ಬುಡಕಟ್ಟು ಜನಾಂಗದವರಿಗಾಗಿ ಪಾರಂಪರಿಕ ಮತಗಟ್ಟೆ
ಕೋಲಾರ, ೨೬ ನವೆಂಬರ್ (ಹಿ.ಸ) : ಆ್ಯಂಕರ್ : ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಈ
 ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗುಂಟಪಲ್ಲಿ ಮತದಾನ ಕೇಂದ್ರವನ್ನು ಪಾರಂಪರಿಕ ಮತದಾನ ಕೇಂದ್ರವಾಗಿ ಪರಿವರ್ತನೆ ಮಾಡಲಾಗಿತ್ತು.


ಮತ ಚಲಾಯಿಸಿದ ಅಕ್ಕಿಪಿಕ್ಕಿ ಸಮುದಾಯದವರು


ಕೋಲಾರ, ೨೬ ನವೆಂಬರ್ (ಹಿ.ಸ) :

ಆ್ಯಂಕರ್ : ಎಲ್ಲರೂ ಮತದಾನದಲ್ಲಿ ಭಾಗವಹಿಸಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಆಶಯದ ಮೇರೆಗೆ ಕೋಲಾರ ಜಿಲ್ಲೆಯಲ್ಲಿ ೧೧ ಪಾರಂಪರಿಕ ಮತಗಟ್ಟೆಗಳನ್ನು ಸ್ಥಾಪಿಸಲಾಯಿತು. ಆ ಪೈಕಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಹಕ್ಕಿ ಪಿಕ್ಕಿ ಕಾಲೋನಿಯಲ್ಲಿ ಇರುವ ಬುಡಕಟ್ಟು ಸಮುದಾಯದವರು ಮತದಾನದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಲು ಗುಂಟಿಪಲ್ಲಿ ಮತಗಟ್ಟೆಯನ್ನು ಪಾರಂಪರಿಕ ಮತಗಟ್ಟೆಯನ್ನಾಗಿ ಪರಿವರ್ತಿಸಲಾಗಿತ್ತು.

ಹಕ್ಕಿ ಪಿಕ್ಕಿ ಜನಾಂಗದವರು ಸದಾ ವಲಸೆ ಹೋಗುತ್ತಿದ್ದರು. ಮತದಾನದ ದಿನದಂದು ಸಹ ವಲಸೆ ಹೋಗುತ್ತಿದ್ದರು. ಅವರೆಲ್ಲಾ ಮತದಾನದಲ್ಲಿ ಪಾಲ್ಗೊಳ್ಳಲು ಜಾಗೃತಿ ಮೂಡಿಸಲಾಗಿತ್ತು. ಅವರನ್ನು ಸೆಳೆಯಲು ಗುಂಟಿಪಲ್ಲಿ ಗ್ರಾಮದಲ್ಲಿ ಪಾರಂಪರಿಕ ಮತದಾನ ಕೇಂದ್ರವನ್ನು ತೆರೆಯಲಾಗಿತ್ತು.

ಹಕ್ಕಿ ಪಿಕ್ಕಿ ಜನಾಂಗದವರು ತಯಾರು ಮಾಡುವ ಹೂವಿನ ಹಾರಗಳಿಂದ ಮತಗಟ್ಟೆಯನ್ನು ಸಿಂಗರಿಸಲಾಗಿತ್ತು. ಹಕ್ಕಿ ಪಿಕ್ಕಿ ಕಾಲೋನಿಯ ಬುಡಕಟ್ಟು ಸಮುದಾಯದ ಮುಖಂಡ ರೆಹರ್ಬಾಬು ಮಾತನಾಡಿ ನಾವು ಸಾಮಾನ್ಯವಾಗಿ ವಲಸೆ ಹೋಗುತ್ತೇವೆ. ನಮ್ಮ ಜನಾಂಗಕ್ಕೆ ಮತದಾನ ಮಾಡಲು ಅರಿವು ಇರಲಿಲ್ಲ. ಸಂವಿಧಾನ ಮತ್ತು ಚುನಾವಣಾ ಆಯೋಗ ನಮ್ಮನ್ನು ಗುರುತಿಸಿ ಮತ ಚಲಾಯಿಸಲು ಪಾರಂಪರಿಕ ಮತಗಟ್ಟೆ ಸ್ಥಾಪನೆ ಮಾಡಿರುವುದು ಸಂತಸವಾಗಿದೆ ಎಂದರು.

ಕೋಲಾರ ಜಿಲ್ಲಾ ಸ್ಪೀಪ್ ಸಮಿತಿಯ ನೋಡಲ್ ಅಧಿಕಾರಿ ಮತದಾನದ ಶೇಕಡವಾರು ಹೆಚ್ಚು ಮಾಡಬೇಕು. ಎಲ್ಲರೂ ಪಾಲ್ಗೊಳ್ಳ ಬೇಕೆಂಬುದು ಚುನಾವಣಾ ಆಯೋಗದ ಆಶಯವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪಾರಂಪರಿಕ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಆ ಪೈಕಿ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಹಕ್ಕಿಪಿಕ್ಕಿ ಕಾಲೋನಿಯ ಬುಡಕಟ್ಟು ಸಮುದಾಯವನ್ನು ಮತದಾನದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸಲು ಪಾರಂಪರಿಕ ಮತಗಟ್ಟೆ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಚಿತ್ರಗಳು :

೧. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗುಂಟಪಲ್ಲಿ ಮತದಾನ ಕೇಂದ್ರವನ್ನು ಪಾರಂಪರಿಕ ಮತದಾನ ಕೇಂದ್ರವಾಗಿ ಪರಿವರ್ತನೆ ಮಾಡಲಾಗಿತ್ತು.

೨. ಮತ ಚಲಾಯಿಸಿದ ಹಕ್ಕಿಪಿಕ್ಕಿ ಸಮುದಾಯದವರು


 rajesh pande