ಅಕ್ರಮ ಗ್ಯಾಸ್ ರಿಫಿಲಿಂಗ್ ಅಡ್ಡೆ ಮೇಲೆ ಪೋಲೀಸರ ದಾಳಿ, ಮೂವರ ಬಂಧನ
ಅಕ್ರಮ ಗ್ಯಾಸ್ ರಿಫಿಲಿಂಗ್ ಅಡ್ಡೆ ಮೇಲೆ ಪೋಲೀಸರ ದಾಳಿ, ಮೂವರ ಬಂಧನ
ಚಿತ್ರ: ಪೋಲಿಸರು. ವಶಪಡಿಸಿಕೊಂಡಿರುವ ಗ್ಯಾಸ್ ಸಿಲೆಂಡರ್‌ಗಳು.


ಚಿತ್ರ: ಕೋಲಾರ ಗ್ರಾಮಾಂತರ ಪೋಲೀಸರು ಮಂಗಸಂದ್ರ ಸಮೀಪದ ಪಾಪುಲರ್ ಪ್ರೌಲ್ಟ್ರಿ ಫಾರಂ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಎಲ್.ಪಿ.ಜಿ ರಿಫಿಲ್ ಮಾಡುತ್ತಿದ್ದ ಆರೋಪಿಗಳನ್ನು ಬಂದಿಸಿದ್ದಾರೆ.


ಕೋಲಾರ, ಆಗಸ್ಟ್ ೩೧(ಹಿ.ಸ) :

ಆ್ಯಂಕರ್ : ಅಕ್ರಮವಾಗಿ ಗ್ಯಾಸ್ ರಿಫಿಲ್ ಮಾಡುತ್ತಿದ್ದ ಅಡ್ಡೆಯ ಮೇಲೆ ಕೋಲಾರ ಗ್ರಾಮಾಂತರ ಪೋಲೀಸರು ದಾಳಿ ನಡೆಸಿ ಮುನ್ನೂರು ಹೆಚ್ಚು ಗ್ಯಾಸ್ ಸಿಲೆಂಡರ್‌ಗಳು ಹಾಗೂ ಇತರ ಪರಿಕರಗಳನ್ನು ವಶ ಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಕೋಲಾರ ಗ್ರಾಮಾಂತರ ಪೋಲೀಸರು ಮಾಲೂರು ರಸ್ತೆಯಲ್ಲಿರುವ ಮಂಗಸಂದ್ರ ಬಳಿಯ ಪಾಪುಲರ್ ಪ್ರೌಲ್ಟ್ರಿ ಶೆಡ್‌ನಲ್ಲಿ ಅಕ್ರಮವಾಗಿ ಎಲ್.ಪಿ.ಜಿ ಗ್ಯಾಸ್ ದಾಸ್ತಾನು ಮಾಡಿ ಸಿಲೆಂಡರ್‌ಗಳಿಗೆ ತುಂಬಿ ಕಾಳಸಂತೆಯಲ್ಲಿ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದರು.

ಪೌಲ್ಟ್ರಿ ಫಾರಂ ನಾಸೀರ್ ಅಲಿಯಾಸ್ ಪೆಟ್ರೋಲ್ ನಾಸಿರ್ ಹಾಗೂ ಹೊಸಕೋಟೆಯ ಲಿಯಾಖಾತ್ ಹಾಗೂ ಅವನ ಮಗನಾದ ಅಯಾನ್ ಹಾಗೂ ಇತರರು ಅಕ್ರಮವಾಗಿ ಗ್ಯಾಸ್ ರಿಪಿಲಿಂಗ್ ದಂಧೆಯಲ್ಲಿ ತೊಡಗಿದ್ದರು. ಈ ರೀತಿ ಅಕ್ರಮವಾಗಿ ಗ್ಯಾಸ್ ರಿಫಿಲಿಂಗ್ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಅಗತ್ಯ ವಸ್ತುಗಳ ಕಾಯ್ದೆ ೧೯೫೫ ಎಲ್ಪಿಜಿ ಸರಬರಾಜು ಮತ್ತು ನಿಯಂತ್ರಣ ಕಾಯ್ದೆ ಎರಡು ಸಾವಿರ ಪ್ರಕಾರ ಅಪರಾಧವಾಗಿದೆ.

ಆರೋಪಿಗಳು ಸಣ್ಣ ಗ್ಯಾಸ್ ಸಿಲೆಂಡರ್‌ಗಳಿಗೆ ಗ್ಯಾಸ್ ತುಂಬಿಸಿ ಅವುಗಳನ್ನು ವಾಣಿಜ್ಯ ಬಳಕೆ ಕಾರುಗಳಿಗೆ ಆಟೋ ರಿಕ್ಷಾಗಳಿಗೆ ಕಾಳಸಂತೆಯಲ್ಲಿ ಮಾರಾಟ ಮಾಡಿ ದುಪ್ಪಟ್ಟು ಹಣ ಸಂಪಾದನೆ ಮಾಡುತ್ತಿದ್ದರು ಈ ರೀತಿ ಮಾಡುವುದು ಅಗತ್ಯ ವಸ್ತುಗಳ ಕಾಯ್ದೆಯ ಪ್ರಕಾರ ಅಪರಾದವಲ್ಲದೆ ಸಾರ್ವಜನಿಕ ಸುರಕ್ಷತೆಗೆ ವಿರುದ್ದವಾಗಿರುತ್ತದೆ.

ಖಚಿತ ಮಾಹಿತಿಯ ಮೇರೆಗೆ ಆಹಾರ ನಿರೀಕ್ಷಕ ಮಂಜುನಾಥ್ ಕೋಲಾರ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ್ದರು ಮಂಜುಜನಾಥ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೌಲ್ಟ್ರಿ ಫಾರಂ ಮೇಲೆ ಪೋಲಿಸರು ದಾಳಿ ನಡೆಸಿದರು.

ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯ ಇನ್ಸ್ಪೆಕ್ಟರ್ ಕಾಂತರಾಜು, ಸಬ್‌ಇನ್ಸ್ಪೆಕ್ಟರ್ ಭಾರತಿ, ಕ್ರೈಂ ಸಿಬ್ಬಂದಿ ಸಾಧಿಕ್ ಮುರಳಿ, ಪೇದೆ ಶಶಿಕಾಂತ್ ಚಾಲಕರಾದ ಸುಭಾಷ್ ದಾಳಿ ನಡೆಸಿದ್ದರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದೆ.

ಚಿತ್ರ: ಕೋಲಾರ ಗ್ರಾಮಾಂತರ ಪೋಲೀಸರು ಮಂಗಸಂದ್ರ ಸಮೀಪದ ಪಾಪುಲರ್ ಪ್ರೌಲ್ಟ್ರಿ ಫಾರಂ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಎಲ್.ಪಿ.ಜಿ ರಿಫಿಲ್ ಮಾಡುತ್ತಿದ್ದ ಆರೋಪಿಗಳನ್ನು ಬಂದಿಸಿದ್ದಾರೆ.

ಚಿತ್ರ: ಪೋಲಿಸರು. ವಶಪಡಿಸಿಕೊಂಡಿರುವ ಗ್ಯಾಸ್ ಸಿಲೆಂಡರ್‌ಗಳು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande