ಕೋಲಾರ, 21 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹೋರಾಟದ ಹಾಡುಗಾರರ ಬಳಗ ಕೋಲಾರ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಾನ ಗಾರುಡಿಗ ಸಂಗೀತ ನಿರ್ದೇಶಕ, ರಂಗಕರ್ಮಿ ಪಿಚ್ಚಳ್ಳಿ ಶ್ರೀನಿವಾಸ್ರವರಿಗೆ ಡಿಸೆಂಬರ್ ೨೨ ರಂದು ಭಾನುವಾರ ಬೆಳಗ್ಗೆ ೧೦-೩೦ ಗಂಟೆಗೆ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಖ್ಯಾತ ನಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ಸಚಿವೆ ಉಮಾಶ್ರೀ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕವಿ, ನಾಟಕಕಾರ ಕೋಟಿಗಾನಹಳ್ಳಿ ರಾಮಯ್ಯ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ರಂಗಭೂಮಿ ಹಾಗೂ ಚಲನಚಿತ್ರ ನಟ ಮಂಡ್ಯ ರಮೇಶ್, ದ.ಸಂ.ಸ ರಾಜ್ಯ ಸಂಚಾಲಕ ಎನ್.ವೆಂಕಟೇಶ್, ಕ.ದ.ಕ್ರಿ.ಸ ರಾಜ್ಯ ಸಂಚಾಲಕ ಡಾ.ಎಂ.ಚಂದ್ರಶೇಖರ್, ಸಾರಂಗ ರಂಗ ಅಧ್ಯಕ್ಷ ಸಿ.ಲಕ್ಷ್ಮೀನಾರಾಯಣ ಭಾಗವಹಿಸಲಿದ್ದು, ಜೆ.ಜಿ.ನಾಗರಾಜ್ ಕಾರ್ಯಕ್ರಮ ನಿರ್ವಹಣೆ ಮಾಡುವರು.
ಮಧ್ಯಾಹ್ನ ೧೨-೩೦ ಗಂಟೆಗೆ ಬಹುಮುಖ ಪ್ರತಿಭೆಯ ಪಿಚ್ಚಳ್ಳಿ ಮೊದಲ ಗೋಷ್ಟಿಯಲ್ಲಿ ದೇಸೀ ಗಾಯನ ಸತ್ವದ ವಿವಿಧ ಆಯಾಮಗಳು ಮತ್ತು ಪಿಚ್ಚಳ್ಳಿ ಕುರಿತು ಪ್ರೊ.ವಿ.ಚಂದ್ರಶೇಖರ ನಂಗಲಿ, ದಲಿತ ಕಲಾಮಂಡಳಿಯ ಹೋರಾಟದ ಹಾಡುಗಳು ಹಾಗೂ ಪಿಚ್ಚಳ್ಳಿ ಕುರಿತು ಡಾ.ಬಿ.ಎಂ.ಪುಟ್ಟಯ್ಯ, ರಂಗಭೂಮಿ ಸಂಘಟಕ ಹಾಗ ನಟ ನಿರ್ದೇಶಕರಾಗಿ ಪಿಚ್ಚಳ್ಳಿ ಕುರಿತು ಕುಪ್ನಹಳ್ಳಿ ಬೈರಪ್ಪ ಮಾತನಾಡುವರು.
ಎನ್.ಮುನಿಸ್ವಾಮಿ ಅಧ್ಯಕ್ಷತೆಯಲ್ಲಿ, ಗೊಲ್ಲಹಳ್ಳಿ ಶಿವಪ್ರಸಾದ್, ಸಿ.ಕೆ.ಗುಂಡಣ್ಣ, ಮು.ತಿಮ್ಮಯ್ಯ, ಗಮನ ಸಂಸ್ಥೆಯ ಶಾಂತಮ್ಮ, ಸುಗ್ಗಂಡಹಳ್ಳಿ ಮುನಿರಾಜು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುವರು. ಡಾ.ವಿ.ರಾಮಕೃಷ್ಣ ಕಾರ್ಯಕ್ರಮ ನಿರ್ವಹಣೆ ಮಾಡುವರು.
ಮಧ್ಯಾಹ್ನ ೩-೩೦ ಗಂಟೆಗೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಿಚ್ಚಳ್ಳಿ ಶ್ರೀನಿವಾಸ ಜೊತೆ ಸಂವಾದ ಗೋಷ್ಟಿ ನಡೆಯಲಿದ್ದು ಸುಬ್ಬು ಹೊಲೆಯರ್ ಸಂಚಾಲಕತ್ವದಲ್ಲಿ ಅಚ್ಯುತ, ಅಂಬಣ್ಣ ಅರೋಲಿಕರ್, ಹೆಚ್.ಎಂ.ಸುಬ್ರಮಣಿ, ಎಚ್.ಎ.ಪುರುಷೋತ್ತಮರಾವ್, ನೇತ್ರಾವತಿ, ಅರದೇಶನಹಳ್ಳಿ ವೆಂಕಟೇಶ್, ವಕ್ಕಲೇರಿ ರಾಜಪ್ಪ, ಸಿ.ವಿ.ನಾಗರಾಜ ಗೋಷ್ಟಿಯಲ್ಲಿ ಭಾಗವಹಿಸುವರು. ದೊಡ್ಡಿ ನಾರಾಯಣಸ್ವಾಮಿ ಕಾರ್ಯಕ್ರಮ ನಿರ್ವಹಣೆ ಮಾಡುವರು.
ಸಂಜೆ ೫-೩೦ ಗಂಟೆಗೆ ಪಿಚ್ಚಳ್ಳಿ ಶ್ರೀನಿವಾಸ್ರಿಗೆ ಗೌರವ ಸಮರ್ಪಣೆ ನಡೆಯಲಿದೆ. ಉದಯವಾಣಿ ಜಿಲ್ಲಾ ವರದಿಗಾರ ಕೆ.ಎಸ್.ಗಣೇಶ್ ಅಭಿನಂದನೆಯ ನುಡಿಗಳನ್ನಾಡುವರು. ಸಂಚಿಕೆ ದಿನಪತ್ರಿಕೆಯ ಸಂಪಾದಕ ಸಿ.ಎಂ.ಮುನಿಯಪ್ಪ ಅಧ್ಯಕ್ಷತೆ ವಹಿಸುವರು. ಸಂವಾದ ಪತ್ರಿಕೆಯ ಸಂಪಾದಕ ಇಂದೂಧರ ಹೊನ್ನಾಪುರ ಪಿಚ್ಚಳ್ಳಿ ಶ್ರೀನಿವಾಸ್ರನ್ನು ಅಭಿನಂದಿಸುವರು.
ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ, ಕಾರವಾರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ.ನಾರಾಯಣ, ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಯುವ ಮುಖಂಡ ಚಂದನ್ಗೌಡ, ಸೇರಿದಂತೆ ಅನೇಕ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಚಿತ್ರ: ಪಿಚ್ಚಳ್ಳಿ ಶ್ರೀನಿವಾಸ್
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್