ಆಯುರ್ವೇದ ಪುರಾತನ ವೈಜ್ಞಾನಿಕ ಶಾಸ್ತ್ರ : ಡಾ.ಸುಯಮೀಂದ್ರ ಕುಲಕರ್ಣಿ
ರಾಯಚೂರು, 21 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಆಯುರ್ವೇದ ಪುರಾತನ ವೈಜ್ಞಾನಿಕ ಶಾಸ್ತ್ರವಾಗಿದ್ದು, ಈ ಶಾಸ್ತ್ರವು ಉತ್ತಮ ಆರೋಗ್ಯ ಹಾಗೂ ದೇಹ ಪ್ರಕೃತಿಯ ಪರಿಕಲ್ಪನೆಯನ್ನು ಹೊಂದಿದೆ ಎಂದು ರಾಯಚೂರು ವಿಶ್ವವಿದ್ಯಾಲದ ಕುಲಪತಿ (ಪ್ರಭಾರಿ)ಗಳಾದ ಡಾ. ಸುಯಮೀಂದ್ರ ಕುಲಕರ್ಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿ
ಆಯುರ್ವೇದ ಪುರಾತನ ವೈಜ್ಞಾನಿಕ ಶಾಸ್ತ್ರ : ಡಾ.ಸುಯಮೀಂದ್ರ ಕುಲಕರ್ಣಿ


ಆಯುರ್ವೇದ ಪುರಾತನ ವೈಜ್ಞಾನಿಕ ಶಾಸ್ತ್ರ : ಡಾ.ಸುಯಮೀಂದ್ರ ಕುಲಕರ್ಣಿ


ರಾಯಚೂರು, 21 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಆಯುರ್ವೇದ ಪುರಾತನ ವೈಜ್ಞಾನಿಕ ಶಾಸ್ತ್ರವಾಗಿದ್ದು, ಈ ಶಾಸ್ತ್ರವು ಉತ್ತಮ ಆರೋಗ್ಯ ಹಾಗೂ ದೇಹ ಪ್ರಕೃತಿಯ ಪರಿಕಲ್ಪನೆಯನ್ನು ಹೊಂದಿದೆ ಎಂದು ರಾಯಚೂರು ವಿಶ್ವವಿದ್ಯಾಲದ ಕುಲಪತಿ (ಪ್ರಭಾರಿ)ಗಳಾದ ಡಾ. ಸುಯಮೀಂದ್ರ ಕುಲಕರ್ಣಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ರಾಯಚೂರು ವಿಶ್ವವಿದ್ಯಾಲಯ ಮತ್ತು ಪೂರ್ಣಿಮಾ, ಆಯುರ್ವೇದ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ, ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಶನಿವಾರ ನಡೆದ ಕೇಂದ್ರ ಸರ್ಕಾರದ `ದೇಶ್ ಕಾ ಪ್ರಕೃತಿ ಪರೀಕ್ಷಾ’ ಅಭಿಯಾನದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಸಾವಿರಾರು ವರ್ಷಗಳ ಹಿಂದೆಯೇ ಆಯುರ್ವೇದ ಇದ್ದು, ಆದರೆ ಇಂದು ಅಲೋಪತಿ ಔಷಧಿಯನ್ನು ಆಧುನಿಕ ದಿನಗಳಲ್ಲಿ ಹೆಚ್ಚು ಉಪಯೋಗಿಸುತ್ತಿದ್ದಾರೆ. ತಮ್ಮ ಸಂಶೋಧನಾ ದಿನಗಳಲ್ಲಿ ಪಿಡಿಯಾಟ್ರಿಕ್ ನ್ಯೂರಾಲಾಜಿಸ್ಟ್ (ಮಕ್ಕಳ ನರರೋಗ ತಜ್ಞರು) ಸಹಯೋಗದಲ್ಲಿ ಮಾಡಿರುವ ಸಂಶೋಧನೆಯಲ್ಲಿ ಪೂರ್ವಜರು ಪ್ರತಿದಿನ ಬಳಸುತ್ತಿದ್ದ ಘೃತ (ತುಪ್ಪ)ದಲ್ಲಿ ಹೆಚ್ಚಿನ ಉಪಯೋಗ ಮತ್ತು ಪ್ರಾಮುಖ್ಯತೆಯನ್ನು ಸಂಶೋಧನೆಯ ಮುಖಾಂತರ ಅರಿತು ಫಿಟ್ಸ್ (ಎಪಿಲೆಪ್ಸಿ) ಕಾಯಿಲೆ ಗುಣಪಡಿಸುವ ಲಕ್ಷಣ ತುಪ್ಪದಲ್ಲಿದೆ ಎಂದು ಹೇಳಿದರು.

ಪೂರ್ಣಿಮಾ ಕಾಲೇಜಿನ ಕ್ರಿಯಾ ಶಾರೀರಾ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಉಮಾ ಮಹಾಂತೇಶ ಯಾಳಗಿ ಅವರು, ಪ್ರಕೃತಿಯು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನಿಶ್ಚಯಿಸುವ ಒಂದು ಮಾಪನ. ಮೂರು ದೋಷಗಳಾದ ವಾತ, ಪಿತ್ತ, ಕಫ ಇವು ದೇಹದ ಸಮತೋಲನವನ್ನು ನಿಯಂತ್ರಿಸುವ ದೋಷಗಳಾಗಿವೆ. ಪ್ರಕೃತಿಯಿಂದಲೇ ಮಾನವ, ಪ್ರಕೃತಿ ಬದಲಾದಂತೆ ನಮ್ಮ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಬೇಕು ಎಂದರು.

ಪೂರ್ಣಿಮಾ ಕಾಲೇಜಿನ ಅಗದತಂತ್ರ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ಸುಪ್ರಿತಾ ಲಕ್ಷ್ಮಣ ಶೆಟ್ಟಿ ಅವರು, `ದೇಶ್ ಕಾ ಪ್ರಕೃತಿ ಪರೀಕ್ಷಾ’ ಅಭಿಯಾನ ಆ್ಯಪ್ ಮೂಲಕ ಯಾವ ರೀತಿಯಲ್ಲಿ ಆರೋಗ್ಯ ಪರೀಕ್ಷೆಯನ್ನು ಮಾಡಬಹುದು ಎನ್ನುವುದನ್ನು ವಿವರಿಸಿದರು.

ಅತಿಥಿ ಉಪನ್ಯಾಸಕಿ ಡಾ. ಪದ್ಮಜಾ ದೇಸಾಯಿ ಪ್ರಾರ್ಥಿಸಿದರು. ಇಂಗ್ಲಿಷ್ ವಿಭಾಗದ ಅನಿಲ್ ಅಪ್ರಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ರಾವಿವಿ ಉಪಕುಲಸಚಿವರು ಡಾ. ಕೆ. ವೆಂಕಟೇಶ್, ಡೀನರುಗಳಾದ ಪ್ರೊ. ಪಾರ್ವತಿ.ಸಿ.ಎಸ್. ಹಾಗೂ ಪ್ರೊ.ಪಿ.ಭಾಸ್ಕರ್ ವೇದಿಕೆಯಲ್ಲಿದ್ದರು.

ಪೂರ್ಣಿಮಾ ಕಾಲೇಜಿನ ಅಧ್ಯಕ್ಷ ಎಸ್.ಎಲ್. ಕೇಶವರೆಡ್ಡಿ ಹಾಗೂ ಪ್ರಾಂಶುಪಾಲ ಡಾ. ಚಂದ್ರಶೇಖರ್.ಎಸ್. ಕರಮುಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande