೊಂಡಿದೆ. ಪೊಲೀಸ್​ ಇಲಾಖೆಯು ಪ್ರಕರಣದ ತನಿಖೆಗೆ ₹5 ಲಕ್ಷ ಹಣ ಖರ್ಚು ಮಾಡಿದೆ ಎಂದು ತಿಳಿದು ಬಂದಿದೆ. ಕೊಲೆ ಪ್ರಕರಣದ ಸಂಬಂಧ 22 ಬಂಡಲ್ ಚಾರ್ಚ್ ಶೀಟ್ ಸಲ್ಲಿಕೆಗೆ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದರು. ಒಟ್ಟಾರೆ 90 ಸಾವಿರ ಪುಟಗಳಿಗೆ 90 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ. ಉಳಿದ ಹತ್ತು ಸಾವಿರ ರೂಪಾಯಿ ಕವರ್ ಬೈಂಡಿಂಗ್​​ಗೆ ಎಂದು ಖರ್ಚು ಮಾಡಿದ್ದಾರೆ ಎನ್ನಲಾಗುತ್ತಿದೆ.

17 ಆರೋಪಿಗಳಿಗೂ ಒಂದೊಂದು ಕಾಪಿ ಚಾರ್ಜ್​ಶೀಟ್ ಸಲ್ಲಿಸಬೇಕು. ನ್ಯಾಯಾಲಯಕ್ಕೆ ಮತ್ತು ವಕೀಲರಿಗೆ ಸೇರಿ ಒಟ್ಟು 22 ಸೆಟ್ ಬೇಕು. 3 ದಿನಗಳಿಂದ ಚಾರ್ಜ್​ಶೀಟ್​ನಲ್ಲಿ ಯಾವುದೇ ತಪ್ಪಾಗದ ರೀತಿ ಎಚ್ಚರವಹಿಸಲಾಗಿದೆ. ಚಾರ್ಜ್​ಶೀಟ್​ ಸೇರಿ ತನಿಖೆಯ ಒಟ್ಟು ಖರ್ಚು 6 ಲಕ್ಷ 45 ಸಾವಿರ ರೂಪಾಯಿಯಾಗಿದೆ ಎಂದು ತಿಳಿದುಬಂದಿದೆ.

ಹಿಂದೂಸ್ತಾನ್ ಸಮಾಚಾರ್ / ಡಾ.ಪಿ.ವಿ.ಪ್ರಸಾದ ರಾವ್


 rajesh pande