ಪಾತಾಳಕ್ಕೆ ಕುಸಿದ ಅಂತರ್ಜಲ : ತೆಂಗು ಬೆಳೆಗಾರರಿಗೆ ಸಂಕಷ್ಟ
ತಿಪಟೂರು, 25 ಏಪ್ರಿಲ್ (ಹಿ.ಸ):ಆ್ಯಂಕರ್: ತಿಪಟೂರು ತಾಲೂಕಿಗೆ ಕಳೆದ ಆರೇಳು ವರ್ಷಗಳಿಂದ ಕಾಲಕಾಲಕ್ಕೆ ಮಳೆ ಇಲ್ಲದೆ
that-has-sunk-to-the-bottom-hardship-for-co


ತಿಪಟೂರು, 25 ಏಪ್ರಿಲ್ (ಹಿ.ಸ):ಆ್ಯಂಕರ್:

ತಿಪಟೂರು ತಾಲೂಕಿಗೆ ಕಳೆದ ಆರೇಳು ವರ್ಷಗಳಿಂದ ಕಾಲಕಾಲಕ್ಕೆ ಮಳೆ ಇಲ್ಲದೆ ಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು-ಅಡಿಕೆ ಬೆಳೆಗಳು ಒಣಗುತ್ತಿವೆ. ಅಂತರ್ಜಲ ಮಟ್ಟ ಪಾತಾಳಕ್ಕ ಕುಸಿದಿದ್ದು, ಹನಿ ನೀರಿಗಾಗಿ ಪರಿತಪಿಸುವಂತಾಗಿದೆ.

ಮಳೆ ಇಲ್ಲದೆ ತಾಲೂಕು ಭೀಕರ ಬರದ ಸುಳಿಗೆ ಸಿಲುಕಿರುವುದರಿಂದ ತೆಂಗು ವಿನಾಶದಂಚಿಗೆ ತಲುಪಿದೆ. ಅಂತರ್ಜಲ ಮಟ್ಟ ಸಾವಿರ ಅಡಿಗೂ ಹೆಚ್ಚು ಕುಸಿದಿದೆ. ಇದರಿಂದ ತೆಂಗು ಉಳಿಸಿಕೊಳ್ಳಲಾಗದೆ ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ. ತೆಂಗಿಗೆ ನುಸಿಪೀಡೆ, ಗರಿರೋಗ, ರಸ ಸೋರುವ ರೋಗಗಳು ಕಾಡುತ್ತಿವೆ. ಹತ್ತಾರು ವರ್ಷಗಳ ಕಾಲ ಕಷ್ಟಪಟ್ಟು ಬೆಳೆದ ಬೆಳೆ ಉಳಿಸಿಕೊಳ್ಳಲಾಗದಂತಾಗಿದೆ. ಕೆಲವೆಡೆ ತೆಂಗು ಹಾಗೂ ಅಡಿಕೆ ಮರಗಳನ್ನು ಉಳಿಸಿಕೊಳ್ಳಲು ಬೆಳೆಗಾರರು ದುಬಾರಿ ಹಣ ನೀಡಿ ಟ್ಯಾಂಕರ್ ಗಳ ಮೂಲಕ ನೀರು ತರಿಸಿ ಮರಗಳಿಗೆ ಹಾಯಿಸುತ್ತಿದ್ದಾರೆ. ಸಾವಿರಾರು ಅಡಿ ಆಳದ ಕೊಳವೆ ಬಾವಿ ತೆಗೆಸಿದರೂ ನೀಗುತ್ತಿಲ್ಲ. ಕೊಳವೆ ಬಾವಿಗಾಗಿ ಮಾಡಿದ ಲಕ್ಷಾಂತರ ರು. ಸಾಲ ಮಾಡಿ ತೀರಿಸಲಾಗುತ್ತಿಲ್ಲ. ಸರ್ಕಾರ ತೆಂಗು ಉಳಿಸಿಕೊಳ್ಳಲು ಯಾವುದೇ ನೆರವಿಗೂ ನೀಡುತ್ತಿಲ್ಲ.

ಬೆಳೆಗಾರರು ಹತಾಶಬಾವದಿಂದ ಇತ್ತೀಚೆಗೆ ತಮ್ಮ ದಿನನಿತ್ಯದ ಬದುಕು ಸಾಗಿಸಲು ಪಶು ಸಂಗೋಪನೆ ಕಡೆ ಮುಖ ಮಾಡಿದ್ದಾರೆ. ಆದರೆ ಕಳೆದ ವರ್ಷ ಮಳೆ ಕೊರತೆಯಿಂದ ರಾಗಿ ಬೆಳೆಯೂ ಕೈಕೊಟ್ಟಿದೆ. ಇದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ರೈತರು ಮೇವು ಖರೀದಿಸಲು ಮುಂದಾಗುತ್ತಿರುವುದು ಬರಗಾಲದ ತೀವ್ರತೆಯನ್ನು ತೋರಿಸುತ್ತಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande