ಸಿರುಗುಪ್ಪ, 23 ಜುಲೈ (ಹಿ.ಸ.) :
ಆ್ಯಂಕರ್ : ಆಂಧ್ರ ಪ್ರದೇಶದಿಂದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪಗೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿ ಅವರಿಂದ 2.65 ಲಕ್ಷ ರೂಪಾಯಿ ಮೌಲ್ಯದ ಗಾಂಜಾವನ್ನು ವಶಕ್ಕೆ ತೆಗೆದುಕೊಂಡು, ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರೆ.
ಸಿರುಗುಪ್ಪ - ಪಟ್ಟಣದ ಆದೋನಿ ರಸ್ತೆಯಲಿರುವ ಎ.ಆರ್.ಎಸ್ ಫಾರ್ಮ್ ಹತ್ತಿರ ಆದೋನಿ ಕಡೆಯಿಂದ ಎರಡು ದ್ವಿಚಕ್ರ ವಾಹನಗಳಲ್ಲಿ ಗಾಂಜಾದೊಂದಿಗೆ ಬಳ್ಳಾರಿಯ ಶರ್ಮಾಸ್ ವಲಿ, ಶೈಲೇಂದ್ರ, ಶೇಖ್ ಹಬೀದ್, ಬಲರಾಮ, ಕಾರ್ತಿಕ್ ಎನ್ನುವವರು ಬರುತ್ತಿದ್ದರು.
ಸಿರುಗುಪ್ಪ ಪೊಲೀಸ್ ಠಾಣೆಯ ಸಿಬ್ಬಂದಿ ತಮಗೆ ದೊರೆತ ಖಚಿತ ಮಾಹಿತಿಯಿಂದ ಇವರನ್ನು ತಡೆದು ಪರಿಶೀಲನೆ ಮಾಡಿ, ಗಾಂಜಾ ಜಫ್ತು ಮಾಡಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್ / ಮನೋಹರ ಯಡವಟ್ಟಿ