ಹವಾಮಾನ ಆಧಾರಿತ ಸೆಕೆಂಡರಿ ಕೃಷಿ ಯೋಜನೆ ಜಾರಿ
ಕೋಲಾರ, ೧೮ ಮಾರ್ಚ್ (ಹಿ.ಸ) : ಆ್ಯಂಕರ್ : ಪ್ರಾಯೋಗಿಕವಾಗಿ ರಾಜ್ಯದ ಹವಮಾನ ಆಧಾರಿತವಾಗಿ ಮಳೆ ಪ್ರಮಾಣದ ಆಧಾರದ ಮ
ಚಿಂತಾಮಣಿ ತಾಲ್ಲೂಕಿನ ಕಾಗತಿ ಕೃಷಿ ತರಬೇತಿ ಕೇಂದ್ರದಲ್ಲಿ ಸೆಕೆಂಡರಿ ಕೃಷಿ ಯೋಜನೆಯಡಿ ಒಂದು ದಿನದ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದಾ ನಸಿಮಾ ಖಾನಂ ಉದ್ಘಾಟಿಸಿದರು.


ಕೋಲಾರ, ೧೮ ಮಾರ್ಚ್ (ಹಿ.ಸ) :

ಆ್ಯಂಕರ್ : ಪ್ರಾಯೋಗಿಕವಾಗಿ ರಾಜ್ಯದ ಹವಮಾನ ಆಧಾರಿತವಾಗಿ ಮಳೆ ಪ್ರಮಾಣದ ಆಧಾರದ ಮೇಲೆ ೫ ಜಿಲ್ಲೆಗಳನ್ನು ಆಯ್ಕೆಮಾಡಿ ಅನುಷ್ಠಾನಮಾಡಲಾಗಿದೆ. ಕೃಷಿಯ ಪ್ರಾಥಮಿಕ ಉತ್ಪನ್ನಗಳನ್ನು ಸ್ಥಳೀಯ ಮಾನವ ಸಂಪನ್ಮೂಲ ಮತ್ತು ಕೌಶಲ್ಯಗಳನ್ನು ಬಳಸಿ ಮೌಲ್ಯವರ್ಧನೆ ಮಾಡುವ ಮೂಲಕ ರೈತರಿಗೆ ಹೆಚ್ಚಿನ ಆದಾಯ ಪಡೆಯಲು ಸೆಕೆಂಡರಿ ಕೃಷಿ ಸಹಾಯಕವಾಗುತ್ತದೆ ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಅತ್ಯಂತ ನಿರ್ಣಾಯಕ ಅಂಶವಾಗಿದೆ. ರೈತಉತ್ಪಾದಕರ ಸಂಸ್ಥೆಗಳಿಗೆ ಸ್ವ-ಸಹಾಯ ಗುಂಪು ಸಂಘ ಸಂಸ್ಥೆಗಳಿಗೆ ಸೆಕೆಂಡರಿ ಕೃಷಿ ಚಟುವಟಿಕೆ ಕೈಗೊಳ್ಳಲು ಉತ್ತೇಜನ ನೀಡುವ ಕುರಿತು ರೈತರಿಗೆ ತಿಳಿಸಿದರು. ಸೆಕೆಂಡರಿ ಕೃಷಿ ಕರ್ನಾಟಕ ರಾಜ್ಯದ ಕೇಂದ್ರ ಬಿಂದುವಾಗಿದ್ದು, ಮುಖ್ಯಮಂತ್ರಿಗಳ ಮಾಹತ್ವಾಕಾಂಕ್ಷೆಯ ಪರಿಕಲ್ಪನೆಯಾಗಿದ್ದು, ರಾಷ್ಟ್ರದಲ್ಲೇ ಕರ್ನಾಟಕ ರಾಜ್ಯವು ಪ್ರಥಮ ಬಾರಿಗೆ ಮಾದರಿಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕಿ ಜಾವೀದಾ ನಸಿಮಾ ಖಾನಂ ತಿಳಿಸಿದರು.

ಚಿಂತಾಮಣಿ ತಾಲ್ಲೂಕಿನ ಕಾಗತಿ ಗ್ರಾಮದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಸೆಕೆಂಡರಿ ಕೃಷಿ ಯೋಜನೆಯಡಿ ಒಂದು ದಿನದ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮದ ಅಧ್ಯಕ್ಷ ವಹಿಸಿ ಮಾತನಾಡಿದರು.

ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಪಾಪಿರಡ್ಡಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಬೆಳೆ ಪದ್ಧತಿ, ಪಶು ಸಂಗೋಪನೆ, ರೇಷ್ಮೆ, ಮೀನುಗಾರಿಕೆ, ಅರಣ್ಯ ಇತ್ಯಾಧಿಗಳ ಆಧಾರದಲ್ಲಿ ವಿಭಿನ್ನ ಚಟುವಟಿಕೆಗಳಿಗೆ ಅವಕಾಶವಿದ್ದು, ಸ್ಥಳೀಯ ಅವಶ್ಯಕತೆ ಹಾಗೂ ಬೇಡಿಕೆಯನುಸಾರ ಸೂಕ್ತ ಚಟುವಟಿಕೆಗಳನ್ನು ಕೈಗೊಂಡಲ್ಲಿ ರೈತರ ಆಧಾಯವನ್ನು ಹೇಗೆ ವೃದ್ಧಿಸಬಹುದಾಗಿದೆ ಎಂದು ರೈತರಿಗೆ ವಿವರವಾಗಿ ತಿಳಿಸಿದರು.

ಕೆನರಾ ಬ್ಯಾಂಕ್ ನ ಸಂಪನ್ಮೂಲ ವ್ಯಕ್ತಿಯಾದ ವಿಜಯಕುಮಾರ್ ರವರು ಮಾತನಾಡಿ, ಎಲ್ಲಾ ವರ್ಗದ ರೈತರಿಗೆ ಕಿರು ಉದ್ಯಮವನ್ನು ಸಾಧಿಸಲು/ ಮೇಲ್ದರ್ಜೇಗೇರಿಸಲು ಅನುವಾಗುವಂತೆ ಒಟ್ಟು ಬಂಡವಾಳ ವೆಚ್ಚವು (ಉದಾ:-ಯಂತ್ರೋಪಕರಣ, ಸಂಸ್ಕರಣಾ ಉಪಕರಣಗಳು ಇತ್ಯಾದಿ), ರೂ.೪.೦೦ ಲಕ್ಷ ಮೀರದಿದ್ದಲ್ಲಿ ಅಂತಹ ಯೋಜನಾ ವರದಿಗೆ ಶೇ.೭೫% ರ ಸಹಾಯಧನ ಅಥವಾ ಗರಿಷ್ಠ ರೂ.೩.೦೦ ಲಕ್ಷ ಮೀರದಂತೆ ಚಟುವಟಿಕೆಗಳ ಅರ್ಹ ಯೋಜನಾ ಪ್ರಸ್ಥಾವನೆಗಳಿಗೆ ಜಿಲ್ಲಾ ಅನುಷ್ಠಾನ ಸಮಿತಿಯಲ್ಲಿ ಅನುಮೋದನೆ ಪಡೆದು ಕೇವಲ ಬಂಡವಾಳ ವೆಚ್ಚಕ್ಕೆ ಸೀಮಿತವಾದಂತೆ ವೈಯಕ್ತಿಕ ಫಲಾನುಭವಿಗಳಿಗೆ ಸಹಾಯಕಧನ ನೀಡುವುದರ ಬಗ್ಗೆ ತಿಳಿಸಿದರು.

ನಿವೃತ್ತ ಪ್ರೋಪೆಸರ್ ಎಂ.ವಿಜಯೇ0ದ್ರ ರವರು ಮಾತನಾಡಿ, ರೇಷ್ಮೆ ಕೃಷಿ ಚಟುವಟಿಕೆಗಳನ್ನು ಹೇಗೆ ಸೆಕೆಂಡರಿ ಕೃಷಿಯಲ್ಲಿ ಉಪಯೋಗ ಮಾಡಿಕೊಳ್ಳುವುದು ಎಂಬ ಕುರಿತು ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಚಂದ್ರ ಕುಮಾರ್, ಚಿಂತಾಮಣಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕಿ-೨ ಎಂ.ಅನುರೂಪ, ಸಹಾಯಕ ಕೃಷಿ ನಿರ್ದೇಶಕರಾದ ಡಾ. ತನ್ವೀರ್ ಅಹಮದ್, ಮಂಜುರಾಣಿ (ರೈ.ಮ), ಪುಷ್ಪ, ಹಿರಿಯ ಪಶುವೈದ್ಯಾಧಿಕಾರಿ ಅಶ್ವಿನಿ, Pಒಈಒಇ ಯೋಜನೆಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಪ್ರವೀಣ್ಕುಮಾರ್, ಕೃಷಿ ಅಧಿಕಾರಿಗಳು, ಆತ್ಮ ಸಿಬ್ಬಂದಿಗಳು, ೧೫೦ ರೈತರು ಉಪಸ್ಥಿತರಿದ್ದರು.

ಚಿತ್ರ : ಚಿಂತಾಮಣಿ ತಾಲ್ಲೂಕಿನ ಕಾಗತಿ ಕೃಷಿ ತರಬೇತಿ ಕೇಂದ್ರದಲ್ಲಿ ಸೆಕೆಂಡರಿ ಕೃಷಿ ಯೋಜನೆಯಡಿ ಒಂದು ದಿನದ ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಚಿಕ್ಕಬಳ್ಳಾಪುರ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಜಾವೀದಾ ನಸಿಮಾ ಖಾನಂ ಉದ್ಘಾಟಿಸಿದರು.


 rajesh pande