`ಅಜ್ಜನ ಜಾತ್ರೆ ಬನ್ನಿ’ ಭಕ್ತರಿಗೆ ಆಹ್ವಾನಿಸಿದ ಕೊಪ್ಪಳ ಶ್ರೀಮಠ
ಕೊಪ್ಪಳ, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಂಸ್ಥಾನ ಶ್ರೀ ಗವಿಮಠ ಜಾತ್ರೆಯೂ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥ ಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ಭಕ್ತರಿಗೆ 2025ರ ಮಹಾಜಾತ್ರೋತ್ಸವದ ಆಹ್ವಾನ ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯದಲ್ಲಿ
`ಅಜ್ಜನ ಜಾತ್ರೆ ಬನ್ನಿ’ ಭಕ್ತರಿಗೆ ಆಹ್ವಾನಿಸಿದ ಕೊಪ್ಪಳ ಶ್ರೀಮಠ


ಕೊಪ್ಪಳ, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಂಸ್ಥಾನ ಶ್ರೀ ಗವಿಮಠ ಜಾತ್ರೆಯೂ ಪ್ರತಿ ವರ್ಷ ವಿಭಿನ್ನ, ವಿಶಿಷ್ಟ ರೂಪದಲ್ಲಿ ಅರ್ಥ ಪೂರ್ಣವಾಗಿ ಜರುಗುತ್ತಿದೆ. ಆಧುನಿಕತೆಯ ಸ್ಪರ್ಶದ ಜೊತೆಗೆ ಭಕ್ತರಿಗೆ 2025ರ ಮಹಾಜಾತ್ರೋತ್ಸವದ ಆಹ್ವಾನ ಶ್ರೀಮಠದ ಭಕ್ತರಿಗೆ ನೇರವಾಗಿ ತಲುಪಿಸುವ ಸತ್ಕಾರ್ಯದಲ್ಲಿ ತೊಡಗಿದೆ.

ಈ ಬಾರಿಯೂ ಜನೇವರಿ 15, 16 ಹಾಗೂ 17ರಂದು ನಡೆಯುವ ಅಜ್ಜನ ಜಾತ್ರೆಗೆ ಭಕ್ತರನ್ನು ಆಹ್ವಾನಿಸುವ ಆ ದೃಶ್ಯವನ್ನು ಡ್ರೋಣ್ ಕ್ಯಾಮರಾದ ಮೂಲಕ ಸೆರೆಹಿಡಿದ ಫೋಟೊದೊಂದಿಗೆ ಅಜ್ಜನ ಜಾತ್ರಗೆ ಬನ್ನಿ ಎಂದು ಆಹ್ವಾನ ನೀಡಲಾಗಿದೆ.

ಈ ಚಿತ್ರದ ವಿಶೇಷತೆ ಏನಂದರೇ ಈ ಚಿತ್ರವು ಶ್ರೀ ಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯ ಕಟ್ಟಡದ ಮುಂಭಾಗದ ವಿಶಾಲವಾದ ಆವರಣದಲ್ಲಿ ಸೆರೆ ಹಿಡಿಯಲಾಗಿದೆ. ಮುಸ್ಸಂಜೆಯ ಹೊತ್ತಿನಲ್ಲಿ ಸೆರೆ ಹಿಡಿದ ಈ ಚಿತ್ರವು ನೋಡಲು ಅತ್ಯಂತ ಮನೋಹರವಾಗಿದೆ.

ಮುಗ್ದ ಮನಸ್ಸಿನ ಶ್ರೀಮಠದ ಉಚಿತ ವಸತಿ ಹಾಗೂ ಪ್ರಸಾದ ನಿಲಯದ 1500 ಮಕ್ಕಳು ಮೇಣದಬತ್ತಿ ಹಿಡಿದು ಬೆಳಗುವದರ ಮೂಲಕ `ಅಜ್ಜನಜಾತ್ರೆಗೆ ಬನ್ನಿ’ಎಂದು ಭಕ್ತರಿಗೆ ಆಹ್ವಾನಿಸುವ ಸನ್ನಿವೇಶ

ಅನನ್ಯವಾದುದು.

ಇದು ಶ್ರೀ ಅಜ್ಜನಜಾತ್ರೆಗೆ ಬನ್ನಿ ಎನ್ನುವ ಕನ್ನಡ ವರ್ಣಮಾಲೆ ಅನುಸಾರವಾಗಿ ಎಲ್ಲಾ ಮಕ್ಕಳು ನಿಂತು ಮೇಣದ ಬತ್ತಿಹಿಡಿದ ಸನ್ನಿವೇಶವನ್ನು ಡ್ರೋಣ್ ಕ್ಯಾಮೆರಾದಲ್ಲಿ ಚಿತ್ರ ಸೆರೆ ಹಿಡಿಯಲಾಗಿದೆ. ಇದು ಶ್ರೀಮಠದ ಭಕ್ತರಿಗೆ ಈ ವರ್ಷದ ಜಾತ್ರೆಗೆ ಸಾಂಪ್ರದಾಯಿಕ ಆಹ್ವಾನ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande