ಕಾಮಸಮುದ್ರಂ ಪೊಲೀಸರಿಂದ ಮನೆ ಕನ್ನ ಕಳವು ಪ್ರಕರಣದ ಆರೋಪಿಯ ಬಂಧನ
ಕಾಮಸಮುದ್ರಂ ಪೊಲೀಸರಿಂದ ಮನೆ ಕನ್ನ ಕಳವು ಪ್ರಕರಣದ ಆರೋಪಿಯ ಬಂಧನ
ಕೆಜಿಎಫ್ ಪೊಲೀಸ್ ಜಿಲ್ಲೆಯ ಕಾಮಸಮುದ್ರ ಪೊಲೀಸರು ಮನೆ ಕನ್ನ ಕಳುವು ಪ್ರಕರಣದಲ್ಲಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.


ಕೋಲಾರ, ಡಿಸೆಂಬರ್ ೦೪ (ಹಿ.ಸ) :

ಆ್ಯಂಕರ್ : ಕಾಮಸಮುದ್ರಂ ಪೊಲೀಸರು ಮನೆ ಕನ್ನ ಕಳವು ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ಸುಮಾರು ರೂ.೧೦,೭೦,೦೦೦/- ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಂಡಿದ್ದಾರೆ.

ಅ. ೧೩ ರಂದು ದೂರುದಾರರಾದ ಭೀಮಗಾನಹಳ್ಳಿ ಗ್ರಾಮದ ಶ್ರೀನಿವಾಸ ಎಂಬುವರು ತನ್ನ ಮನೆಯಲ್ಲಿ ಕಳ್ಳತನವಾಗಿರುವ ಬಗ್ಗೆ ಕಾಮಮುದ್ರಂ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.

ಕಾಮಸಮುದ್ರಂ ವೃತ್ತದ ಪ್ರಭಾರ ಸಿ.ಪಿ.ಐ ಎಸ್.ಟಿ.ಮಾರ್ಕೋಂಡಯ್ಯ ಮತ್ತು ಕಾಮಸಮುದ್ರಂ ಪಿ.ಎಸ್.ಐ ಕಿರಣ್‌ಕುಮಾರ್ ಬಿ.ವಿ. ರವರ ತಂಡವು ಕಾರ್ಯಾಚರಣೆ ನಡೆಸಿ ಭೀಮಗಾನಹಳ್ಳಿ ಗ್ರಾಮದ ವಾಸಿ ಪ್ರೇಮಾ (೩೫ವರ್ಷ) ಎಂಬುವರನ್ನು ಬಂಧಿಸಿ, ಆಕೆಯಿಂದ ರೂ.೧೦,೭೦,೦೦೦/- ಮೌಲ್ಯದ ೮೮.೩೪೧ ಗ್ರಾಂ ಚಿನ್ನದ ಆಭರಣಗಳು, ಬಂಗಾರ ತರಹ ಕಾಣುವ (ಉಮಾ ಗೋಲ್ಡ್) ೨೬.೪೦೦ ಗ್ರಾಂನ ನೆಕ್ಲೇಸ್, ೧೪೦ ಗ್ರಾಂ ತೂಕದ ಬೆಳ್ಳಿಯ ಕಾಲ್ಚೆöÊನುಗಳು & ಕತ್ತಿನ ಚೈನು ರೂ.೧,೭೦,೦೦೦/- ನಗದು ಹಣ ವಶಪಡಿಸಿಕೊಂಡು ಆರೋಪಿತೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿರುತ್ತದೆ.

ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕಾಮಸಮುದ್ರಂ ವೃತ್ತದ ಪ್ರಭಾರ ಸಿ.ಪಿ.ಐ ಎಸ್.ಟಿ. ಮಾರ್ಕೋಂಡಯ್ಯ, ಪಿ.ಎಸ್.ಐ ಬಿ.ವಿ.ಕಿರಣ್‌ಕುಮಾರ್, ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಮುನಾವರ್‌ಪಾಷ, ರಾಮರಾವ್, ದೇವರಾಜ್, ರಾಮಕೃಷ್ಣಾರೆಡ್ಡಿ, ಜಯಸುಧಾ, ಮಂಜುನಾಥ, ಮಾರ್ಕೊಂಡ, ಲಕ್ಷö್ಮಣತೇಲಿ ಹಾಗೂ ಜೀಪ್ ಚಾಲಕ ಗುರುಮೂರ್ತಿ ರವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್ ಅವರು ಪ್ರಶಂಶಿಸಿದ್ದಾರೆ.

ಚಿತ್ರ : ಕೆಜಿಎಫ್ ಪೊಲೀಸ್ ಜಿಲ್ಲೆಯ ಕಾಮಸಮುದ್ರ ಪೊಲೀಸರು ಮನೆ ಕನ್ನ ಕಳುವು ಪ್ರಕರಣದಲ್ಲಿ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande