ಜೀವನ ಸುಂದರ ಹೂದೋಟವಾಗಲಿ 
ಬಳ್ಳಾರಿ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜೀವನವು ಜೀಕುವ ವನವಾಗದೇ ಸುಂದರ ಹೂದೋಟದಂತೆ ಇರಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಸಿ. ಕೊಟ್ರೇಶ್ ಅವರು ತಿಳಿಸಿದ್ದಾರೆ. ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಂಗನಕಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ
ಜೀವನ ಸುಂದರ ಹೂದೋಟವಾಗಲಿ


ಜೀವನ ಸುಂದರ ಹೂದೋಟವಾಗಲಿ


ಬಳ್ಳಾರಿ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜೀವನವು ಜೀಕುವ ವನವಾಗದೇ ಸುಂದರ ಹೂದೋಟದಂತೆ ಇರಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಸಿ. ಕೊಟ್ರೇಶ್ ಅವರು ತಿಳಿಸಿದ್ದಾರೆ.

ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಸಂಗನಕಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ 308ನೇ ಮಹಾಮನೆಯಲ್ಲಿ ಲಿಂಗೈಕ್ಯ ಸಂಗನಕಲ್ಲು ದೊಡ್ಡಶರಣಪ್ಪ ಹಂಪಮ್ಮ ದತ್ತಿಯಲ್ಲಿ `ನಿತ್ಯ ಜೀವನಕ್ಕೆ ವಚನಗಳು’ ವಿಷಯದ ಕುರಿತು ಅವರು ಮಾತನಾಡಿದರು.

ಸಂಗನಕಲ್ಲಿನ ಸದಾಶಿವ ಸೇವಾ ಟ್ರಸ್ಟ್‍ನ ಅಧ್ಯಕ್ಷ ಎಸ್. ಮೇಟಿ ಬಸವರಾಜರು ಅತಿಥಿಗಳಾಗಿ, ಮಕ್ಕಳು ಉನ್ನತ ಶಿಕ್ಷಣ – ಕೌಶಲ್ಯ ಪಡೆದು ಆದರ್ಶದ ಜೀವನ ನಡೆಸಿ ಶ್ರೇಷ್ಟರಾಗಬೇಕು ಎಂದು ಹೇಳಿದರು.

ಸಮಾಜಮುಖಿ ಉರಗತಜ್ಞ ಡಿ. ಸತೀಶ್‍ಕುಮಾರ ಅವರನ್ನು ಈ ಸಂದರ್ಭದಲ್ಲಿ ಗೌರವಿಸಿ - ಅಭಿನಂದಿಸಲಾಯಿತು. ಶಾಲೆಯ ಮುಖ ಗುರುಗಳಾದ ಶ್ರೀಮತಿ ಎ. ಸರಸ್ವತಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ವಿದ್ಯಾರ್ಥಿನಿಯರಾದ ಪದ್ಮಾವತಿ ಹಾಗೂ ತಂಡ ಪ್ರಾರ್ಥನೆ ಸಲ್ಲಿಸಿತು. ಶಿಕ್ಷಕ ಶಿವಣ್ಣ ಸ್ವಾಗತ ಕೋರಿ, ಕಾರ್ಯಕ್ರಮ ನಿರೂಪಿಸಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಿ. ಸಿದ್ಧಲಿಂಗಪ್ಪ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಶಿಕ್ಷಕ ಬಸವರಾಜು ವಂದನಾರ್ಪಣೆ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande