ಹೀಟ್ವೇವ್ ಎಚ್ಚರಿಕೆ ನೀಡಿದ ಇಲಾಖೆ,ಬೆಳಗ್ಗೆಯೇ ಮತದಾನ ಮಾಡುವಂತೆ ಮನವಿ
ಬೆಂಗಳೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್:ಬೆಂಗಳೂರಿನಲ್ಲಿ ಬೆಳಗ್ಗೆಯೇ ಕೆಲವೊಂದು ಕಡೆ ಉತ್ತಮ ಮತದಾನವಾಗಿದೆ. ಅದಕ್ಕೆ
ok-sabha-elections-phase-2-heatwave-cond


ಬೆಂಗಳೂರು, 26 ಏಪ್ರಿಲ್ (ಹಿ.ಸ):ಆ್ಯಂಕರ್:ಬೆಂಗಳೂರಿನಲ್ಲಿ ಬೆಳಗ್ಗೆಯೇ ಕೆಲವೊಂದು ಕಡೆ ಉತ್ತಮ ಮತದಾನವಾಗಿದೆ. ಅದಕ್ಕೆ ಕಾರಣ ಬಿಸಿಲು. ಇದರ ನಡುವೆ ಕೇಂದ್ರ ಚುನಾವಣಾ ಆಯೋಗ ಹಾಗೂ ಹವಾಮಾನ ಇಲಾಖೆ ಹೀಟ್ ವೇವ್ ನ ಎಚ್ಚರಿಕೆ ನೀಡಿದೆ.

2ನೇ ಹಂತದಲ್ಲಿ ದೇಶಾದ್ಯಂತ 88 ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. 13 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಕ್ಕೆ ಮತದಾನ ನಡೆಯಲಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಮತಗಟ್ಟೆಗೆ ಛತ್ರಿ ಹಿಡಿದು ಬಂದು ನಿಂತಿದ್ದಾರೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ ಹವಾಮಾನ ಮುನ್ಸೂಚನೆಯು ಸಾಮಾನ್ಯವಾಗಿದೆ ಎಂದು ಹೇಳಲಾಗಿದ್ದು, ಹಲವಾರು ರಾಜ್ಯಗಳಲ್ಲಿ ಶಾಖದ ಅಲೆಗಳು ಮುಂದುವರಿಯಲಿದೆ. ಭಾರತೀಯ ಚುನಾವಣಾ ಆಯೋಗ (ಇಸಿಐ) ಈ ಬಗ್ಗೆ ಮಾಹಿತಿ ನೀಡಿದ್ದು “ಹವಾಮಾನ ಪರಿಸ್ಥಿತಿಗಳು ಸಾಮಾನ್ಯ ವ್ಯಾಪ್ತಿಯಲ್ಲಿರಬಹುದು ಎಂದು ಊಹಿಸಲಾಗಿದೆ, ಮತದಾರರು ತಮ್ಮ ಮತಗಳನ್ನು ಆರಾಮವಾಗಿ ಚಲಾಯಿಸಬಹುದು. ಮತದಾರರ ಅನುಕೂಲಕ್ಕಾಗಿ, ಬಿಸಿ ವಾತಾವರಣವನ್ನು ಎದುರಿಸಲು ಸೌಲಭ್ಯಗಳನ್ನು ಒಳಗೊಂಡಂತೆ ಎಲ್ಲಾ ಮತಗಟ್ಟೆಗಳಲ್ಲಿ ಹೆಚ್ಚಿನ ವ್ಯವಸ್ಥೆಗಳನ್ನು ಮಾಡಲಾಗಿದೆ' ಎಂದು ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್


 rajesh pande