ಕೋಲಾರ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ವಿಶೇಷ ಚೇತನರನ್ನು ನಾವು ಪ್ರತಿದಿನ ನೆನಪಿಸಿಕೊಳ್ಳಬೇಕು. ಕಾರಣ ವಿಶೇಷ ಚೇತನರಲ್ಲಿ ಪ್ರತಿಭೆ ಇದೆ. ಅವರಿಗೆ ಅನುಕಂಪ ಅಗತ್ಯವಿಲ್ಲ ಬದಲಾಗಿ ಅವರನ್ನು ಪ್ರೋತ್ಸಾಹಿಸಬೇಕು ಹಲವು ಸಂಘ ಸಂಸ್ಥೆಗಳು ಅವರಿಗೆ ಉತ್ತೇಜನ ನೀಡುತ್ತಿದೆ. ಎಂದು ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗನಂದ ಕೆಂಪರಾಜ್ ಹೇಳಿದರು.
ಕೋಲಾರ ಜಿಲ್ಲೆ ಬಂಗಾರಪೇಟೆ ಪಟ್ಟಣದ ಬಾಲಕರ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಹಮ್ಮಿಕೊಂಡಿದ್ದ ಫೆ ವಾರ್ಡ್ ಕೋಲಾರ ಹಾಗೂ ಫೋಕಸ್ ಸಂಸ್ಥೆಯ ಸಹಯೋಗದಲ್ಲಿ ದಿ ಅಸೋಸಿಯೇಷನ್ ಆಪ್ ಪೀಪಲ್ ವಿಥ್ ಡಿಸೆಬಲಿಟಿ ಬೆಂಗಳೂರು ರವರ ವತಿಯಿಂದ ಆಡಿಟ್ ಡ್ರೈವ್ ಹಾಗೂ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಅನೇಕ ಬಡ ಕುಟುಂಬಗಳಲ್ಲಿ ವಿಶೇಷ ಚೇತನರು ಇದ್ದಾರೆ. ಅವರು ಬಹಳಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ. ಅದನ್ನು ನಾವು ಕಣ್ಣಾರೆ ಕಂಡರೆ ಮಾತ್ರ ನಮಗೆ ಅವರ ನೋವು ಏನಂತ ಗೊತ್ತಾಗುತ್ತದೆ.ಆದ್ದರಿಂದ ಈ ಸಂಸ್ಥೆ ಹೊಸದಾಗಿ ಆಡಿಟ್ ಡ್ರೈವ್ ಆಪ್ ಲಾಂಚ್ ಮಾಡಲಾಗಿದೆ. ಇದರಿಂದ ವಿಷಯ ವಿಶೇಷ ಚೇತನರಿಗೆ ಬಹಳ ಉಪಯೋಗವಾಗಲಿದೆ ಎಂದು ಹೇಳಿದರು.
ಎಷ್ಟೋ ಜನ ವಿಶೇಷ ಚೇತನ ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್, ಹಾಗೂ ಇನ್ನೂ ಉನ್ನತ ಮಟ್ಟದ ಅಧಿಕಾರಿಗಳು ಆಗಿದ್ದಾರೆ. ಅಂಥವರನ್ನು ನಾವು ಮಾರ್ಗದರ್ಶನವಾಗಿ ತೆಗೆದುಕೊಳ್ಳಬೇಕು ವಿಶೇಷ ಚೇತನರಿಗೆ ನಮ್ಮ ಕೈಯಲ್ಲಾದ ಸಹಾಯವನ್ನು ಸಹ ಮಾಡಬೇಕು, ಅಂತಹ ಕೆಲಸವನ್ನು ಇಂದು ಫೋಕಸ್ ಸಂಸ್ಥೆಯ ಮಾಡುತ್ತಿದೆ ಎಂದು ಹೇಳಿದರು.
ನಾನು ಸಹ ರೋಟರಿ ಸಂಸ್ಥೆಯ ಅಧ್ಯಕ್ಷನಾಗಿದ್ದೆ. ಸುಮಾರು ೭೦ ಕಾರ್ಯಕ್ರಮಗಳನ್ನು ಮಾಡಿದ್ದೇನೆ. ಎಲ್ಲವೂ ಸಹ ಸಮಾಜ ಸೇವೆಯ ಕಾರ್ಯಕ್ರಮಗಳಾಗಿತ್ತು, ವಿಶೇಷವಾಗಿ ಬಡ ಮಕ್ಕಳಿಗೆ,ವಿದ್ಯಾರ್ಥಿಗಳಿಗೆ ಏನೇನು ಸೌಲಭ್ಯಗಳು ಬೇಕೋ ಎಲ್ಲವನ್ನು ಸಹ ಮಾಡಿದ್ದೇನೆ ಹಾಗೂ ೪೫ ಸರ್ಕಾರಿ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕಗಳನ್ನು ವಿತರಣೆ ಮಾಡುವುದು, ಹಾಗೂ ರಕ್ತದಾನ ಶಿಬಿರ ಕಾರ್ಯಕ್ರಮಗಳನ್ನು ಮಾಡುವುದು, ಹಾಗೂ ವಿಶೇಷ ಚೇತನರಿಗೆ ಬೇಕಾಗುವ ಸಾಮಗ್ರಿಗಳನ್ನು ನೀಡಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆ ಯರು ಹಾಗೂ ಫೋಕಸ್ ಸಂಸ್ಥೆಯ ಸಿಬ್ಬಂದಿ ಆಡಿಟ್ ಡ್ರೈವ್ ನಲ್ಲಿ ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಫೋಕಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಕೋಲಾರ ಜಿಲ್ಲಾ ಸ್ವಯಂ ಸೇವಾ ಸಂಸ್ಥೆಗಳ ಅಧ್ಯಕ್ಷರಾದ ಅ.ನಾ ಹರೀಶ್, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಆರ್ ರವಿ, ತಾಲೂಕು ವೈದ್ಯಾಧಿಕಾರಿ ಡಾ. ಸುನಿಲ್, ಸಿಡಿಪಿಓ ಮುನಿರಾಜು, ಉಪ ಪ್ರಾಂಶುಪಾಲರಾದ ಶಂಕರಪ್ಪ, ಕಲಾವಿದ ಯಲ್ಲಪ್ಪ, ಎಪಿಡಿ ರಾಜ್ಯ ಸಂಯೋಜಕ ಶ್ರೀನಿವಾಸನ್, ಫೆವಾರ್ಡ್ ರಾಜ್ಯ ಸಂಯೋಜಕರಾದ ರೆನಿಟಾ, ಫೋಕಸ್ ಕಾರ್ಯದರ್ಶಿ ಲಲಿತಮ್ಮ, ಸುಬ್ರಮಣಿ, ಮನೋಜ್, ಪ್ರಭಾವತಿ, ಭುವೇಂದ್ರ, ಅಜಯ್, ಎಪಿಡಿ ಗಿರಿಜಾ, ಸುಧಾ, ಪ್ರಶಾಂತ್ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಸಿದ್ದರು.
ಚಿತ್ರ:ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ಫೆ ವಾರ್ಡ್ ಕೋಲಾರ ಹಾಗೂ ಫೋಕಸ್ ಸಂಸ್ಥೆಯ ಸಹಯೋಗದಲ್ಲಿ ದಿ ಅಸೋಸಿಯೇಷನ್ ಆಪ್ ಪೀಪಲ್ ವಿಥ್ ಡಿಸೆಬಲಿಟಿ ಬೆಂಗಳೂರು ರವರ ವತಿಯಿಂದ ಆಡಿಟ್ ಡ್ರೈವ್ ಹಾಗೂ ವಿಶ್ವ ವಿಶೇಷ ಚೇತನರ ದಿನಾಚರಣೆ ಕಾರ್ಯಕ್ರಮವನ್ನು ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನ ಪ್ರಾಂಶುಪಾಲ ನಾಗಾನಂದ ಕೆಂಪರಾಜು ಉದ್ಘಾಟಿಸಿ ಮಾತನಾಡಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್