ಧಾರವಾಡ, 07 ನವೆಂಬರ್ (ಹಿ.ಸ.) :
ಆ್ಯಂಕರ್ :.ಕಳೆದ ರಾತ್ರಿ ಧಾರವಾಡದಲ್ಲಿ ತಡರಾತ್ರಿ ಮನೆಗೆ ಹೋಗುತ್ತಿದ್ದ ಸ್ಕೂಟಿಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಮಾತಿಗೆ ಮಾತು ಬೆಳೆದು ವಾಗ್ವಾದ ನಡೆದು ಗುಂಡು ಹಾರಿಸಿದ ಘಟನೆ ನಡೆದಿದೆ.
ನಗರದ ಆರ್.ಎನ್.ಶೆಟ್ಟಿ ಮೈದಾನದ ಬಳಿ ಮಧ್ಯರಾತ್ರಿ ಘಟನೆ ನಡೆದಿದ್ದು ಘಟನೆಗೆ ಸಂಬಂಧಿಸಿದಂತೆ ದೂರು, ಪ್ರತಿ ದೂರು ದಾಖಲಾಗಿದ್ದು ಈ ಪ್ರಕರಣದಲ್ಲಿ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಅವಳಿ ನಗರ ಪೋಲೀಸ ಆಯುಕ್ತ ಶಶಿಕುಮಾರ ತಿಳಿಸಿದ್ದಾರೆ.
ಸಂಗಮ ಸರ್ಕಲ್ನಲ್ಲಿ ಪೈನಾನ್ಸ್ ನಡೆಸುತ್ತಿರುವ ಅಭಿಷೇಕ ಬಡ್ಡಿಮನಿ ಎಂಬ ಯುವಕ ಬೈಕ್ನಲ್ಲಿ ತನ್ನ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಪ್ರಜ್ವಲ, ಕಲ್ಮೇಶ ಹಾವೇರಿಪೇಟ್, ಗಣೇಶ ಖೋಡೆ, ದಾನೇಶ ಮಹಾದೇವಪ್ಪ ಕಠಾರಿ ಎಂಬುವವರು ಇದ್ದ ಕಾರು ಆರ್ ಎನ್ ಶೆಟ್ಟಿ ಕ್ರೀಡಾಂಗಣ ಹತ್ತಿರ ಡಿಕ್ಕಿ ಹೊಡೆದ ಪರಿಣಾಮ ಗಲಾಟೆ ಆಗಿದೆ.
ಪ್ರಜ್ವಲ, ಗಣೇಶ ಮತ್ತು ದಿನೇಶ ಎಂಬುವವರು ಕಾರಿನಲ್ಲಿ ಬಂದು ಅಭಿಷೇಕನ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಹಲ್ಲೆ ಮಾಡಲು ಯತ್ನಿಸಿದರು. ಅದಕ್ಕಾಗಿ ಜೀವ ರಕ್ಷಣೆಗೆ ಗುಂಡು ಹಾರಿಸಿರುವುದಾಗಿ ಅಭಿಷೇಕ ದೂರಿನಲ್ಲಿ ತಿಳಿಸಿದರೆ, ಪ್ರಜ್ವಲ ಮತ್ತು ಸ್ನೇಹಿತರು ತಾವು ಕಾರಿನಲ್ಲಿ ಬರುವಾಗ ಏಕಾಏಕಿ ಡಿಕ್ಕಿ ಹೊಡೆದು ಅಭಿಷೇಕ ಹಲ್ಲೆ ಮಾಡಲು ಬಂದನು. ಅಲ್ಲದೇ ಗುಂಡು ಹಾರಿಸಿದ್ದಾರೆ ಎಂದು ಪ್ರತಿದೂರು ದಾಖಲಿಸಿದ್ದಾರೆ.
ಆತನ ದೂರಿನ ಮೇರೆಗೆ ಎದುರುಗಾರರಾದ ಪ್ರಜ್ವಲ, ಗಣೇಶ ಮತ್ತು ದಾನೇಶ ಇವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa