ಡಿ ಆರ್ ಡಿ ಓದಿಂದ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅಭಿವೃದ್ಧಿ
ನವದೆಹಲಿ, 24 ಏಪ್ರಿಲ್ (ಹಿ.ಸ):ಆ್ಯಂಕರ್: ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ- ಡಿ ಆರ್ ಡಿ ಓ, ಅತ್ಯಧಿಕ ಅ
Defence Research and Development Organisation,


ನವದೆಹಲಿ, 24 ಏಪ್ರಿಲ್ (ಹಿ.ಸ):ಆ್ಯಂಕರ್:

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ- ಡಿ ಆರ್ ಡಿ ಓ, ಅತ್ಯಧಿಕ ಅಪಾಯ ಎದುರಿಸುವಂತಹ ಹಗುರವಾದ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಿದೆ. ಈ ಬುಲೆಟ್ ಪ್ರೂಫ್ ಜಾಕೆಟ್ ಅನ್ನು ಚಂಡೀಗಢದ ಟಿ ಬಿ ಆರ್ ಎಲ್ ನಲ್ಲಿ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಪ್ರಕಟಣೆ ತಿಳಿಸಿದೆ. ಅತ್ಯಾಧುನಿಕ ವಿನ್ಯಾಸ ಹೊಂದಿರುವ ಈ ಜಾಕೆಟ್, ನವೀನ ರೀತಿಯಲ್ಲಿ ಸಿದ್ಧಪಡಿಸಲಾಗಿದ್ದು, ಅದು ಹಲವು ಬಾರಿ ಗುಂಡು ತಾಗಿದರೂ ಅದನ್ನು ಎದುರಿಸುವ ಶಕ್ತಿಯನ್ನು ಹೊಂದಿದೆ. ಡಿಆರ್ಡಿಓ ದ ಈ ಸಾಧನೆಗಾಗಿ ಡಿಆರ್ಡಿಓ ಅಧ್ಯಕ್ಷರು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್


 rajesh pande