ಮುಂಬೈ : ಬಸ್ ಉರುಳಿ  10 ಜನರ ದುರ್ಮರಣ
ಮುಂಬೈ, 29 ನವೆಂಬರ್ (ಹಿ.ಸ.) : ಆ್ಯಂಕರ್ : ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅರ್ಜುನಿ ತಾಲೂಕಿನ ಖಜ್ರಿ ಗ್ರಾಮದ ಬಳಿ ಸಾರಿಗೆ ಸಂಸ್ಥೆಯ ಬಸ್ ಉರುಳಿ ಬಿದ್ದು ೧೦ ಜನ ಸ್ಥಳದಲ್ಲಿ ಸಾವ್ವನಪ್ಪಿದ್ದು, ೩೫ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ನಾಗ್ಪುರದಿಂದ ಗೊಂಡಿಯಾಗೆ ತೆರಳುತ್ತಿದ್ದ ಬಸ್ ಗೆ ಕಾರೊಂದು ಅ
Accident


ಮುಂಬೈ, 29 ನವೆಂಬರ್ (ಹಿ.ಸ.) :

ಆ್ಯಂಕರ್ : ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅರ್ಜುನಿ ತಾಲೂಕಿನ ಖಜ್ರಿ ಗ್ರಾಮದ ಬಳಿ ಸಾರಿಗೆ ಸಂಸ್ಥೆಯ ಬಸ್ ಉರುಳಿ ಬಿದ್ದು ೧೦ ಜನ ಸ್ಥಳದಲ್ಲಿ ಸಾವ್ವನಪ್ಪಿದ್ದು, ೩೫ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

ನಾಗ್ಪುರದಿಂದ ಗೊಂಡಿಯಾಗೆ ತೆರಳುತ್ತಿದ್ದ ಬಸ್ ಗೆ ಕಾರೊಂದು ಅಡ್ಡ ಬಂದ ಪರಿಣಾಮ ಬಸ್ ಚಾಲಕನ ನಿಯಂತ್ರಣ ತಪ್ಪಿ ಖಜ್ರಿ ಗ್ರಾಮದ ಬಳಿ‌ ಉರುಳಿದ್ದು ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಪೋಲಿಸ ಮೂಲಗಳು ತಿಳಿಸಿವೆ. ಘಟನೆಗೆ ತೀವ್ರ ಸಂತಾಪ ಸೂಚಿಸಿರುವ ಹಂಗಾಮಿ ಮುಖ್ಯಮಂತ್ರಿ ಏಕನಾಥ ಶಿಂಧೆ ಮೃತಪಟ್ಟ ಕುಟುಂಬಗಳಿಗೆ ೧೦ ಲಕ್ಷ ಪರಿಹಾರ ಘೋಷಿಸಿದ್ದಾರೆ. ಗಾಯಾಳುಗಳಿಗೆ ಸರಕಾರಿ ವೆಚ್ಚದಲ್ಲಿ ಚಿಕಿತ್ಸೆ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande