ಡಿಜಿಟಲ್ ಇಂಡಿಯಾ ಸಂವಾದ ಗೋಷ್ಠಿ
ಬೆಂಗಳೂರು, 3 ಜೂನ್ (ಹಿ.ಸ): ಆ್ಯಂಕರ್: ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್
ಪುಿ


ಬೆಂಗಳೂರು, 3 ಜೂನ್ (ಹಿ.ಸ):

ಆ್ಯಂಕರ್:

ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಇಂದು ಬೆಂಗಳೂರಿನಲ್ಲಿ ಐಟಿ ಹಾರ್ಡ್ವೇರ್ನ ಪರಿಷ್ಕೃತ ಉತ್ಪಾದನೆ ಆಧಾರಿತ ಪ್ರೋತ್ಸಾಹ ಯೋಜನೆ - ಪಿಎಲ್ಐ ಕುರಿತು ಹಮ್ಮಿಕೊಂಡಿರುವ ಡಿಜಿಟಲ್ ಇಂಡಿಯಾ ಸಂವಾದ ಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ಈ ಗೋಷ್ಠಿಯಲ್ಲಿ ತಂತ್ರಜ್ಞರು, ಉದ್ಯಮ ತಜ್ಞರು, ಉದ್ಯಮ ಸಂಘಗಳ ಪ್ರತಿನಿಧಿಗಳು, ನವೋದ್ಯಮಿಗಳು ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸರ್ಕಾರವು ಕಳೆದ ತಿಂಗಳು ೧೭ ಸಾವಿರ ಕೋಟಿ ರೂಪಾಯಿಗಳ ಐಟಿ ಹಾರ್ಡ್ವೇರ್ನ ಪಿಎಲ್ಐ ೨.೦ ಯೋಜನೆಗೆ ಸಮ್ಮತಿಸಿದೆ.ಮೌಲ್ಯ ಸರಪಳಿಯಲ್ಲಿ ದೊಡ್ಡ ಹೂಡಿಕೆಗಳನ್ನು ಆಕರ್ಷಿಸುವ ಮೂಲಕ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು, ಬಜೆಟ್ ನಲ್ಲಿ ನಿಗದಿಪಡಿಸಿದ ಹಣವನ್ನು ದ್ವಿಗುಣಗೊಳಿಸಿ ೨೦೨೧ರಲ್ಲಿ ಮೊದಲ ಬಾರಿಗೆ ತರಲಾಗಿತ್ತು. ಇದೇ ಜುಲೈ ೧ ರಿಂದ ಈ ಯೋಜನೆ ಜಾರಿಗೆ ಬರಲಿದ್ದು, ಈ ಯೋಜನೆಯಲ್ಲಿ ಭಾಗವಹಿಸುವ ಕಂಪನಿಗಳಿಗೆ ನೀಡುವ ಪ್ರೋತ್ಸಾಹಕಗಳ ಮೇಲೆ ಗರಿಷ್ಠ ಮಿತಿ ಇದೆ. ಹಣಕಾಸಿನ ಪ್ರೋತ್ಸಾಹವನ್ನು ಒದಗಿಸುವ ಮೂಲಕ, ಐಟಿ ಹಾರ್ಡ್ವೇರ್ ಘಟಕಗಳು ಮತ್ತು ಉಪ-ಅಸೆಂಬ್ಲಿಗಳ ಸ್ಥಳೀಕರಣವನ್ನು ಉತ್ತೇಜಿಸಲು ಸರ್ಕಾರವು ಗುರಿಯನ್ನು ಹೊಂದಿದ್ದು, ಇದು ದೇಶದೊಳಗೆ ಉತ್ಪಾದನೆಯನ್ನು ಹೆಚ್ಚಿಸಲು ಕಾರಣವಾಗುತ್ತದೆ. ಈ ಯೋಜನೆಯು ಲ್ಯಾಪ್ಟಾಪ್ಗಳು, ಟ್ಯಾಬ್ಲೆಟ್ಗಳು, ಆಲ್ಇನ್ಒನ್ಪಿಸಿಗಳು, ಸರ್ವರ್ಗಳು ಮತ್ತು ಅಲ್ಟ್ರಾ ಸ್ಮಾಲ್ ಫಾರ್ಮ್ ಫ್ಯಾಕ್ಟರ್ ಸಾಧನಗಳನ್ನು ಒಳಗೊಂಡಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande